ಬೆಂಗಳೂರು –
ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನ ಹೌದು ಈ ಬಾರಿ ಏಕರೂಪದ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿ ಸಿದ್ಧಪಡಿಸಲಾ ಗಿದೆ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಏಕರೂಪದ ಶೈಕ್ಷಣಿಕ ಮಾರ್ಗಸೂಚಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಮೇ 29 ರಿಂದ ಅಕ್ಟೋಬರ್ 7 ರವರಗೆ ಈ ಬಾರಿ ಮೊದಲ ಶೈಕ್ಷಣಿಕ ಅಧಿವೇಶನ ಮತ್ತು ಅಕ್ಟೋ ಬರ್ 25, 2023 ರಿಂದ ಏಪ್ರಿಲ್ 10, 2024 ಎರಡನೇ ಶೈಕ್ಷಣಿಕ ಅಧಿವೇಶನ ಇರಲಿದೆ. ಅಕ್ಟೋ ಬರ್ 8 ರಿಂದ ಅಕ್ಟೋಬರ್ 24 ರವರೆಗೆ ಮಧ್ಯಂ ತರ ರಜೆ ಇರಲಿದೆ.2024ರ ಏಪ್ರಿಲ್ 11 ರಿಂದ ಮೇ 28 ರ ವರೆಗೆ ಬೇಸಿಗೆ ರಜೆ ಇರಲಿದೆ ಎಂದು ಶೈಕ್ಷಣಿಕ ವೇಳಾಪಟ್ಟಿಯಲ್ಲಿ ನಮೂದಿಸಲಾಗಿದೆ.
ರಾಜ್ಯದ ಎಲ್ಲಾ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹತ್ತು ನಿಮಿಷ ಗಳ ಕಾಲ ಧ್ಯಾನ ಮತ್ತು ನೈತಿಕ ಶಿಕ್ಷಣ ನೀಡುವ ಕುರಿತು ಕರ್ನಾಟಕ ಸರಕಾರ ನಡವಳಿಯನ್ನು ಇತ್ತೀಚೆಗೆ ಪ್ರಕಟಿಸಿದೆ.ಇದಕ್ಕಾಗಿ ಶೈಕ್ಷಣಿಕ ಕ್ಷೇತ್ರ ದಲ್ಲಿ ಅನುಭವ ಇರುವ ತಜ್ಞರಿಂದ ವರದಿ ಪಡೆ ಯುವ ನಿಟ್ಟಿನಲ್ಲಿ ಶಿಕ್ಷಣ ತಜ್ಞರಾದ ಡಾ. ಗುರು ರಾಜ ಕರಜಗಿ ಅಧ್ಯಕ್ಷತೆಯಲ್ಲಿ ಐವರು ಸದಸ್ಯ ರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಸರಕಾರ ಆದೇಶ ಹೊರಡಿಸಿತ್ತು.
ವಿದ್ಯಾರ್ಥಿಗಳಲ್ಲಿ ಬೌದ್ಧಿಕ, ಮಾನಸಿಕ ಹಾಗೂ ಆಧ್ಯಾತ್ಮಕ ಗುರಿಗಳನ್ನು ಹುಟ್ಟುಹಾಕಲು ಇದ ರಿಂದ ಸಹಕಾರಿಯಾಗುವುದರೊಂದಿಗೆ ವಿದ್ಯಾ ರ್ಥಿಗಳನ್ನು ಭವಿಷ್ಯದಲ್ಲಿ ಉತ್ತಮ ನಾಗರಿಕರ ನ್ನಾಗಿ ಮಾರ್ಪಾಡು ಮಾಡಲು ನೈತಿಕ ಶಿಕ್ಷಣವು ಸಹಕಾರಿಯಾಗುವುದರಿಂದ ನೈತಿಕ ಶಿಕ್ಷಣವನ್ನು ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿ ಸುವುದು ಸೂಕ್ತವಾಗಿರುತ್ತದೆ ಎಂದು ಸರಕಾರದ ನಡವಳಿಯಲ್ಲಿ ತಿಳಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..