1ನೇ ತರಗತಿಗೆ ಹೊಸ ನಿಯಮಗಳು – ಹೊಸ ಶೈಕ್ಷಣಿಕ ವರ್ಷದಿಂದ ಹೊಸ ನಿಯಮಗಳು ಜಾರಿಗೆ ಅನ್ವಯ…..

Suddi Sante Desk
1ನೇ ತರಗತಿಗೆ ಹೊಸ ನಿಯಮಗಳು – ಹೊಸ ಶೈಕ್ಷಣಿಕ ವರ್ಷದಿಂದ ಹೊಸ ನಿಯಮಗಳು ಜಾರಿಗೆ ಅನ್ವಯ…..

ಬೆಂಗಳೂರು

1ನೇ ತರಗತಿಗೆ ಹೊಸ ನಿಯಮಗಳು – ಹೊಸ ಶೈಕ್ಷಣಿಕ ವರ್ಷದಿಂದ ಹೊಸ ನಿಯಮಗಳು ಜಾರಿಗೆ ಅನ್ವಯ ಹೌದು

ಶಿಕ್ಷಣ ಇಲಾಖೆ ದಿನಕ್ಕೊಂದು ನಿಮಯಗಳನ್ನು ಬದಲಾವಣೆಗಳನ್ನು ತರುತ್ತಿದ್ದು ಸಧ್ಯ 1ನೇ ತರಗತಿಯ ಪ್ರವೇಶ ವಿಚಾರದಲ್ಲಿ ಮತ್ತೊಂದು ಮಹತ್ವದ ತಿದ್ದುಪಡಿಯನ್ನು ಮಾಡಿ ಬರುವ ಶೈಕ್ಷಣಿಕ ವರ್ಷದಿಂದಲೇ ಇದನ್ನು ಜಾರಿಗೆ ತರುವಂತೆ ಆದೇಶವನ್ನು ಮಾಡಲಾಗಿದೆ.

ಹೌದು ಆರ್ ಟಿ ಇ ಕಾಯಿದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರಂತ 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯ ವಾಗುವಂತೆ ಜೂನ್ 1ನೇ ತಾರೀಖಿಗೆ ಕಡ್ಡಾಯ ವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.

ಈ ಕುರಿತಂತೆ ಉಲ್ಲೇಖ-2 ರನ್ವಯ ತಿದ್ದುಪಡಿ ಆದೇಶ ಹೊರಡಿಸಿರುತ್ತದೆ.ಅದರಂತೆ ಕ್ರಮವ ಹಿಸಲು ಇಲಾಖೆಯ ಎಲ್ಲಾ ಸಂಬಂಧಿಸಿದ ಅಧಿ ಕಾರಿಗಳಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ತಿಳಿಸ ಲಾಗಿದೆ.ಕರ್ನಾಟಕ ಸರ್ಕಾರವು ಮೊದಲ ವಿದ್ಯಾರ್ಥಿಗೆ ಶಾಲಾ ಪ್ರವೇಶದ ವಯೋಮಿತಿ ಯನ್ನು ಜೂನ್ 1 ರಿಂದ 6 ವರ್ಷಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.

ಆರ್‌ಟಿಇ ಕಾಯಿದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರ ಅಡಿಯಲ್ಲಿ ಪ್ರಥಮ ದರ್ಜೆಗೆ ಪ್ರವೇಶಕ್ಕೆ ಕನಿಷ್ಠ ವಯಸ್ಸನ್ನು ನಿಗದಿಪಡಿಸಲಾಗಿದೆ.ಹಿಂದಿನ ನಿಯಮಗಳ ಪ್ರಕಾರ ಒಂದನೇ ತರಗತಿಗೆ ಸೇರ್ಪಡೆಗೆ ಐದು ವರ್ಷ ಐದು ತಿಂಗಳಾದರೆ ಸಾಕಿತ್ತು ಇದರ ಅನ್ವಯ ಹೆಚ್ಚಿನ ಮಕ್ಕಳನ್ನು ಮೂರುವರೆ ವರ್ಷಕ್ಕೆ ಎಲ್‌ಕೆಜಿಗೆ ಸೇರಿಸಲಾಗಿತ್ತು.

ಅಂಥ ಮಕ್ಕಳು ಯುಕೆಜಿ ಮುಗಿಸುವಾಗ ಐದುವರೆ ವರ್ಷ ಮಾತ್ರ ಆಗಿರುತ್ತದೆ.ಆಗ ಅವರಿಗೆ ಒಂದನೇ ತರಗತಿಗೆ ಪ್ರವೇಶ ನೀಡು ವುದಿಲ್ಲ ಎಂದಾದರೆ ಮತ್ತೆ ಯುಕೆಜಿಯಲ್ಲೇ ಮುಂದುವರಿಸಬೇಕಾ ಎಂಬ ಗಂಭೀರ ಪ್ರಶ್ನೆ ಎದುರಾಗಿತ್ತು.ಹಲವು ಶಿಕ್ಷಣ ಸಂಸ್ಥೆಗಳು ಕೂಡಾ ಇದರ ಬಗ್ಗೆ ಗಂಭೀರ ಆಕ್ಷೇಪ ಎತ್ತಿದ್ದವು.

ಮಕ್ಕಳ ಅಮೂಲ್ಯ ಒಂದು ವರ್ಷ ಹಾಳಾಗು ವುದರ ಜೊತೆಗೆ ಒಂದೇ ತರಗತಿಯಲ್ಲಿ ಎರಡು ವರ್ಷ ಕೂರಿಸುವುದು ಮಕ್ಕಳ ಮಾನಸಿಕ ಸ್ಥಿತಿಗತಿಯ ಮೇಲೂ ಪರಿಣಾಮ ಬೀರುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು ಈ ಒಂದು ಹಿನ್ನೆಲೆಯಲ್ಲಿ ಇದೀಗ ವಯೋಮಿತಿ ನಿಗದಿ ಮಾಡಲಾಗಿದ್ದು ಏನೇನಾಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.