LIVE TV LocalCrimeNationalInternationalPoliticsEducationTechnologyEntertainmentSportsFeature
State News

ಜೈಲು ಸೇರಿದ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ - 14 ದಿನ ನ್ಯಾಯಾಂಗ ಬಂಧನ ನ್ಯಾಯಾಲಯ ಆದೇಶ.....

ಬೆಂಗಳೂರು -

IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಮಾಡಿದೆ ಹೌದು ಕರ್ನಾಟಕ ಲೋಕಸೇವಾ ಆಯೋಗದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ಸಿಐಡಿ (CID) ಅಧಿಕಾರಿಗಳು ನ್ಯಾಯಾಧೀ ಶರ ಎದುರು ಹಾಜರುಪಡಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

ಬೆಂಗಳೂರಿನ ಕೋರಮಂಗಲದಲ್ಲಿರುವ ಎನ್‌ಜಿವಿ (NGV) ನಿವಾಸದಲ್ಲಿ 1ನೇ ಎಸಿಜೆಎಂ (ACJM) ಕೋರ್ಟ್ ನ್ಯಾಯಾಧೀಶರ ಮುಂದೆ ಜ್ಞಾನೇಂದ್ರ ಕುಮಾರ್ ಅವರನ್ನು ಹಾಜರುಪಡಿಸಲಾಯಿತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ಹೊರಡಿಸಿದ್ದಾರೆ.ಕೆಪಿಎಸ್‌ಸಿ ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಹಾಗೂ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.

ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ (ED) ಹಾಗೂ ಸಿಐಡಿ ಅಧಿಕಾರಿಗಳು ಜಂಟಿಯಾಗಿ ಕೆಪಿಎಸ್‌ಸಿ ಕಚೇರಿಯ ಮೇಲೆ ದಿಢೀರ್ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು. ಈ ದಾಳಿಯ ಬೆನ್ನಲ್ಲೇ ಅಧಿಕೃತ ತನಿಖೆಯಿಂದ ತಪ್ಪಿಸಿಕೊಳ್ಳಲು ಜ್ಞಾನೇಂದ್ರ ಕುಮಾರ್ ಏಕಾಏಕಿ ನಾಪತ್ತೆಯಾಗಿದ್ದರು.

ಹಲವು ದಿನಗಳ ಕಾಲ ತಲೆಮರೆಸಿಕೊಂಡಿದ್ದ ಜ್ಞಾನೇಂದ್ರ ಕುಮಾರ್ ಬೆಂಗಳೂರಿನ ಸಿಐಡಿ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ಲಭ್ಯವಾದ ಮಹತ್ವದ ಸಾಕ್ಷ್ಯಗಳು ಹಾಗೂ ಮಾಹಿತಿಗಳ ಆಧಾರದ ಮೇಲೆ ಅಧಿಕಾರಿ ಗಳು ಅವರನ್ನು ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ ಪ್ರಕರಣದ ಆಳವಾದ ತನಿಖೆ ಮುಂದುವರಿದಿದ್ದು, ಈ ಹಗರಣದಲ್ಲಿ ಭಾಗಿಯಾಗಿರುವ ಇನ್ನಷ್ಟು ಉನ್ನತಾಧಿಕಾರಿಗಳು ಹಾಗೂ ಮಧ್ಯವರ್ತಿಗಳ ಲಿಂಕ್ ಹೊರಬರುವ ಸಾಧ್ಯತೆಯಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧಾರವಾಡ ದಲ್ಲಿ ಭೀಕರ ಅಪಘಾತ ಮೂವರು ಸಾ.....ವು - ಡಿವೈಡರ್ ಗೆ ಡಿಕ್ಕಿಯಾದ ಕಾರು.....ಜೈಲು ಸೇರಿದ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ - 14 ದಿನ ನ್ಯಾಯಾಂಗ ಬಂಧನ ನ್ಯಾಯಾಲಯ ಆದೇಶ.....ಚೆನ್ನಾಗಿ ಓದುವಂತೆ ಹೇಳಿದ್ದು ತಪ್ಪಾ - ವಿದ್ಯಾರ್ಥಿನಿ ಮಾಡಿದ ಕೆಲಸ ನೋಡಿ.....ಹೀಗೆ ಮಾಡೊದಾ.....ಸರ್ಕಾರಿ ಅಧಿಕಾರಿಗಳು ನೌಕರರ ವಿರುದ್ಧ ಪತ್ರ ಬರೆದ ಕಾಂಗ್ರೆಸ್ ಪಕ್ಷದ Mla -  ಕಾಂಗ್ರೆಸ್ ಶಾಸಕರಿಂದಲೇ ಭ್ರಷ್ಟಾಚಾರದ ಆರೋಪ CM ಡಿಕೆಶಿಗೆ ಪತ್ರ..... ನಾಲ್ಕು ನಾಲ್ಕು ಟ್ರೀಪ್ ಡೂಟಿ ಗೆ ಮತ್ತೆ ಬಂತು Message - ನಾಲ್ಕು ನಾಲ್ಕು ಟ್ರೀಪ್ ಆಗದಿದ್ದರೂ ಮಾಡಬೇಕು.....ಹೇಗೆ ಮಾಡಬೇಕು ಹೇಳಿ DC ಯವರೇ....‌.ಚಿಗರಿ ಚಾಲಕರಿಗೆ ತಲೆನೋವಾದ ನಾಲ್ಕು ನಾಲ್ಕು ಟ್ರೀಪ್ ಡೂಟಿ..... ನಾಲ್ಕು ನಾಲ್ಕು ಟ್ರೀಪ್ ಡೂಟಿ ಗೆ ಮತ್ತೆ ಬಂತು Message - ನಾಲ್ಕು ನಾಲ್ಕು ಟ್ರೀಪ್ ಆಗದಿದ್ದರೂ ಮಾಡಬೇಕು.....ಹೇಗೆ ಮಾಡಬೇಕು ಹೇಳಿ DC ಯವರೇ....‌.ಚಿಗರಿ ಚಾಲಕರಿಗೆ ತಲೆನೋವಾದ ನಾಲ್ಕು ನಾಲ್ಕು ಟ್ರೀಪ್ ಡೂಟಿ.....2.50 ಕೋಟಿ ರೂ.ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿದ ಶಾಸಕ ಪ್ರಸಾದ್ ಅಬ್ಬಯ್ಯ - ಸರ್ಕಾರಿ ಶಾಲೆಗಳ ಅಭಿವೃದ್ಧಿ ಗೆ ದಿಟ್ಟ ಹೆಜ್ಜೆ ಇಟ್ಟ ಶಾಸಕರು..... ಸನ್ಮಾನ್ಯ ಶ್ರೀ CS ಷಡಕ್ಷರಿ ಯವರೇ.....ರಾಜ್ಯಾಧ್ಯಕ್ಷರಿಗೆ ಪತ್ರ ರಾಜ್ಯದ ಶಿಕ್ಷಕರು.....ಪತ್ರದಲ್ಲಿ ಶಿಕ್ಷಕರು ಬರೆದಿದ್ದು ಏನು ನೋಡಿ.....ಮೂವರು PSI ಅಮಾನತು - ಮೂವರನ್ನು ಅಮಾನತು ಮಾಡಿ ಆದೇಶ ಮಾಡಿದ SP.....ಶಿಕ್ಷಣ ಇಲಾಖೆಯ ಆಯುಕ್ತರನ್ನು ಭೇಟಿಯಾದ KSPSTA ನಿಯೋಗ - ರಾಜ್ಯದ ಸಮಸ್ತ ಶಿಕ್ಷಕರ ಸಮಸ್ಯೆ ಗಳ ಕುರಿತು ಆಯುಕ್ತ ರೊಂದಿಗೆ ಮಾತನಾಡಿ ಚರ್ಚೆ ಮಾಡಿದ KSPSTA ಸಂಘಟನೆಯ ರಾಜ್ಯಾಧ್ಯಕ್ಷರ ನೇತೃತ್ವದ ಟೀಮ್.....