ಧಾರವಾಡ –
ಧಾರವಾಡದ ಕೆಸಿಡಿ ಹಾಗೂ ಆರ್ ಎನ್ ಶೆಟ್ಟಿ ಮೈದಾನದಲ್ಲಿ ದಿನಾಂಕ 23-24ರ ಜನವರಿಯಂದು ಕೇಂದ್ರ ಸಚಿವರು ಪ್ರಲ್ಹಾದ ಜೋಶಿಯವರ ನೇತೃತ್ವದಲ್ಲಿ ಸಂಸದರ ಕ್ರೀಡಾ ಮಹೋತ್ಸವ ಜರುಗಲಿದ್ದು ಅದರನ್ವಯ ಇಂದು ಧಾರವಾಡದಲ್ಲಿ ಪೂರ್ವ ಭಾವಿ ಸಭೆ ಜರುಗಿತು ಈ ಒಂದು ಪೂರ್ವಭಾವಿ ಸಭೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಅವರ ನೇತೃತ್ವ ದಲ್ಲಿ ನಡೆದ ಸಭೆಯಲ್ಲಿ ಹಲವರು ಪಾಲ್ಗೊಂಡಿದ್ದರು
ಹೌದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯವರ ಕನಸಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಒಂದು ಸಂಸದರ ಕ್ರೀಡಾ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಢಯಲಿದ್ದು ಈ ಒಂದು ಹಿನ್ನೆಲೆ ಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯವರ ಆಪ್ತ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಅವರು ಸಭೆ ಮಾಡಿದರು
ಸಮಾರೋಪ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಪಾಲ್ಗೊಳ್ಳಲು ಕರೆ ನೀಡಿದರು ಇದೇ ವೇಳೆ ಕೆಲವೊಂದಿಷ್ಟು ರೂಪರೇಷೆ ಗಳನ್ನು ನೀಡಿದರು.ಬನ್ನಿ ನಾವೆಲ್ಲರೂ ಸಂತಸದಿಂದ ಪಾಲ್ಗೊಂಡು ಯಶಸ್ವಿ ಗೊಳಿಸೋಣ ಎಂದು ಕರೆ ನೀಡಿದರು
ಸುದ್ದಿ ಸಂತೆ ನ್ಯೂಸ್ ಧಾರವಾಡ……



