“ನೀನಾದಾ ಮ್ಯೂಸಿಕ್‌ ವರ್ಲ್ಡ್‌” ಲೋಕಾರ್ಪಣೆ

Suddi Sante Desk

ಬೆಳಗಾವಿ –

ಉತ್ತರ ಕರ್ನಾಟಕ ಭಾಗದ ಸಿನಿಮಾ ಪ್ರೀಯರು, ಸಂಗೀತ ಪ್ರೀಯರು ಹಾಗೂ ಕಲಾವಿದರ ಬಹು ದಿನಗಳ ಬೇಡಿಕೆಯನ್ನ ಈಡೇರಿಸುವಲ್ಲಿ ಬೆಳಗಾವಿಯ ಈ ಮೀಡಿಯಾ ಜಂಕ್ಷನ್ ಸಂಸ್ಥೆ ಯಶಸ್ವಿಯಾಗಿದೆ.

ಈಗಾಗಲೇ ಬಿಗ್ ನ್ಯೂಸ್ ಕನ್ನಡ ಸುದ್ದಿವಾಹಿನಿ ಹಾಗೂ ನ್ಯೂಸ್ 90 ಕರ್ನಾಟಕ ಸುದ್ದಿವಾಹಿನಿಗಳ ಮೂಲಕ ರಾಜ್ಯ, ದೇಶ, ವಿದೇಶಗಳಲ್ಲಿ ಮನೆ ಮಾತಾಗಿದೆ. ಈ ಭಾಗದ ಜನತ ಒತ್ತಾಸೆ ಮೇರೆಗೆ ಬೆಳಗಾವಿ ಮೀಡಿಯಾ ಜಂಕ್ಷನ್‌ ಸಂಸ್ಥೆ ಇಂದು “ನೀನಾದಾ ಮ್ಯೂಸಿಕ್‌ ವರ್ಲ್ಡ್‌” ಲೋಕಾರ್ಪಣೆ ಗೊಳಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ನೀನಾದ ಮ್ಯೂಸಿಕ್ ವರ್ಲ್ಡ್ ಸಂಸ್ಥೆಯನ್ನ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಟೊಳ್ಳಿ, ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ, ಬಿಜೆಪಿ ಮುಖಂಡ ಕಿರಣ ಜಾಧವ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಚಲನಚಿತ್ರ ಗೀತೆ, ಹಿನ್ನೆಲೆ ಸಂಗೀತ, ಜನಪದ ಗೀತೆ, ಅಲ್ಬಮ್ ಸಾಂಗ್ಸ್, ಮೂವೀ ವಾಯ್ಸ್ ಡಬ್ಬಿಂಗ್, ಕರೋಕೆ ಸಿಂಗಿಂಗ್ ಸೇರಿದಂತೆ ಹತ್ತಾರು ಸೌಲಭ್ಯಗಳು ಇನ್ಮುಂದೆ ಬೆಳಗಾವಿಯಲ್ಲಿಯೇ ಸಿಗಲಿದೆ.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಿಶೇಷ ರೆಕಾರ್ಡಿಂಗ್ ಸ್ಟುಡಿಯೋ ಇದಾಗಿದ್ದು ಈ ಮೂಲಕ ಈ ಭಾಗದ ಜನರ ಬೆಂಗಳೂರು ಅವಲಂಬನೆ ತಪ್ಪಿದಂತಾಗಿದೆ.ಈ ಒಂದು ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಚಂದ್ರು ಶ್ರೀರಾಮಡು, ಸಂತೋಷ ಶ್ರೀರಾಮಡು,ಲಕ್ಷ್ಮಣ,ಸೇರಿದಂತೆ ಸಂಸ್ಥೆಯ ಸದಸ್ಯರು ಕುಟುಂಬದ ಸದಸ್ಯರು ಪಾಲ್ಗೊಂಡು ಶುಭಹಾರೈಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.