ವಿಜಯಪುರ –
ಸಧ್ಯ ರಾಜ್ಯಾದ್ಯಂತ OPS ಗಾಗಿ ದೊಡ್ಡ ದೊಡ್ಡ ಪ್ರಮಾಣದಲ್ಲಿ ಹೋರಾಟ ಗಳು ನಡೆಯುತ್ತಿದ್ದು ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ಮಹಾ ಸಂಕಲ್ಪ ಹೋರಾಟ ನಡೆಯುತ್ತಿದೆ ಈ ಒಂದು ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎನ್ ಪಿಎಸ್ ನೌಕರರು ಹೋರಾಟಕ್ಕೆ ಸಿದ್ದರಾಗುತ್ತಿದ್ದು ಇದರ ನಡುವೆ ನನ್ನ ದೇಣಿಗೆ ನೂರು ಭವಿಷ್ಯದ ಭದ್ರತೆಯ ಸೂರಿ ಗಾಗಿ ಎಂಬ ಸಂದೇಶವೊಂದು ವೈರಲ್ ಆಗಿದೆ.
14.11.2022 ರಂದು ಬೆಳಿಗ್ಗೆ 10.00 ಗಂಟೆ ಯಿಂದ ಮದ್ಯಾಹ್ನ 1.00 ಗಂಟೆಯವರೆಗೆ ರಾಜ್ಯ ಸಂಘದ ಡಿಸೆಂಬರ್ 19ರ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಪೂರಕ ಬೆಂಬಲವಾಗಿ PHONE PAY ಮೂಲಕ 100/- ಹಣ ದೇಣಿಗೆ ನೀಡುವ ಕಾರ್ಯಕ್ರಮ ನನ್ನ ದೇಣಿಗೆ ನೂರು ಭವಿಷ್ಯದ ಭದ್ರತೆಯ ಸೂರು ವಿಶೇಷ ದೇಣಿಗೆ ಅಭಿಯಾ ನವನ್ನು ಯಶಸ್ವಿಗೊಳಿಸೋಣ ಎಂಬ ಸಂದೇಶ ವೊಂದನ್ನು ರವಾನೆ ಮಾಡಲಾಗಿದೆ.
ಎಲ್ಲಾ ತಾಲೂಕುಗಳ KSGNPSEA ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು ವಲಯ ಸಂಚಾಲಕರು ಹಾಗೂ ವಿವಿಧ ಸಂಘಟನೆಗಳಿಗೆ ಆಯ್ಕೆಯಾದ NPS ರಾಯಭಾರಿಗಳು ಸೇರಿ ಈಗಾಗಲೇ ರಾಜ್ಯ ಸಂಘದಿಂದ ಪಡೆದುಕೊಂಡ ಕರಪತ್ರಗಳನ್ನು ನಮ್ಮೆಲ್ಲ NPS ನೌಕರರಿಗೆ ಮತ್ತು OPS ನೌಕರ ಬಂಧುಗಳಿಗೆ ಶಾಲೆ ಮತ್ತು ಕಚೇರಿ ಹಂತಕ್ಕೆ ತಲುಪಿಸುತ್ತಿದ್ದು
ನವೆಂಬರ್ 14 ರಂದು ವಿಜಯನಗರ ಜಿಲ್ಲೆಯ ಸಮಸ್ತ NPS/OPS ನೌಕರ ಬಂಧುಗಳು ಸದರಿ ಕ್ಯೂಆರ್ ಕೋಡನ್ನು ಏಕಕಾಲಕ್ಕೆ ಸ್ಕ್ಯಾನ್ ಮಾಡುವ ಮೂಲಕ ರಾಜ್ಯ ಸಂಘಕ್ಕೆ ದೇಣಿಗೆ ನೀಡೋಣ ಎಂದು ಕರೆ ನೀಡಲಾಗಿದೆ.ಮಾದರಿ ವಿಶೇಷ ದೇಣಿಗೆ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎನ್ನಲಾಗಿದೆ
ಡಿಸೆಂಬರ್ 19ರ ಮಾಡು ಇಲ್ಲವೇ ಮಡಿ ಅನಿರ್ದಿಷ್ಟ ಅವಧಿ ಹೋರಾಟಕ್ಕೆ ರಾಜ್ಯ ಸಂಘ ಟನೆಗೆ ಆರ್ಥಿಕ ಬಲ ನೀಡೋಣ-ಬೆಂಬಲ ನೀಡೋಣ.ಅತೀ ಹೆಚ್ಚು ದೇಣಿಗೆಯನ್ನು ನಮ್ಮ ರಾಜ್ಯ ಸಂಘಕ್ಕೆ ಮಾಡು ಇಲ್ಲವೇ ಮಡಿ ಹೋರಾಟದ ಬೆಂಬಲ ರೂಪಕವಾಗಿ ನಮ್ಮ ಜಿಲ್ಲೆ ಯಿಂದ ದಿನಾಂಕ 14.11.2022 ರ ಮಕ್ಕಳ ದಿನಾಚರಣೆಯ ಶುಭ ಸಂದರ್ಭದಲ್ಲಿ ಕಳುಹಿಸೋಣ
ರಾಜ್ಯ ಪರಿಷತ್ ಸದಸ್ಯರು, ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸರ್ವ ಪದಾ ಧಿಕಾರಿಗಳು, NPS ರಾಯಭಾರಿಗಳು, ಜಿಲ್ಲಾ ಘಟಕ ವಿಜಯಪುರ*
ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸರ್ವ ಪದಾಧಿಕಾರಿಗಳು, ವಲಯ ಸಂಚಾಲಕರು ಎಲ್ಲಾ ತಾಲೂಕು ಘಟಕಗಳು ವಿಜಯಪುರ KSGNPSEA ವಿಜಯನಗರ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಸಂಘಕ್ಕೆ ವಿಶೇಷ ದೇಣಿಗೆ ಅಭಿಯಾನ
ವರದಿ ವಾಟ್ಸ್ ಆಪ್ ಗ್ರೂಪ್ ಕೃಪೆ……