ಬಳ್ಳಾರಿ –
ಸಾಮಾನ್ಯವಾಗಿ ವದಂತಿಗಳಿಗೆ ಕಿವಿ ಮಾತುಗಳಿಗೆ ನಮ್ಮಲ್ಲೇನು ಕಡಿಮೆಯಿಲ್ಲ.ಸದಾಕಾಲವೂ ನಮ್ಮ ನಡುವೆ ವದಂತಿಗಳು ಚಾಲ್ತಿ ಇದ್ದೇ ಇರುತ್ತಿದ್ದು ಸಧ್ಯ ಗಣಿನಾಡು ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ ಹಬ್ಬಿರುವ ವದಂತಿ ಯೊಂದು ಇದಕ್ಕೆ ಸಾಕ್ಷಿ.ಹೌದು ಜಿಲ್ಲೆಯಲ್ಲಿ ಒಂದು ವದಂತಿ ಹಬ್ಬಿದ್ದು, ತಾಯಿಗೆ ಮಗಳು ಹೊಸ ಸೀರೆ ಕೊಡಿಸಬೇಕು ಎನ್ನುವ ವದಂತಿಗೆ ಮಹಿಳೆಯರು ತಾಯಿಗೆ ಸೀರೆ ಕೊಡಲು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.

ಹೌದು, ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ತಾಯಿಗೆ ಮಗಳು ಸೀರೆ ಕೊಡಿಸಬೇಕು. ಸೀರೆ ಕೊಡದಿದ್ದರೆ ಕೇಡಾಗುತ್ತದೆ ಎಂಬ ವದಂತಿ ಹಿನ್ನೆಲೆ ಯಲ್ಲಿ ಹೆಣ್ಣು ಮಕ್ಕಳು ತಮ್ಮ ತಾಯಿಗೆ ಸೀರೆ ಖರೀದಿಸಲು ಮುಗಿಬಿದ್ದಿದ್ದಾರೆ. ಬಳ್ಳಾರಿಯ ಸೀರೆ ಅಂಗಡಿಗಳಲ್ಲಿ ಈಗ ಎಲ್ಲಿ ನೋಡಿದರೂ ಮಹಿಳೆ ಯರು ಸೀರೆ ಖರೀದಿಸುವ ಚಿತ್ರಣ ಸರ್ವೇ ಸಾಮಾನ್ಯವಾಗಿ ಜಿಲ್ಲೆಯಲ್ಲಿ ಕಂಡು ಬರತಾ ಇದೆ.

ಸೀರೆ ಖರೀದಿಸಿ ಮಹಿಳೆಯರು ತವರಿಗೆ ಹೋಗಿ ತಾಯಿ ಹಣೆಗೆ ಕುಂಕಮ ಇಟ್ಟು ಸೀರೆ ಕೊಟ್ಟು ಬರುತ್ತಿದ್ದಾರೆ. ಕಳೆದ ವಾರದಿಂದ ಈ ವದಂತಿ ಹಬ್ಬಿದ್ದು ಹೀಗಾಗಿ ನಾ ಮುಂದು ನೀ ಮುಂದು ಎನ್ನುತ್ತಾ ವದಂತಿಯಿಂದ ಸೀರೆ ವ್ಯಾಪಾರ ಭರ್ಜರಿ ಯಾಗಿ ನಡೆಯುತ್ತಿದೆ.

ಇದು ಕೇವಲ ಬಳ್ಳಾರಿ ಯಲ್ಲಿ ಅಷ್ಟೇ ಅಲ್ಲದೇ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಯಲ್ಲಿ ಕಂಡು ಬರುತ್ತಿದೆ.ಇದರೊಂದಿಗೆ ಇನ್ನೂ ಕೆಲವೊಂದಿಷ್ಟು ವದಂತಿಗಳು ಕೂಡಾ ಕೇಳಿ ಬರುತ್ತಿವೆ