ಶಿವಮೊಗ್ಗ -
ಚೆನ್ನಾಗಿ ಓದುವಂತೆ ಪೋಷಕರು ಬುದ್ಧಿ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ ಚೆನ್ನಾಗಿ ಓದುವಂತೆ ಪೋಷಕರು ನೀಡಿದ ಸಲಹೆಗೆ ಮನನೊಂದ ಹದಿ ನಾಲ್ಕು ವರ್ಷದ ಬಾಲಕಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ ಜಿಲ್ಲೆಯಲ್ಲಿ ವರದಿಯಾಗಿದೆ.
ಮೃತರನ್ನು ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಎಂದು ಗುರುತಿಸಲಾಗಿದೆ.ತಂದೆ ಹಾಗೂ ತಾಯಿ ಇಬ್ಬರೂ ದೇವಸ್ಥಾನದ ಪೂಜಾ ಕಾರ್ಯಗಳಿಗೆಂದು ಮನೆಯಿಂದ ಹೊರಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಏಕಾಂಗಿ ಸಮಯವನ್ನು ಬಳಸಿ ಕೊಂಡ ಬಾಲಕಿ ಈ ದುಡುಕಿನ ನಿರ್ಧಾರ ಕೈಗೊಂಡಿ ದ್ದಾಳೆ. ಪೂಜೆ ಮುಗಿಸಿ ದಂಪತಿ ವಾಪಸ್ ಮನೆಗೆ ಬಂದು ನೋಡಿದಾಗ, ಮಗಳು ನೇಣಿಗೆ ಶರಣಾಗಿ ರುವುದು ಬೆಳಕಿಗೆ ಬಂದಿದೆ.
ಮನೆಯವರು ಪದೇ ಪದೇ ಶೈಕ್ಷಣಿಕವಾಗಿ ಗಮನ ಹರಿಸುವಂತೆ ಬಾಗಿದ ಹಿನ್ನೆಲೆಯಲ್ಲಿ ತಾನು ಈ ಹೆಜ್ಜೆ ಇಡುತ್ತಿರುವುದಾಗಿ ಬಾಲಕಿ ಸ್ಥಳದಲ್ಲಿ ಡೆತ್‌ಹ್ಯಾಂಡ್ ಬರೆದಿಟ್ಟಿದ್ದಾಳೆ ಎಂದು ತಿಳಿದುಬಂದಿದೆ. ವಿದ್ಯಾಭ್ಯಾ ಸದ ನಿಟ್ಟಿನಲ್ಲಿ ಮಕ್ಕಳ ಮೇಲಾಗುವ ಮಾನಸಿಕ ಒತ್ತಡದ ಗಂಭೀರತೆಯನ್ನು ಈ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ.....