ಕೊಡಗು –
ಮಗಳೊಂದಿಗೆ PUC ಯಲ್ಲಿ ತಾಯಿ ಪಾಸ್ – ಮಗಳು ಡಿಸ್ಟಿಂಕ್ಷನ್ ತಾಯಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಹೌದು ಇಂತಹ ದೊಂದು ಪರೀಕ್ಷೆ ಫಲಿತಾಂಶ ಕ್ಕೆ ಸಾಕ್ಷಿಯಾಗಿದೆ ಕೊಡಗು ಜಿಲ್ಲೆ
ಪಿಯುಸಿ ಪರೀಕ್ಷೆಯಲ್ಲಿ ಕೊಡಗಿನ ತಾಯಿ ಮಗಳು ಉತ್ತೀರ್ಣರಾಗುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.ಕೊಡಗು ಜಿಲ್ಲೆ ಚೆಟ್ಟಳ್ಳಿಯ ತಾಯಿ ಬೇಬಿರಾಣಿ ಹಾಗೂ ಮಗಳು ರಿನಿಶಾ ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ಬರೆದ್ದಿದ್ದರು.
ಮಗಳು ರಿನಿಶಾ 600ಕ್ಕೆ 570 ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗಿದ್ರೆ.ತಾಯಿ ಬೇಬಿ ರಾಣಿ 600ಕ್ಕೆ 388 ಅಂಕ ಪಡೆದು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗಿದ್ದಾರೆ.25 ವರ್ಷಗಳ ಹಿಂದೆ ಹತ್ತನೇ ತರಗತಿಯನ್ನು ಓದಿದ್ದ ತಾಯಿ ಬೇಬಿ ರಾಣಿ ಈ ಬಾರಿ ಮಗಳ ಒತ್ತಾಯಕ್ಕೆ ಮಣಿದು ಪಿಯು ಪರೀಕ್ಷೆ ಬರೆದಿದ್ದರು.
ಬೇಬಿರಾಣಿ ಅವರು ಕನ್ನಡದಲ್ಲಿ 93, ಇಂಗ್ಲೀಷ್ 58, ಇತಿಹಾಸ 73, ಅರ್ಥಶಾಸ್ತ್ರ 35, ಸಮಾಜ ಶಾಸ್ತ್ರ 72, ರಾಜಕೀಯ ಶಾಸ್ತ್ರದಲ್ಲಿ 57 ಅಂಕ ಗಳಿಸುವ ಮೂಲಕ ಕೊಡಗಿನ ತಾಯಿ ಮಗಳು ಉತ್ತೀರ್ಣರಾಗುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಹೊರಬಿದ್ದಿದೆ. ಈ ಬಾರಿ 6 ಲಕ್ಷದ 81 ಸಾವಿರದ 79 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 5 ಲಕ್ಷದ 52 ಸಾವಿರದ 690 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೊಡಗು…..