ಹುಬ್ಬಳ್ಳಿ –
ಎರಡು ಮೂರು ದಿನಗಳ ಹಿಂದೆಯಷ್ಟೇ ಬೈರದೇವರಕೊಪ್ಪದಲ್ಲಿನ ಲೋಟಸ್ ಬಾರ್ ಕಳ್ಳತನ ಪ್ರಕರಣವನ್ನು ನವನಗರ ಪೊಲೀಸರು ಬೇಧಿಸಿದ್ದಾರೆ.ಹೌದು ಮುಖ್ಯರಸ್ತೆಯಲ್ಲಿರುವ ಈ ಒಂದು ಬಾರ್ ನಲ್ಲಿ ಶಲ್ಟರ್ಸ್ ಮುರಿದು 20 ಸಾವಿರ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಕುರಿತಂತೆ ಎಪಿಎಮ್ ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿತ್ತು.
ಈ ಒಂದು ಪ್ರಕರಣವನ್ನು ಗಂಭೀರವಾಗಿ ತಗೆದು ಕೊಂಡ ಇನ್ಸ್ಪೇಕ್ಟರ್ ಬಾಳಪ್ಪ ಮಂಟೂರ ನೇತ್ರತ್ವ ದಲ್ಲಿನ ಟೀಮ್ ಕಾರ್ಯಾಚರಣೆ ಮಾಡಿ ಎರಡು ದಿನಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧನ ಮಾಡಿದ್ದಾರೆ.ಹಸನ್ ಕಾಸೀಮ್ ಸಾಬ್ ಬೇಗ ಸೆಂಟ್ರಿಂಗ್ ಕೆಲಸವನ್ನು ಮಾಡುತ್ತಿದ್ದ ಹುಬ್ಬಳ್ಳಿಯ ರೇಣುಕಾನಗರದ ನಿಯಾಸಿಯಾದ ಇವನನ್ನು ಪೊಲೀಸರು ಸಿಸಿ ಟಿವಿ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಮಾಡಿದ್ದಾರೆ.
ಪೊಲೀಸ್ ಆಯುಕ್ತರ ಮತ್ತು ಇತರೆ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಬಾಳಪ್ಪ ಮಂಟೂರ ಇವರ ನೇತ್ರತ್ವದಲ್ಲಿ ನಡೆದ ಈ ಒಂದು ಕಾರ್ಯಾಚರಣೆಯಲ್ಲಿ ಎಎಸ್ಐ ಬಿ ಕೆ ನೀರಲಗಿ,ಜಿ ಟಿ ಕರಿಗಾರ,ಪೊಲೀಸ್ ಸಿಬ್ಬಂದಿ ಗಳಾದ ಪಿ ಎಸ್ ಕುಂದಗೋಳ,ಬಿ ಪಿ ಧುಮಾಳ, ಎನ್ ಎಂ ದಿಡ್ಡಿ,ಪಿ ಎಸ್ ಚಲವಾದಿ,ಸಿ ವೈ ಬಕ್ಕಸದ,ಎಂ ಎಂ ತಳಗೇರಿ,ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯಿಂದ 7000 ಸಾವಿರ ರೂಪಾಯಿ ನಗದು ಹಣವನ್ನು ವಶಪಡಿಸಿಕೊಂಡಿದ್ದು ಯಶಶ್ವಿ ಕಾರ್ಯಾಚರಣೆ ಮಾಡಿದ ಟೀಮ್ ಗೆ ಪೊಲೀಸ್ ಆಯುಕ್ತರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಸೂಕ್ತವಾದ ಬಹುಮಾನವನ್ನು ಘೋಷಣೆ ಮಾಡಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.