ಯಾದಗಿರಿ -
ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕ ಸೇರಿ ಮೂವರ ಮೇಲೆ ದೂರು ದಾಖಲಾದ ಘಟನೆ ಯಾದಗಿರಿ ಯಲ್ಲಿ ನಡೆದಿದೆ.ಸರ್ಕಾರಿ ನೌಕರಿ ಬಿಡು ವಂತೆ ಪತ್ನಿಗೆ ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ ಆರೋಪದಡಿ ಆಕೆಯ ಪತಿ ಶಿಕ್ಷಕ ಸೇರಿ ಮೂವರ ವಿರುದ್ಧ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸಗಿ ತಾಲ್ಲೂಕಿನ ಕುರೆಕನಾಳದ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿ ಅನಸೂಯಾ ಜಗದೀಶ ಅವರು ನೀಡಿದ ದೂರಿನ ಅನ್ವಯ ವಸತಿ ಶಾಲೆಯೊಂದರ ಶಿಕ್ಷಕನಾಗಿರುವ ಪತಿ ಜಗದೀಶ ಶಂಕ್ರಪ್ಪ, ಅತ್ತೆ ಸಾಬವ್ವ ಶಂಕ್ರಪ್ಪ ಹಾಗೂ ನಾದಿನಿ ಜಗದೇವಿ ಜುಮ್ಮಣ್ಣ ವಿರುದ್ಧ ಪ್ರಕರಣ ದಾಖಲಿಸ ಲಾಗಿದೆ.
ಕೆಲವು ವರ್ಷಗಳ ಹಿಂದೆ ಅನಸೂಯಾ ಹಾಗೂ ಜಗದೀಶ ಅವರು ಮದುವೆಯಾಗಿದ್ದರು. ಮದುವೆ ಯಾದ ಮೂರು ವರ್ಷಗಳ ನಂತರ ಜಗದೀಶ ಅವರು ವಸತಿ ಶಾಲೆಯೊಂದರ ಶಿಕ್ಷಕರಾಗಿ ನೇಮಕವಾಗಿದ್ದು ಶಿಕ್ಷಕ ನೌಕರಿ ಸಿಗುತ್ತಿದ್ದಂತೆ ಜಗದೀಶ ಅವರು ಪತ್ನಿಗೆ ಆರೋಗ್ಯ ಸಂರಕ್ಷಣಾ ಧಿಕಾರಿ ನೌಕರಿ ಬಿಡುವಂತೆ ಒತ್ತಾಯಿಸಿದರು. '
ದುಬಾರಿ ದಿನಗಳಲ್ಲಿ ಇಬ್ಬರೂ ನೌಕರಿ ಮಾಡಿದರೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ, ಉತ್ತಮ ಜೀವನ ನಡೆಸಬಹುದು' ಎಂದು ಪತ್ನಿ ಹೇಳಿದರೂ ಗಂಡ ಕೇಳಲಿಲ್ಲ. ಪತ್ನಿಗೆ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡಿ, ಜೀವ ಬೆದರಿಕೆ ಹಾಕಿದ ಆರೋಪದಡಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂದು ತನಿಖೆ ನಡೆಸಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಯಾದಗಿರಿ......