LIVE TV LocalCrimeNationalInternationalPoliticsEducationTechnologyEntertainmentSportsFeature
State News

ವರ್ಗಾವಣೆ ಗಾಗಿ ಹೋರಾಟದ ಹಾದಿ ಹಿಡಿದ ಶಿಕ್ಷಕರು.....ಶಿಕ್ಷಣ ಸಚಿವರ ಭೇಟಿ ಗೆ ನಿರ್ಧಾರ.....

ಬೆಂಗಳೂರು -

ಶಿಕ್ಷಕರ ವರ್ಗಾವಣೆಗಾಗಿ ಅ.6ರಂದು ಶಿಕ್ಷಣ ಸಚಿವರಿಗೆ ಮನವಿ ನೀಡಲು ರಾಜ್ಯದ ಶಿಕ್ಷಕರು ನಿರ್ಧಾರ ಮಾಡಿದ್ದಾರೆ ಹೌದು ವರ್ಗಾವಣೆ ಆಗುತ್ತದೆ ಆಗುತ್ತದೆ ಎಂದುಕೊಂಡು ಈವರೆಗೆ ಕಾದು ಕಾದು ಸುಸ್ತಾದ ರಾಜ್ಯದ ಶಿಕ್ಷಕರು ಸಧ್ಯ ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೆ ಆಗ್ರಹಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ ಮಾಡಲು ಶಿಕ್ಷಕರ ನಿರ್ಧಾರ ಕೈಗೊಂಡಿದ್ದಾರೆ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಶೀಘ್ರವಾಗಿ ಆರಂಭಿಸುವಂತೆ ಆಗ್ರಹಿಸಿ ಶಿಕ್ಷಕರು ಸಂಘಟಿತ ಹೋರಾಟಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 6ರಂದು ಬೆಳಗ್ಗೆ 9 ಗಂಟೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ವರ್ಗಾವಣೆ ಸಂಬಂಧ ಮನವಿ ಪತ್ರ ಸಲ್ಲಿಸಲು ಶಿಕ್ಷಕರು ನಿರ್ಧರಿಸಿದ್ದಾರೆ.
ಬಹುದಿನಗಳಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕುರಿತು ನಿರೀಕ್ಷೆ ಹೊಂದಿರುವ ಶಿಕ್ಷಕರು, ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ನೇರವಾಗಿ ತರಲು ಮುಂದಾಗಿದ್ದಾರೆ.

news_1791126241_0_360.webp

ವರ್ಗಾವಣೆ ಪ್ರಕ್ರಿಯೆ ಆರಂಭಿಸುವ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಶಿಕ್ಷಕರ ಪ್ರಮುಖ ಒತ್ತಾಯವಾಗಿದೆ.ಈ ಹಿನ್ನೆಲೆಯಲ್ಲಿ ಶಿಕ್ಷಕರ ಗ್ರೂಪ್ ನಲ್ಲಿ ಎಲ್ಲ ಶಿಕ್ಷಕರು ಅಕ್ಟೋಬರ್ 6ರಂದು ಬೆಳಗ್ಗೆ 9 ಗಂಟೆಗೆ ನಿಗದಿತ ಸ್ಥಳಕ್ಕೆ ಆಗಮಿಸಿ ಸಚಿವ ರನ್ನು ಭೇಟಿಯಾಗಿ ಮನವಿ ಸಲ್ಲಿಸುವಂತೆ ಕರೆ ನೀಡಲಾಗಿದೆ.

“ವರ್ಗಾವಣೆಗಾಗಿ ನಾವೇ ಹೋರಾಟ ಮಾಡ ಬೇಕಾದ ಅನಿವಾರ್ಯತೆ ಬಂದಿದೆ. ಶಿಕ್ಷಕರ ಸಮಸ್ಯೆ ಗಳಿಗೆ ಸರ್ಕಾರ ಸ್ಪಂದಿಸಿ ಶೀಘ್ರವಾಗಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು” ಎಂಬ ಆಶಯವನ್ನು ಶಿಕ್ಷಕರು ವ್ಯಕ್ತಪಡಿಸಿದ್ದಾರೆ.ಶಿಕ್ಷಕರ ಈ ಮನವಿ ಮತ್ತು ಮುಂದಿನ ಹೋರಾಟಕ್ಕೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದ್ದು ಸಚಿವರು ಕೂಡಾ ಹೇಗೆ ಸ್ಪಂದಿಸುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ಶಾಲೆಯಲ್ಲಿ ಮಕ್ಕಳು ಓದುತ್ತಿದ್ದರೆ BPL ಕಾರ್ಡ್​ ರದ್ದು.....CM ಗೆ ಪತ್ರ.....ವರ್ಗಾವಣೆ ಗಾಗಿ ಹೋರಾಟದ ಹಾದಿ ಹಿಡಿದ ಶಿಕ್ಷಕರು.....ಶಿಕ್ಷಣ ಸಚಿವರ ಭೇಟಿ ಗೆ ನಿರ್ಧಾರ.....ಸರ್ಕಾರಿ ಶಾಲೆಗಳಿಗೆ ಬರಲಿದೆ ಮತ್ತೊಂದು ಹೊಸ ಯೋಜನೆ..... ಮಾಹಿತಿ ನೀಡಿದ ಶಿಕ್ಷಣ ಸಚಿವರು.....ಮಕ್ಕಳಿಲ್ಲದೆ ಖಾಲಿಯಾಗುತ್ತಿವೆ ಸರ್ಕಾರಿ ಶಾಲೆಗಳು: ಕೇವಲ 1 ಮಗುವಿನೊಂದಿಗೆ ನಡೆಯುತ್ತಿದೆ ಈ ಪ್ರಾಥಮಿಕ ಶಾಲೆ.....ರಾಜ್ಯದ ವಿದ್ಯಾರ್ಥಿ ಗಳಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ.....ಬೆಲೆ ಏರಿಕೆಯಾಗಿದೆ ನಮಗೂ ಹೆಚ್ಚು ಹಬ್ಬಕ್ಕೆ ಹಣ ಕೊಡಿ.....ರಾಜ್ಯ ಸರ್ಕಾರಿ ನೌಕರರ ಬೇಡಿಕೆ.....ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ತಲೆನೋವು ತಂದಿಟ್ಟ ಹೊಸ ಆದೇಶ.....ತಪ್ಪದರೆ ಕ್ರಮದ ಎಚ್ಚರಿಕೆ.....ಹಬ್ಬದ ಮುಂಗಡ ಹಣ ಹೆಚ್ಚಳಕ್ಕೆ ಬೇಡಿಕೆ ಇಟ್ಟ ರಾಜ್ಯ ಸರ್ಕಾರಿ ನೌಕರರು.....CM ಗೆ ಪತ್ರ ಬರೆದ ರಾಜ್ಯ ಸರ್ಕಾರಿ ನೌಕರರ ಸಂಘಟನೆ.....BLO ಗಳಿಗೆ ಮತ್ತೊಂದು ಹೊಸ ಆದೇಶ ಜವಾಬ್ದಾರಿ.....ಆತಂಕವನ್ನುಂಟು ಮಾಡಿದ ಮತ್ತೊಂದು.....ಶಾಲೆಗೆ ಲಕ್ಷ ಲಕ್ಷ ಫೀಸ್ ಕಟ್ಟಿದರೂ ಮತ್ತೆ ಟ್ಯೂಷನ್‌ಗೆ ಯಾಕೆ ಹಣ ಕೊಡಬೇಕು ಶುರುವಾಯ್ತು ಹೊಸ ಚರ್ಚೆ.....