ಕೇರಳ -
12 ದಿನಗಳಿಂದ ನಾಪತ್ತೆ ಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರು ಪತ್ತೆಯಾದ ಘಟನೆ ಕೇರಳ ದಲ್ಲಿ ನಡೆದಿದೆ ಸಧ್ಯ ಮನೆಗೆ ಶಿಕ್ಷಕಿ ಅನುಮೋಲ್ ಪುನಃ ಮರಳಿದ್ದು ಪತಿ ಕ್ಷಮೆ ಕೇಳಿದ್ದು ಇತ್ತ ಮಕ್ಕಳೊಂದಿಗೆ ಮತ್ತೆ ಒಂದಾಗಿದೆ ಕುಟುಂಬ ಕೋಝಿಕ್ಕೋಡ್ ಜಿಲ್ಲೆಯ ತೊಟ್ಟಿಲ್ಪಾಲಂನಿಂದ ನಾಪತ್ತೆಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕಿ ಕೆ. ಅನುಮೋಲ್ ಅವರು 12 ದಿನಗಳ ಬಳಿಕ ಕುಟುಂಬದೊಂದಿಗೆ ಮರಳಿದ್ದಾರೆ.
ಪಾಲಕ್ಕಾಡ್ನಲ್ಲಿ ಪತ್ತೆಯಾಗಿದ್ದ ಅನುಮೋಲ್ ಅವರನ್ನು ಕಲ್ಲಾಚಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ಈ ವೇಳೆ ತಾನು ಪೋಷಕರು ಪತಿ ಹಾಗೂ ಮಕ್ಕಳೊಂದಿಗೆ ಹೋಗಲು ಬಯಸು ವುದಾಗಿ ಅವರು ತಿಳಿಸಿದ್ದು ನ್ಯಾಯಾಲಯದ ಪ್ರಕ್ರಿಯೆಯ ಬಳಿಕ ಕುಟುಂಬದೊಂದಿಗೆ ಕಳುಹಿ ಸಲಾಗಿದೆ ತೊಟ್ಟಿಲ್ಪಾಲಂನ ಮೊಯಿಲೋಥರ ಸರ್ಕಾರಿ ಎಲ್ಪಿ ಶಾಲೆಯ ಶಿಕ್ಷಕಿಯಾಗಿರುವ ಅನುಮೋಲ್ ಅವರು ಅಕ್ಟೋಬರ್ 5ರಂದು ನಾಪತ್ತೆಯಾಗಿದ್ದರು.
ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಸುಮಾರು 12 ದಿನಗಳ ಬಳಿಕ ಪಾಲಕ್ಕಾಡ್ನ ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯ ಪುತುಶೇರಿಯಲ್ಲಿ ಅನುಮೋಲ್ ಹಾಗೂ ಅವರೊಂದಿಗೆ ಇದ್ದ ವಡಕರದ ಅಬ್ದುಲ್ ಸಮದ್ ಅವರನ್ನು ಪೊಲೀಸರು ಪತ್ತೆಹಚ್ಚಿದ್ದರು ನಂತರ ಇಬ್ಬರನ್ನೂ ಕೋಝಿಕ್ಕೋಡ್ಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.
ಅನುಮೋಲ್ ಅವರಿಗೆ ಕೌನ್ಸೆಲಿಂಗ್ ಕೂಡ ನೀಡಲಾಗಿತ್ತುಬಳಿಕ ಅವರನ್ನು ಕಲ್ಲಾಚಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಕುಟುಂಬದೊಂದಿಗೆ ತೆರಳುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು. ಅನುಮೋಲ್ ನಾಪತ್ತೆಯಾದ ಬಳಿಕ ಅವರ ಪತಿ ಹಾಗೂ ಕುಟುಂಬದವರು ಆತಂಕಗೊಂಡಿದ್ದರು.
ಅವರನ್ನು ಪತ್ತೆಹಚ್ಚಲು ಕುಟುಂಬವು ಕೇರಳ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಯನ್ನೂ ಸಲ್ಲಿಸಿತ್ತು. ಅನುಮೋಲ್ ಅವರನ್ನು ಮರಳಿ ಸ್ವೀಕರಿಸಲು ಕುಟುಂಬ ಸಿದ್ಧವಿದೆ ಎಂದು ಪೊಲೀಸರಿಗೆ ತಿಳಿಸಿತ್ತು. ಪತಿ ಸುಭಾಷ್ ಕೂಡ ಪತ್ನಿಯನ್ನು ಸ್ವೀಕರಿಸಲು ಸಿದ್ಧರಾಗಿದ್ದರು ಕುಟುಂಬ ದವರು ಹಿಂದಿನ ಘಟನೆಗಳನ್ನು ಮರೆತು ಮತ್ತೆ ಒಂದಾಗಲು ನಿರ್ಧರಿಸಿದ್ದರಿಂದ, ಪ್ರಕರಣದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪೊಲೀಸರು ಹಿಂದೆ ಸರಿದಿದ್ದಾರೆ
ಇನ್ನೂ ಅನುಮೋಲ್ ಅವರೊಂದಿಗೆ ಪತ್ತೆಯಾಗಿದ್ದ ವಡಕರದ ಅಬ್ದುಲ್ ಸಮದ್ ಅವರನ್ನು ವಡಕರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ಸಮದ್ ನಾಪತ್ತೆಯಾಗಿರುವುದಾಗಿ ಅವರ ಕುಟುಂಬವೂ ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಅವರನ್ನು ಕೂಡ ಕುಟುಂಬ ದೊಂದಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಅನುಮೋಲ್ ಅವರು ಮಕ್ಕಳನ್ನು ಬಿಟ್ಟು ತೆರಳಿದ್ದ ಹಿನ್ನೆಲೆಯಲ್ಲಿ ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ ದಾಖಲಿಸುವ ಬಗ್ಗೆಯೂ ಪೊಲೀಸರು ಆರಂಭದಲ್ಲಿ ಚಿಂತನೆ ನಡೆಸಿದ್ದರು. ಮಕ್ಕಳ ಹೇಳಿಕೆಗಳನ್ನು ಕೂಡ ದಾಖಲಿಸಲಾಗಿತ್ತು ಆದರೆ ಕುಟುಂಬವು ಅವರನ್ನು ಕ್ಷಮಿಸಿ ಸ್ವೀಕರಿಸಲು ಸಿದ್ಧವಾದ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮದ ನಿರ್ಧಾರದಿಂದ ಪೊಲೀಸರು ಹಿಂದೆ ಸರಿದಿದ್ದಾರೆ ಎಂದು ವರದಿ ತಿಳಿಸಿದೆ.
ಅನುಮೋಲ್ ಅವರ ಪತಿ ಸುಮಾರು ಹತ್ತು ವರ್ಷಗಳ ಹಿಂದೆ ಗಂಭೀರ ಯಕೃತ್ತಿನ ಕಾಯಿಲೆ ಯಿಂದ ಬಳಲುತ್ತಿದ್ದ ಪತ್ನಿಗೆ ತಮ್ಮ ಯಕೃತ್ತಿನ ಒಂದು ಭಾಗವನ್ನು ದಾನ ಮಾಡಿದ್ದರು. ಆ ಶಸ್ತ್ರಚಿಕಿತ್ಸೆಯ ಬಳಿಕ ಅನುಮೋಲ್ ಚೇತರಿಸಿಕೊಂಡು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ನಾಪತ್ತೆ ಪ್ರಕರಣಕ್ಕೆ ತೆರೆ ಬಿದ್ದಿದ್ದು, ಅವರು ಮತ್ತೆ ಕುಟುಂಬದೊಂದಿಗೆ ಸೇರಿರು ವುದು ಈ ಪ್ರಕರಣದ ಪ್ರಮುಖ ಬೆಳವಣಿಗೆಯಾಗಿದೆ.
ಸುದ್ದಿ ಸಂತೆ ನ್ಯೂಸ್ ಕೇರಳ.....