ಚಿಕ್ಕಬಳ್ಳಾಪುರ –
ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಎರಡು ದಿನಗಳ ಕಾಲ ಸೋನೆ ಮಳೆಯ ಪ್ರಭಾವ ಚಿಕ್ಕಬಳ್ಳಾಪುರ ಜಿಲ್ಲೆ ಯಲ್ಲಿ ಹೆಚ್ಚಾಗಿರುವುದರಿಂದ ಮಕ್ಕಳು ವ್ಯವಸ್ಥಿತವಾಗಿ ಶಾಲೆಗೆ ಬರುವುದಕ್ಕೆ ಹಾಗೂ ಹೋಗುವುದಕ್ಕೆ ಬಹಳ ತೊಂದರೆಯಾಗಿರುವುದರಿಂದ ಜಿಲ್ಲಾ ಮಟ್ಟದ ಜಿಲ್ಲಾಡಳಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲಾ ಕ್ಷೇತ್ರ ಸಿಬ್ಬಂದಿ ತಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿನ ಶಾಲಾ ಮಕ್ಕಳ ನ್ನು ಸುಸ್ಥಿತಿಯಲ್ಲಿ ಇರುವ ದೃಷ್ಟಿಯಿಂದ ಕೆಲವು ಕಡೆ ತರಗತಿ ಕೊಠಡಿಗಳಲ್ಲಿ ಕೂರಿಸಲು ವ್ಯವಸ್ಥೆ ಸರಿ ಇಲ್ಲದಿರು ವುದರಿಂದ
ಮಕ್ಕಳ ಹಾಗೂ ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿ ಯಿಂದ ರಜೆ ನೀಡಬೇಕೆಂದು ಕರ್ನಾಟಕ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿಕ್ಕಬಳ್ಳಾ ಪುರ ಜಿಲ್ಲಾ ಘಟಕ ಕೋರಿದೆ.ಘಟಕದ ಪರವಾಗಿ R. ನಾರಾಯಣ ಸ್ವಾಮಿ ಚಿಂತಾಮಣಿ ಜಿಲ್ಲಾಧ್ಯಕ್ಷರು M.R ಸುಬ್ಬಾ ರೆಡ್ಡಿ ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣ ಶಿಕ್ಷಕರ ಸಂಘ ಚಿಕ್ಕಬಳ್ಳಾಪುರ ಜಿಲ್ಲೆ ಒತ್ತಾಯ ಮಾಡಿದ್ದಾರೆ.