ನೆಲಮಂಗಲ –
ಶಿಕ್ಷಕರ ಸಂಘಟನೆಗಳು ಕೇವಲ ಶಿಕ್ಷಕರ ಬೇಕು ಬೇಡಿಕೆಗಳ ಸಲುವಾಗಿ ಕೆಲಸ ಮಾಡದೇ ಸಮಾಜದ ಹಿತಕ್ಕಾಗಿ ಕೆಲಸ ಮಾಡಬೇಕು.ಸಮಾಜದ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಈ ನಾಡಿನ ಶಿಕ್ಷಕರ ಸಂಘಟ ನೆಗಳಲ್ಲಿ ಪ್ರಮುಖವಾದವು ಎಂದು ಅಶೋಕ ಸಜ್ಜನ ಹೇಳಿದರು.
ಇವರ ನೇತ್ರತ್ವದ ಗ್ರಾಮೀಣ ಶಿಕ್ಷಕರ ಸಂಘ ಹಾಗೂ ಡಾ, ಲತಾ ಮುಳ್ಳೂರ ನೇತ್ರತ್ವದನ ಸಾವಿತ್ರಿ ಬಾ ಪುಲೆ ಶಿಕ್ಷಕಿಯರ ಸಂಘದವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ನೆಲಮಂಗಲದ ಗ್ರಾಮೀಣ ಶಿಕ್ಷಕರ ಸಂಘದವರು ಇಂದು ಒಳ್ಳೇಯ ಕೆಲಸವನ್ನು ಮಾಡಿದರು.
ಹೌದು ಕರ್ನಾಟಕ ಸರ್ಕಾರಿ ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪ್ರಯತ್ನ ಮತ್ತು ಸಹಭಾಗಿತ್ವದೊಂದಿಗೆ ನಿತ್ಯಾ ಗಾರ್ಮೆಂಟ್ಸ್ ಮತ್ತು ನಿತ್ಯಾ ಹೆಲ್ತ್ ಕೇರ್ ನೆಲಮಂ ಗಲ ಹಾಗೂ ಕರುನಾಡ ವಿಜಯ ಸೇನೆ ಬೆಂಗಳೂರು ಇವರ ಸಹಯೋಗದಲ್ಲಿ ತಾಲ್ಲೂಕಿನ ಸಮಸ್ತ ಶಿಕ್ಷಕ ರಿಗೆ ಬಿಇಓ, ಬಿ.ಆರ್.ಸಿ ಕಛೇರಿ ಸಿಬ್ಬಂದಿಯವರಿಗೆ 2 ಸಾವಿರ N-95 ಮಾಸ್ಕ್ ಹಾಗೂ 5 ಸಾವಿರ ಸರ್ಜಿ ಕಲ್ ಮಾಸ್ಕ್ ಸೇರಿದಂತೆ ಒಟ್ಟು 7 ಸಾವಿರ ಮಾಸ್ಕ್ ಗಳನ್ನು ಬಿಇಓ ಕೆ.ಸಿ.ರಮೇಶ್ ಹಾಗೂ ಡಿಡಿಪಿಐ ಶಿವಕುಮಾರ್ ಸಮ್ಮುಖದಲ್ಲಿ ಸಾಂಕೇತಿಕವಾಗಿ ವಿತರಿಸಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕರುನಾಡ ವಿಜಯಸೇನೆ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್,ನಿತ್ಯಾ ಗಾರ್ಮೆಂ ಟ್ಸ್ ವ್ಯವಸ್ಥಾಪಕರಾದ ಆರ್.ಕುಮಾರ್, ಆರ್. ಸಚ್ಚಿದಾನಂದ, ಕ.ವಿ.ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಬಿ. ಮೋಹನ್ ಕುಮಾರ್ ವಾಸುದೇವ್,ಗ್ರಾ.ಪ್ರಾ.ಶಾ.ಶಿ.ಸಂ ಅಧ್ಯಕ್ಷ ಎಂ. ಆರ್.ಮಲ್ಲಿಕಾರ್ಜುನ್,ಕಾರ್ಯದರ್ಶಿ ಹೆಚ್. ಆರ್.ಸತೀಶ್, ಸಹ ಕಾರ್ಯದರ್ಶಿ ರವಿ.ಜಿ, ಮುರಳಿ ಬಿ.ರಮೇಶ್, ರಾಮಚಂದ್ರಯ್ಯ,ಪ್ರಾ.ಶಾ.ಶಿ.ಸಂ ಮಾಜಿ ಅಧ್ಯಕ್ಷ ಜಿ.ವಿ.ಕುಮಾರ್,ಬಿ.ಶಿವಕುಮಾರ್, ಪರಮೇಶ್, ಸ.ನೌ.ಸಂ ಜಿಲ್ಲಾ ಉಪಾಧ್ಯಕ್ಷ ಕೆ.ಎನ್.ನಾಗೇಶ್, ವಿ.ಇ. ನೌ.ಸ.ಸಂ ದೇವರಾಜ್, ಸೌಭಾಗ್ಯ, ಯೋಗಾನಂದ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಇನ್ನೂ ಈ ಒಂದು ಮಹಾನ್ ಕಾರ್ಯಕ್ಕೆ ಗ್ರಾಮೀಣ ಶಿಕ್ಷಕರ ಸಂಘದ ಎಲ್ ಐ ಲಕ್ಕಮ್ಮನವರ, ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ,ಆರ್ ನಾರಾಯಣಸ್ವಾಮಿ ಚಿಂತಾಮಣಿ,ಪವಾಡೆಪ್ಪ,ಚಂದ್ರಶೇಖರ್ ಶೆಟ್ರು, ಸೇರಿದಂತೆ ಹಲವರು ಅಭಿನಂದಿಸಿದ್ದಾರೆ.