ಹುಬ್ಬಳ್ಳಿಯಲ್ಲಿ ನಾಗದೇವತಾ ಕ್ಷೇಮಾಭಿವೃದ್ದಿ ಸಂಘದಿಂದ ಸಡಗರ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ – ವಿಷ್ಟು ಹಬೀಬ ನೇತ್ರತ್ವದಲ್ಲಿ ನಡೆಯಿತು ಅರ್ಥಪೂರ್ಣ ಕಾರ್ಯಕ್ರಮಗಳು……ಉಪಮೇಯರ್,ಪಾಲಿಕೆಯ ಸದಸ್ಯರಿಗೆ ಸಾಥ್ ನೀಡಿದ ನಿವಾಸಿಗಳು…..

Suddi Sante Desk
ಹುಬ್ಬಳ್ಳಿಯಲ್ಲಿ ನಾಗದೇವತಾ ಕ್ಷೇಮಾಭಿವೃದ್ದಿ ಸಂಘದಿಂದ ಸಡಗರ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ – ವಿಷ್ಟು ಹಬೀಬ ನೇತ್ರತ್ವದಲ್ಲಿ ನಡೆಯಿತು ಅರ್ಥಪೂರ್ಣ ಕಾರ್ಯಕ್ರಮಗಳು……ಉಪಮೇಯರ್,ಪಾಲಿಕೆಯ ಸದಸ್ಯರಿಗೆ ಸಾಥ್ ನೀಡಿದ ನಿವಾಸಿಗಳು…..

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ನಾಗದೇವತಾ ಕ್ಷೇಮಾಭಿವೃದ್ದಿ ಸಂಘದಿಂದ ಸಡಗರ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ – ವಿಷ್ಟು ಹಬೀಬ ನೇತ್ರತ್ವದಲ್ಲಿ ನಡೆಯಿತು ಅರ್ಥಪೂರ್ಣ ಕಾರ್ಯಕ್ರಮಗಳು….. ಉಪಮೇಯರ್, ಪಾಲಿಕೆಯ ಸದಸ್ಯರಿಗೆ ಸಾಥ್ ನೀಡಿದ ನಿವಾಸಿಗಳು…..

ನಾಗರ ಪಂಚಮಿ ಹಬ್ಬದ ಆಚರಣೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಶೇಷವಾಗಿ ಕಂಡು ಬಂದಿತು.ಹೌದು ನಗರದ ತುಂಬೆಲ್ಲಾ ನಾಗರ ಪಂಚಮಿಯನ್ನು ವಿಶೇಷವಾಗಿ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು ಇದೇ ವೇಳೆ ನಗರದ ವಿಶ್ವೇಶ್ವರ ನಗರ,ಶಾಂತಿ ಕಾಲೋನಿ ಮತ್ತು ಆದರ್ಶ ನಗರ ನಿವಾಸಿಗಳು ನಾಗದೇವತಾ ಕ್ಷೇಮಾಭಿವೃದ್ದಿ ಸಂಘ ದಿಂದ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಣೆ ಮಾಡಿದರು.

ಬದಲಾದ ಜನಜೀವನ ವ್ಯವಸ್ಥೆಯ ನಡುವೆ ನಗರ ದಲ್ಲಿನ ನಿವಾಸಿಗಳು ಸೇರಿಕೊಂಡು ಈ ಒಂದು ಹಬ್ಬ ವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. ನಾಗದೇವತಾ ಮಂದಿರದಲ್ಲಿ ಸಾಮೂಹಿಕವಾಗಿ ಈ ಒಂದು ನಾಗರ ಪಂಚಮಿಯನ್ನು ಆಚಸಿದ್ದು ಕಂಡು ಬಂದಿತು.ಇನ್ನೂ ಹಬ್ಬದ ಹಿನ್ನಲೆಯಲ್ಲಿ ದೇವಾಲಯ ದಲ್ಲಿ ವಿಶೇಷವಾದ ಪೂಜಿ ಪುನಸ್ಕಾರ ದೊಂದಿಗೆ ನಾಗಪ್ಪನಿಗೆ ಹಾಲನ್ನು ಹಾಕಲಾಯಿತು.

ಮೂರು ಬಡಾವಣೆಯ ನಿವಾಸಿಗಳು ಸಾಮೂಹಿಕವಾಗಿ ನಾಗದೇವತಾ ದೇವಸ್ಥಾನದಲ್ಲಿ ಹಾಲು ಏರೆದರು ಉಪ ಮೇಯರ್ ಸಂತೋಷ ಚಹ್ವಾನ್,ಪಾಲಿಕೆಯ ಸದಸ್ಯ. ರಾದ ಸೀಮಾ ಮೊಗಲಿಶೆಟ್ಟರ್,ಸಿದ್ದು ಮೊಗಲಿ ಶೆಟ್ಟರ್ ಕೂಡಾ ಪಾಲ್ಗೊಂಡು ಪಂಚಮಿ ಹಬ್ಬದ ಆಚರಣೆಗೆ ಸಾಥ್ ನೀಡಿದರು.

ಇವರೊಂದಿಗೆ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ವಿಷ್ಟು ಹಬೀಬ,ಅಂಬರಾಯ ಕೊಟ್ಟರಗಿ, ವಿಜಯ ಕುಮಾರ್,ವಿರೇಶ ಕೊಟ್ಟರಗಿ,ಸುರೇಶ ಪೂಜಾರಿ, ಸುನೀಲ್,ಮಂಜು,ವೀಣಾ ಹಬೀಬ,ವೀಣಾ ಶಿಬಾರಗಟ್ಟಿ,ಲಕ್ಷ್ಮೀ ಕೊಟ್ಟರಗಿ,ಜಯಶ್ರೀ ಅಥಣಿ, ಅಪೂರ್ವಾ ಅಥಣಿ,ಪ್ರೀಯಾ ಅಥಣಿ,ಪಾರ್ವತಿ ಯಾವಗಲ್, ಸೇರಿದಂತೆ ಹಲವರು ಉಪಸ್ಥಿತರಿದ್ದರು ಇದೇ ವೇಳೆ ಅನ್ನ ಪ್ರಸಾದವನ್ನು ಕೂಡಾ ಮಾಡಲಾಗಿತ್ತು

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.