ನನ್ನ ಪುಸ್ತಕ ಹಾಳಾಗಿವೆ ಸಹಾಯ ಮಾಡಿ ವಿದ್ಯಾರ್ಥಿನಿಯ ಅಳಲು ಬದುಕು ಕಸಿದುಕೊಂಡ ಮಳೆರಾಯ…..

Suddi Sante Desk

ಗದಗ

ಮಳೆರಾಯನ ಅಬ್ಬರಕ್ಕೆ ವಿದ್ಯಾರ್ಥಿ ಯೊಬ್ಬಳು ತನ್ನ ಪುಸ್ತಕ ಗಳನ್ನು ಕಳೆದುಕೊಂಡು ಕಣ್ಣೀರಾಕಿದ ಘಟನೆ ಗದಗ ನಲ್ಲಿ ಕಂಡು ಬಂದಿದೆ‌.ಹೌದು ಕಡು ಬಡತನದಲ್ಲಿ ಹುಟ್ಟಿದ ಸೊಮೀಯಾ ಅಂಡೆವಾಲ ಎಂಬ ವಿದ್ಯಾರ್ಥಿನಿ ತನ್ನ ಪುಸ್ತಕ ಹಾಳಾಗಿರುವುದನ್ನು ನೋಡಿ ಕಣ್ಣೀರಿಟ್ಟಿ ದ್ದಾಳೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಪ್ರಮಾಣ ದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಇದರಿಂದಾಗಿ ವಿದ್ಯಾರ್ಥಿ ನಿಯೊಬ್ಬಳ ಪುಸ್ತಕ ಗಳು ಹಾಳಾಗಿವೆ.

ವಿದ್ಯಾರ್ಥಿಗಳು ಓದುವ ಪುಸ್ತಕಗಳಿಗೂ ಹಾನಿಯಾಗಿವೆ. ಹಾಳಾದ ಪುಸ್ತಕ ನೋಡಿ ವಿದ್ಯಾರ್ಥಿನಿಯೊಬ್ಬಳು ಕಣ್ಣೀರು ಹಾಕುತ್ತಿದ್ದ ದೃಶ್ಯ ಗದಗದ ಬೆಟಗೇರಿಯ ಮಂಜುನಾಥ ನಗರದಲ್ಲಿ ಕಂಡುಬಂತು.ಹಾಳಾದ ಪುಸ್ತಕ ನೋಡಿ ಕಣ್ಣೀರು ಹಾಕುತ್ತಿದ್ದಾಳೆ ವಿದ್ಯಾರ್ಥಿ ನಿ ಕಡು ಬಡತನದಲ್ಲಿ ಹುಟ್ಟಿದ ಸೊಮೀಯಾ ಅಂಡೆವಾಲ ಎಂಬಾಕೆ ಮಂಜು ನಾಥ ನಗರದ ನಂಬರ್ 4ರ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.ಈಕೆ ಬಡವಳಾ ದರೂ ಓದಿನಲ್ಲಿ ಜಾಣೆ.ಈಕೆಗೆ ಶಾಲೆಯ ಶಿಕ್ಷಕರು ಓದಲು, ಬರೆಯಲು ಪುಸ್ತಕಗಳನ್ನು ಕೊಡಿಸಿದ್ದರು.ಕಷ್ಟಪಟ್ಟು ವಿದ್ಯಾ ಭ್ಯಾಸ ಮಾಡುತ್ತಿದ್ದಳು.ಆದರೆ ಜಡಿ ಮಳೆ ಆಕೆಯ ಕನಸು ಗಳಿಗೀಗ ತಣ್ಣೀರೆರಚಿದೆ.

ಮಳೆಯಿಂದಾಗಿ ಸೊಮೀಯಾಳ ಬ್ಯಾಗ್ ನಲ್ಲಿದ್ದ ಪುಸ್ತಕ ಗಳು ಸಂಪೂರ್ಣ ಹಾಳಾಗಿದ್ದು ಕಣ್ಣೀರು ಹಾಕುತ್ತಲೇ ಬಿಸಿಲಿನಲ್ಲಿ ಒಣಗಿಸುತ್ತಿದ್ದಾಳೆ.ನನಗೆ ಯಾರಾದರೂ ಪುಸ್ತಕಗಳನ್ನು ಕೊಡಿಸಿ ಅನ್ನೋದು ಆಕೆಯ ಮನವಿ. ಸೊಮೀಯಾಗೆ ತಾಯಿಯಿಲ್ಲ.ಅಜ್ಜಿಯ ಜೊತೆ ಪುಟ್ಟ ಮನೆಯಲ್ಲಿ ಈಕೆಯ ವಾಸ.ಬಡತನದಲ್ಲಿ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯುವ ಕನಸು ಕಾಣುತ್ತಿರುವ ಪುಟಾಣಿಗೆ ಮಳೆಯಿಂದ ಶಿಕ್ಷಣಕ್ಕೆ ಕೊಂಚ ಅಡ್ಡಿಯಾಗಿದೆ. ನೊಂದ ವಿದ್ಯಾರ್ಥಿನಿಗೆ ಸಹೃದಯರು ಸಹಾಯ ಮಾಡಬ ಹುದು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.