ಹುಬ್ಬಳ್ಳಿ –
ಕೊವೀಡ್ ಮೂರು ವರ್ಷಗಳ ನಂತರ ರಾಜ್ಯ ದಲ್ಲಿ ಹೊಸ ವರ್ಷಾಚರಣೆ ಬಂದಿದ್ದು ಇನ್ನೇನು ಐದು ದಿನಗಳು ಕಳೆದರೆ ಹೊಸ ವರ್ಷವನ್ನು ನಾವೇಲ್ಲರೂ ಬರಮಾಡಿಕೊಳ್ಳುತ್ತಿದ್ದು ಹೀಗಿರು ವಾಗ ಈ ಒಂದು ಆಚರಣೆಗೆ ಹೊಸ ಮಾರ್ಗಸೂ ಚಿಗಳನ್ನು ಬಿಡುಗಡೆಮಾಡೊದಾಗಿಮುಖ್ಯಮಂತ್ರಿ ಹೇಳಿದ್ದಾರೆ.
ಹೊಸ ವರ್ಷಕ್ಕೆ ನೂತನ ಮಾರ್ಗಸೂಚಿಗಳನ್ನು ಬಿಡು ಗಡೆ ಮಾಡುತ್ತೇವೆ.ಅತ್ತ ವಿದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಹೊಸ ವರ್ಷಾಚರಣೆಗೆ ನೂತನ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದರು.
ಈ ಕುರಿತಂತೆ ಇಂದು ಇಲ್ಲವೆ ನಾಳೆ ಕಂದಾಯ ಸಚಿವ ಆರ್.ಅಶೋಕ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್ ನೇತ್ರತ್ವದಲ್ಲಿ ಸಭೆ ನಡೆಸಿ ಮಾರ್ಗ ಸೂಚಿಗಳನ್ನು ಪ್ರಕಟಿಸಲಿದ್ದಾರೆ ಎಂದರು.ಇನ್ನೂ ಬೂಸ್ಟರ್ ಡೋಸ್ ನೀಡಲು ತಾಲ್ಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಶಿಬಿರ ಏರ್ಪಡಿಸಬೇಕು ಆರೋಗ್ಯ ಪರಿಕರಗಳನ್ನು ಸುಸ್ಥಿತಿಯಲ್ಲಿ ಇಟ್ಟು ಕೊಂಡು ಔಷಧ ಹಾಗೂ ಲಸಿಕೆ ಕೊರತೆ ಆಗದಂತೆ ನೋಡಿಕೊಳ್ಳಬೇಕು.
ಇನ್ನೂ ಆಸ್ಪತ್ರೆಗಳಲ್ಲಿರುವ ಆಮ್ಲಜನಕ ಘಟಕ ಗಳು ತುರ್ತು ಸಂದರ್ಭದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಅವುಗಳನ್ನು ಪ್ರಾಯೋಗಿಕವಾಗಿ ಚಾಲನೆಯಲ್ಲಿಡಲು ತಿಳಿಸಲಾಗಿದೆ ಎಂದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..