LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮೂವರು PSI ಅಮಾನತು - ಮೂವರನ್ನು ಅಮಾನತು ಮಾಡಿ ಆದೇಶ ಮಾಡಿದ SP.....

ಕಾರವಾರ -

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್‌ಐಗಳ ಪೋಸ್ಟಿಂಗ್ ಹಾಗೂ ಲಂಚದ ವ್ಯವಹಾರಕ್ಕೆ ಸಂಬಂಧಿಸಿದಂತೆ ವೈರಲ್ ಆಗಿದ್ದ ಆಡಿಯೋ ಪ್ರಕರಣವು ದೊಡ್ಡ ಸ್ಫೋಟವನ್ನೇ ಸೃಷ್ಟಿಸಿತ್ತು.ಈ ಒಂದು ಬೆಳವಣಿಗೆಯ ಬೆನ್ನಲ್ಲೇ ಮೂವರು ಪಿಎಸ್‌ಐಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಲಂಚದ ಪೋಸ್ಟಿಂಗ್ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್‌ ಗಳು ಮಾತನಾಡಿದ ಆಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳ ಪರಿಣಾಮವಾಗಿ ಎಚ್ಚೆತ್ತಿ ರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗಂಭೀರ ಆರೋಪ ಎದುರಿಸುತ್ತಿದ್ದ ಮೂರು ಮಂದಿ ಪಿಎಸ್‌ಐಗಳನ್ನು ಅಮಾನತುಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಹಳಿಯಾಳ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ (L&O) ಪಿಎಸ್‌ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್‌ಐ ಕೃಷ್ಣ ಹಾಗೂ ಈ ಹಿಂದೆ ಹಳಿಯಾಳದಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿದ್ದ ವಿನೋದ್ ರೆಡ್ಡಿ ಎಂಬುವವರು ಮಾತನಾಡಿಕೊಂ ಡಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

ಠಾಣೆಯ ಎಲ್‌ಆಂಡ್‌ಒ ಪಿಎಸ್‌ಐ ಸ್ಥಾನಕ್ಕಾಗಿ ನಡೆದ ಹಣದ ಭಾರಿ ವ್ಯವಹಾರ, ಸ್ಟೇಷನ್ ಹಪ್ತಾ ಹಾಗೂ ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾ ರಿಗಳಿಗೆ ಮುಟ್ಟಿಸಬೇಕಾದ 'ಮಂತ್ಲಿ' ಮಾಮೂಲಿ ಬಗ್ಗೆ ಈ ಮೂವರು ಪಿಎಸ್‌ಐಗಳು ಮುಕ್ತವಾಗಿ ಚರ್ಚೆ ನಡೆಸಿದ್ದರು ಈ ಆಡಿಯೋ ಸಂಭಾಷಣೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿತ್ತು.ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಮೂವರ ಮೇಲೆ ಕ್ರಮವನ್ನು ಕೈಗೊಂಡಿದ್ದಾರೆ

ಪೊಲೀಸ್ ಇಲಾಖೆಯ ಘನತೆಗೆ ಕುತ್ತು ತಂದಿರುವ ಈ ಆಡಿಯೋ ವೈರಲ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಮೂರ್ತಿ ಅವರ ನೇತೃತ್ವದಲ್ಲಿ ಸಮಗ್ರ ತನಿಖೆಗೆ ಆದೇಶಿಸಿದ್ದರು.

ಎಡಿಎಸ್ಪಿ ನೇತೃತ್ವದ ತನಿಖಾ ತಂಡವು ನಡೆಸಿದ ತನಿಖೆ ಯಲ್ಲಿ ಪಿಎಸ್‌ಐಗಳ ಅಕ್ರಮ ಮತ್ತು ಕರ್ತವ್ಯಲೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ತನಿಖಾ ವರದಿಯ ಆಧಾರದ ಮೇಲೆ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾ ಎಸ್‌ಪಿ ದೀಪನ್ ಎಂ.ಎನ್. ಅವರು, ಕರ್ತವ್ಯ ಲೋಪ ಹಾಗೂ ಇಲಾಖೆಗೆ ಕಳಂಕ ತಂದ ಹಿನ್ನೆಲೆ ಯಲ್ಲಿ ಹಳಿಯಾಳ ಪಿಎಸ್‌ಐ ಕಿರಣ್ ಪಾಟೀಲ್, ಕ್ರೈಂ ಪಿಎಸ್‌ಐ ಕೃಷ್ಣ ಹಾಗೂ ವಿನೋದ್ ರೆಡ್ಡಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿ ಸಿದ್ದಾರೆ. ಅಕ್ರಮ ಎಸಗುವ ಪೊಲೀಸ್ ಅಧಿಕಾರಿ ಗಳಿಗೆ ಈ ಕ್ರಮ ಎಚ್ಚರಿಕೆಯಾಗಲಿದೆ.

ಸುದ್ದಿ ಸಂತೆ ನ್ಯೂಸ್ ಕಾರವಾರ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧಾರವಾಡ ದಲ್ಲಿ ಭೀಕರ ಅಪಘಾತ ಮೂವರು ಸಾ.....ವು - ಡಿವೈಡರ್ ಗೆ ಡಿಕ್ಕಿಯಾದ ಕಾರು.....ಜೈಲು ಸೇರಿದ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ - 14 ದಿನ ನ್ಯಾಯಾಂಗ ಬಂಧನ ನ್ಯಾಯಾಲಯ ಆದೇಶ.....ಚೆನ್ನಾಗಿ ಓದುವಂತೆ ಹೇಳಿದ್ದು ತಪ್ಪಾ - ವಿದ್ಯಾರ್ಥಿನಿ ಮಾಡಿದ ಕೆಲಸ ನೋಡಿ.....ಹೀಗೆ ಮಾಡೊದಾ.....ಸರ್ಕಾರಿ ಅಧಿಕಾರಿಗಳು ನೌಕರರ ವಿರುದ್ಧ ಪತ್ರ ಬರೆದ ಕಾಂಗ್ರೆಸ್ ಪಕ್ಷದ Mla -  ಕಾಂಗ್ರೆಸ್ ಶಾಸಕರಿಂದಲೇ ಭ್ರಷ್ಟಾಚಾರದ ಆರೋಪ CM ಡಿಕೆಶಿಗೆ ಪತ್ರ..... ನಾಲ್ಕು ನಾಲ್ಕು ಟ್ರೀಪ್ ಡೂಟಿ ಗೆ ಮತ್ತೆ ಬಂತು Message - ನಾಲ್ಕು ನಾಲ್ಕು ಟ್ರೀಪ್ ಆಗದಿದ್ದರೂ ಮಾಡಬೇಕು.....ಹೇಗೆ ಮಾಡಬೇಕು ಹೇಳಿ DC ಯವರೇ....‌.ಚಿಗರಿ ಚಾಲಕರಿಗೆ ತಲೆನೋವಾದ ನಾಲ್ಕು ನಾಲ್ಕು ಟ್ರೀಪ್ ಡೂಟಿ..... ನಾಲ್ಕು ನಾಲ್ಕು ಟ್ರೀಪ್ ಡೂಟಿ ಗೆ ಮತ್ತೆ ಬಂತು Message - ನಾಲ್ಕು ನಾಲ್ಕು ಟ್ರೀಪ್ ಆಗದಿದ್ದರೂ ಮಾಡಬೇಕು.....ಹೇಗೆ ಮಾಡಬೇಕು ಹೇಳಿ DC ಯವರೇ....‌.ಚಿಗರಿ ಚಾಲಕರಿಗೆ ತಲೆನೋವಾದ ನಾಲ್ಕು ನಾಲ್ಕು ಟ್ರೀಪ್ ಡೂಟಿ.....2.50 ಕೋಟಿ ರೂ.ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ ಶಾಸಕ ಪ್ರಸಾದ್ ಅಬ್ಬಯ್ಯ - ಸರ್ಕಾರಿ ಶಾಲೆಗಳ ಅಭಿವೃದ್ಧಿ ಗೆ ದಿಟ್ಟ ಹೆಜ್ಜೆ ಇಟ್ಟ ಶಾಸಕರು..... ಸನ್ಮಾನ್ಯ ಶ್ರೀ CS ಷಡಕ್ಷರಿ ಯವರೇ.....ರಾಜ್ಯಾಧ್ಯಕ್ಷರಿಗೆ ಪತ್ರ ರಾಜ್ಯದ ಶಿಕ್ಷಕರು.....ಪತ್ರದಲ್ಲಿ ಶಿಕ್ಷಕರು ಬರೆದಿದ್ದು ಏನು ನೋಡಿ.....ಮೂವರು PSI ಅಮಾನತು - ಮೂವರನ್ನು ಅಮಾನತು ಮಾಡಿ ಆದೇಶ ಮಾಡಿದ SP.....ಶಿಕ್ಷಣ ಇಲಾಖೆಯ ಆಯುಕ್ತರನ್ನು ಭೇಟಿಯಾದ KSPSTA ನಿಯೋಗ - ರಾಜ್ಯದ ಸಮಸ್ತ ಶಿಕ್ಷಕರ ಸಮಸ್ಯೆ ಗಳ ಕುರಿತು ಆಯುಕ್ತ ರೊಂದಿಗೆ ಮಾತನಾಡಿ ಚರ್ಚೆ ಮಾಡಿದ KSPSTA ಸಂಘಟನೆಯ ರಾಜ್ಯಾಧ್ಯಕ್ಷರ ನೇತೃತ್ವದ ಟೀಮ್.....