ಸಕಲೇಶಪುರ –
SSLC ಪರೀಕ್ಷೆಯನ್ನು ಮಗನೊಂದಿಗೆ ಬರೆದ ತಾಯಿ ಮಗ ಇಬ್ಬರೂ ಈ ಬಾರಿ ಉತ್ತೀಣರಾಗಿದ್ದಾರೆ.ಹೌದು ಸಕಲೇಶಪುರ ತಾಲೂಕಿನ ಲಕ್ಷೀಂಪುರ ಗ್ರಾಮದ ಸಿ.ಎನ್.ತೀರ್ಥ ಹಾಗೂ ಅವರ ಮಗ ಬಿ.ಆರ್. ಹೇಮಾಂತ್ ಉತ್ತೀರ್ಣರಾದವರು.8ನೇ ತರಗತಿ ಯನ್ನು ಅರ್ಧಕ್ಕೆ ನಿಲ್ಲಿಸಿದ್ದ ತೀರ್ಥ ಅವರು ಬಾಳ್ಳು ಪೇಟೆ ರಂಗನಾಥ ಪ್ರೌಢಶಾಲೆಯಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದಿದ್ದರು.ಅತ್ತ ವಳಲಹಳ್ಳಿ ಶ್ರೀ ಮಲ್ಲೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿ ಬಿ.ಆರ್.ಹೇಮಾಂತ್ 562 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾನೆ.ಅದೇ ರೀತಿ ತೀರ್ಥ ಅವರು 235 ಅಂಕ ಪಡೆದಿದ್ದಾರೆ.
ತೀರ್ಥ ಅವರು ಮಗನ ಪಠ್ಯ ಪುಸ್ತಕಗಳಲ್ಲಿ ಅಭ್ಯಾಸ ನಡೆಸಿದ್ದು ಹೇಮಾಂತ್ ಕೂಡ ತಾಯಿಯ ಕಲಿಕೆಗೆ ನೆರವಾಗಿದ್ದ ಕೊರೋನ ಹಿನ್ನೆಲೆಯಲ್ಲಿ ಪರೀಕ್ಷೆ ಬರೆದ ಎಲ್ಲರೂ ಉತ್ತೀರ್ಣಗೊಳಿಸಿದ್ದರಿಂದ ತೀರ್ಥ ಅವರು ಉತ್ತೀರ್ಣರಾಗಲು ನೆರವಾಗಿದೆ.ಮಗನೂ SSLC ಕಲಿಯುತ್ತಿದ್ದರಿಂದ ನಾನು ಪರೀಕ್ಷೆ ಕಟ್ಟಿದೆ.ಅವ ನೊಂದಿಗೆ ನಾನು ಬಿಡುವಿನ ವೇಳೆ ಓದಿಕೊಳ್ಳುತ್ತಿದೆ. ನನಗೆ ತಿಳಿದಿದ್ದ ವಿಷಯಗಳ ಬಗ್ಗೆ ಚೆನ್ನಾಗಿ ಬರೆದಿದ್ದು ಪರೀಕ್ಷೆಗೆ ಹಾಜರಾದವರನ್ನೆಲ್ಲ ಉತ್ತೀರ್ಣಗೊಳಿಸಿದ್ದ. ರಿಂದ ನನಗೂ ನೆರವಾಗಿದೆ ಎಂದರು