ಬೆಂಗಳೂರು -
ಬಡತನ ರೇಖೆಗಿಂತ ಕೆಳಗಿನ ಜನರಿಗೆ ನೀಡುತ್ತಿರುವ BPL ಕಾರ್ಡ್ ಲಾಭ ಪಡೆದು ಅದೆಷ್ಟು ಮಂದಿ ರೇಷನ್ ಅಂಗಡಿ ಮುಂದೆ ನಿಂತಿರುತ್ತಾರೆ ಎನ್ನುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ. ಬೆಂಗಳೂರಿನಂಥ ನಗರಗಳಲ್ಲಿ 2-3 ಮನೆ ಬಾಡಿಗೆಗೆ ಕೊಟ್ಟವರೂ ಇದರ ಲಾಭ ಪಡೆಯುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಗಳಿವೆ.
ರೇಷನ್ ಕಾರ್ಡ್ ವಿತರಿಸುವ ಕೆಲವು ಅಂಗಡಿಗಳ ಮುಂದೆ ನಿಂತಿರುವ ದುಬಾರಿ ಬೈಕು,ಕಾರುಗಳ ಸಾಲು ನೋಡಿದರೆ, ಇದರ ಲಾಭ ನಿಜಕ್ಕೂ ಯಾರಿಗೆ ಆಗುತ್ತಿದೆ ಎನ್ನುವ ಗುಮಾನಿ ಬರುವುದು ಸಹಜ ಎನ್ನುವ ಮಾತುಗಳು ಪದೇ ಪದೇ ಕೇಳಿಬರುತ್ತಿವೆ. ಇದಾಗಲೇ ರಾಜ್ಯ ಸರ್ಕಾರ ಇದನ್ನು ಅರಿತೇ ಕೆಲ ವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳು ತ್ತಿದ್ದರೂ ಬಡವರ ಹೆಸರಿನಲ್ಲಿ ಅರ್ಹರು ಇದರ ಪ್ರಯೋಜನ ಪಡೆಯುವುದು ನಿಂತಿಲ್ಲ ಎನ್ನುವ ಮಾತುಗಳ ನಡುವೆಯೇ ಇದೀಗ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬರೆದಿರುವ ಪತ್ರ ಭಾರಿ ಸದ್ದು ಮಾಡುತ್ತಿದೆ.
ಖಾಸಗಿ ಶಾಲೆಗಳಿಗೆ ಲಕ್ಷ ಲಕ್ಷ ಫೀಸ್ ಕೊಟ್ಟು ಮಕ್ಕಳನ್ನು ಕಳುಹಿಸುವವರು ಹೇಗೆ ಬಡತನ ರೇಖೆಗಿಂತ ಕೆಳಗಿನವರಾಗಿರಲು ಸಾಧ್ಯ ಎಂದು ಪ್ರಶ್ನಿಸಿರುವ ವ್ಯಕ್ತಿಯೊಬ್ಬರು, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದರೆ, ಅಂಥವರ BPL ಕಾರ್ಡ್‌ಗಳನ್ನು ರದ್ದುಗೊಳಿಸುವಂತೆ ಪತ್ರ ಬರೆದಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೊಗರನಗರದ ಯುವಕರೊಬ್ಬರು ಈ ಪತ್ರ ಬರೆದಿದ್ದಾರೆ.
BPL ಕಾರ್ಡ್ ಪಡೆದು ದುಬಾರಿ ಶುಲ್ಕ ನೀಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುವವರ ಕಾರ್ಡ್ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಸಾಕಷ್ಟು ಸಂಖ್ಯೆಯಲ್ಲಿ ಇವೆ. ನಿಜವಾಗಿಯೂ ಬಡವರಾದವರು ಮಾತ್ರ ವಲ್ಲದೇಇನ್ನೂ ಕೆಲವರು ಸರ್ಕಾರಿ ಶಾಲೆಗಳಲ್ಲಿ ಓದಿಯೇ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆದವರು ಇದ್ದಾರೆ. ರ್ಯಾಂಕ್ ಪಟ್ಟಿಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳೂ ಮುಂದೆ ಇರುವುದು ಪ್ರತಿವರ್ಷವೂ ಕಾಣಸಿಗುತ್ತದೆ. ಹಾಗಿರುವಾಗ, ಬಡತನದ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಪಡೆದು, ಲಕ್ಷ ಲಕ್ಷ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸುವ ಪಾಲಕರು, ನಿಜಕ್ಕೂ ಬಿಪಿಎಲ್ ಕಾರ್ಡ್ಗೆ ಯೋಗ್ಯರೇ ಎನ್ನುವುದು ಈ ಪತ್ರದ ತಾತ್ಪರ್ಯವಾಗಿದೆ.
ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವು ಪೋಷಕರು ಬಡವರಾಗಿದ್ದರೂ, ಮಕ್ಕಳು ಖಾಸಗಿ ಶಾಲೆಯಲ್ಲಿ ಕಲಿತರೆ ಒಳ್ಳೆಯ ಭವಿಷ್ಯ ಇದೆ ಎಂದು ಹೊಟ್ಟೆ ಬಟ್ಟೆ ಕಟ್ಟಿಯಾದರೂ ಫೀಸ್ ಕೊಡುತ್ತಾರೆ. ತಮ್ಮಂತೆಯೇ ಮಕ್ಕಳು ಆಗಬಾರದು ಎನ್ನುವುದು ಅವರ ಆಸೆಯಾಗಿರುತ್ತದೆ. ಆದ್ದರಿಂದ ಖಾಸಗಿ ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಈ ರೀತಿ ಆದೇಶ ಹೊರಡಿಸುವುದು ಸರಿಯಲ್ಲ ಎನ್ನುತ್ತಿದ್ದರೆ, ಹಲವರು ಈ ಪತ್ರಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸುವಂತೆಯೂ ಹೇಳುತ್ತಿದ್ದಾರೆ. ಈ ಪತ್ರದಲ್ಲಿ ಕೂಡ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೇಕು ಎಂದು ಕೋರಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....