ವಿಜಯಪುರ –
ಗ್ರಾಮ ಪಂಚಾಯತ ಅಖಾಡ ದಿನದಿಂದ ದಿನಕ್ಕೇ ರಂಗೇರುತ್ತಿದೆ.ಇನ್ನೂ ಇಲ್ಲೂ ಕೂಡಾ ಅಪರೂಪದ ಸ್ಪರ್ಧೆಗಳು ಕಂಡು ಬರುತ್ತಿದ್ದು ಹೌದು ವಿಜಯಪುರ ಜಿಲ್ಲೆಯಲ್ಲಿ ಅತ್ತೆ ಸೊಸೆ ಸ್ಪರ್ದೆ ಮಾಡಿದ್ದಾರೆ. ಗ್ರಾಮ ಪಂಚಾಯತಿಯ ಚುನಾವಣಾ ಕಣದಲ್ಲಿ ಈಗ ಅತ್ತೆ ಸೊಸೆಯರ ಗೆಲುವಿನ ಲೆಕ್ಕಾಚಾರವೇ ಈಗ ಚರ್ಚೆಯಾಗುತ್ತಿದೆ. ಗ್ರಾಮ ಪಂಚಾಯತಿ ಅಖಾಡದಲ್ಲಿ ಅತ್ತೆ ಸೊಸೆ ಒಂದೇ ವಾರ್ಡ್ ಗೆ ಎದುರು ಬದುರಾಗಿ ಎಲೆಕ್ಷನ್ ಗೆ ನಿಂತಿದ್ದಾರೆ .
ಹಾಲಿ ಅಧ್ಯಕ್ಷೆಯಾಗಿದ್ದ ಸೊಸೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ಇಳಿದ್ರೆ ಇತ್ತ ಅತ್ತೆ ಕೂಡಾ ಸೊಸೆ ವಿರುದ್ದವೇ ಅಖಾಡಕ್ಕೇ ಇಳಿದಿದ್ದಾರೆ. ಈಗಾಗಲೇ ಅತ್ತೆ ಸೊಸೆಯ ಇಬ್ಬರು ಭರ್ಜರಿಯಾಗಿ ಪ್ರಚಾರವನ್ನು ಮಾಡ್ತಾ ಇದ್ದಾರೆ.
ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮ ಪಂಚಾಯತಿಯಲ್ಲೊಂದು ಇಂಥಹ ಅಪರೂಪದ ಸ್ಪರ್ಧೆಯೊಂದು ಕಂಡು ಬಂದಿದೆ. ಲಕ್ಕುಂಡಿ ಗ್ರಾಮದ ಅತ್ತೆ ಗಂಗಮ್ಮ ರುದ್ರಗೌಡ ಪಾಟೀಲ್ ಸ್ಪರ್ಧೆ ಮಾಡಿದ್ದಾರೆ.

ಇವರ ಪ್ರತಿಸ್ಪರ್ಧಿಯಾಗಿ ಅತ್ತೆಯ ಎದುರಾಗಿ ಸೊಸೆ ನಿರ್ಮಲಾ ಬಸನಗೌಡ ಪಾಟೀಲ್ ಸ್ಪರ್ಧೆ ಮಾಡಿದ್ದಾರೆ.

ಗ್ರಾಮ ಪಂಚಾಯತಿ ಕಣದಲ್ಲಿ ಅಪರೂಪದ ಜೋಡಿ ಸ್ಪರ್ಧೆಯೊಂದು ವಿಶೇಷವಾಗಿ ಕಂಡು ಬರುತ್ತಿದೆ. ಮತ್ತೊಂದು ಬಾರಿ ಸ್ಪರ್ಧೆ ಮಾಡಿರುವ ಸೊಸೆಯ ಎದುರು ನಾನೇನು ಕಮ್ಮಿ ಎಂಬಂತೆ ವಯಸ್ಸಿನಲ್ಲೂ 72 ಆಗಿದ್ದರೂ ಅಜ್ಜಿಯೊಬ್ಬರು ಈಗ ಸೊಸೆ ವಿರುದ್ದ ಕಣಕ್ಕಿಳಿದ್ದಾರೆ.
ದೊಡ್ಡಮ್ಮನ ವಿರುದ್ಧ ಪತ್ನಿಯನ್ನು ಅಖಾಡಕ್ಕಿಳಿಸಿದ ವ್ಯಕ್ತಿ. ಇಡೀ ವಾರ್ಡ್ ಗೆ ಇವರಿಬ್ಬರೇ ಅಭ್ಯರ್ಥಿಗಳು. ಬಂದ್ರೆ ಅತ್ತೆ ಅಥವಾ ಸೊಸೆ ಸದಸ್ಯೆ ಆಗಬೇಕು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಇನ್ನೂ ಗ್ರಾಮ ಪಂಚಾಯತಿಯ ಈ ಒಂದು ಅತ್ತೆ-ಸೊಸೆ. ಅಖಾಡಲ್ಲಿ ಯಾರದ್ದಾಗುತ್ತೆ ಮೇಲುಗೈ ಎಂಬುದನ್ನು ಫಲಿತಾಂಶವೇ ಉತ್ತರ ನೀಡಲಿದ್ದು ಗೆಲುವು ಯಾರಾಗ್ತಾರೆ ಪಂಚಾಯತಿ ಸದಸ್ಯೆ ಅತ್ತೆನಾ ಅಥವಾ ಸೊಸೆನಾ ಎಂಬುದನ್ನು ಕಾದು ನೋಡಬೇಕಿದೆ