LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ....ಶಿಕ್ಷಣ ಇಲಾಖೆಯಿಂದ ಹೊಸ ಕ್ರಮ ಜಾರಿಗೆ ಸಿದ್ಧತೆ.....

ಬೆಂಗಳೂರು -

ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ ಶಿಕ್ಷಣ ಇಲಾಖೆಯಿಂದ ಹೊಸ ಕ್ರಮ ಜಾರಿಗೆ ಸಿದ್ಧತೆ ಶಿಕ್ಷಕರ ಹಾಜರಾತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಹೌದು ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಗೆ ತರುವ ವಿಚಾರ ಮುನ್ನೆಲೆಗೆ ಬಂದಿದೆ. ಶಾಲೆಗಳಲ್ಲಿ ಶಿಕ್ಷಕರ ಹಾಜರಾತಿಯನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕ ದಾಖಲಿಸುವ ವ್ಯವಸ್ಥೆಯಿಂದ ಹಾಜರಾತಿ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಶಿಕ್ಷಕರ ಕರ್ತವ್ಯದ ಮೇಲ್ವಿಚಾರಣೆಯನ್ನು ಸುಲಭಗೊಳಿಸಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ಇದೆ.

ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಯಾದಲ್ಲಿ ಶಿಕ್ಷಕರು ಶಾಲೆಗೆ ಆಗಮಿಸುವ ಮತ್ತು ನಿರ್ಗಮಿಸುವ ಸಮಯದ ದಾಖಲಾತಿ ಸೇರಿದಂತೆ ಹಾಜರಾತಿ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಬ ಹುದು ಇದರಿಂದ ಸಾಂಪ್ರದಾಯಿಕ ಹಾಜರಾತಿ ಪದ್ಧತಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಯೂ ಇದೆ.ಆದರೆ ಈ ವ್ಯವಸ್ಥೆ ಯಾವಾಗಿನಿಂದ ಜಾರಿಗೆ ಬರಲಿದೆ, ಯಾವ ತಂತ್ರಜ್ಞಾನವನ್ನು ಬಳಸಲಾಗುತ್ತದೆ ಹಾಗೂ ಶಿಕ್ಷಕರಿಗೆ ಸಂಬಂಧಿಸಿದಂತೆ ಯಾವ ಮಾರ್ಗ ಸೂಚಿಗಳನ್ನು ರೂಪಿಸಲಾಗುತ್ತದೆ ಎಂಬ ಕುರಿತು ಇಲಾಖೆಯಿಂದ ಅಧಿಕೃತ ಆದೇಶ ಬಂದ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ.

ಡಿಜಿಟಲ್ ಹಾಜರಾತಿ ವ್ಯವಸ್ಥೆಯ ಅನುಷ್ಠಾನವು ಶಿಕ್ಷಕರಿಗೆ ಅನುಕೂಲಕರವಾಗುವುದರ ಜೊತೆಗೆ ಶಾಲೆಗಳ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ನಿರೀಕ್ಷೆಯಿದ್ದು ಬರುವ ಶೈಕ್ಷಣಿಕ ವರ್ಷದಿಂದ ಜಾರಿಯಾಗುವ ನಿರೀಕ್ಷೆ ಇದೆ 

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧಾರವಾಡದ ಜಯನಗರ ಬಿಗ್ ಮಿಶ್ರಾ ಪಂಜಾಬಿ ಧಾಬಾಗೆ ಮೊದಲ ವರ್ಷದ ಸಂಭ್ರಮ.....ಗ್ರಾಹಕರಿಗೆ ಬಿಗ್ ಬಿಲಿಯನ್ ಬೆಲೆಗಳ ಧಮಾಕಾ ಆಫರ್ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ....ಶಿಕ್ಷಣ ಇಲಾಖೆಯಿಂದ ಹೊಸ ಕ್ರಮ ಜಾರಿಗೆ ಸಿದ್ಧತೆ.....ವಿದ್ಯಾರ್ಥಿಯ ತಲೆಯನ್ನೇ ವಾದ್ಯದಂತೆ ಬಾರಿಸಿದ ಶಿಕ್ಷಕ.....ಸಾಮಾಜಿಕ ಜಾಲ ತಾಣಗಳಲ್ಲಿ ಪೊಟೊ ವಿಡಿಯೋ ವೈರಲ್.....ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ಡೇ.....ಏನಾಗುತ್ತದೆ ಏನೋ.....ಶಾಲಾ ದಾಖಲೆ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಅಸ್ತು.....ಇಲಾಖೆಯ ವಿರುದ್ಧ ಗೆದ್ದ ವಿದ್ಯಾರ್ಥಿನಿ.....50 ಲಕ್ಷ ರೂ.ಗೆ ಕೀ ಉತ್ತರ ಸೇಲ್.....ಪರೀಕ್ಷಾ ಅಕ್ರಮ ಮತ್ತಷ್ಟು ಬಹಿರಂಗ.....ಶಿಕ್ಷಕ ಮಂಜುನಾಥ ಅಮಾನತು.....DC ಸೂಚನೆ ಅಮಾನತು ಮಾಡಿದ DDPI.....ಗ್ರ್ಯಾಂಡ್ ಓಪನಿಂಗ್ ಗೆ ಗೋವಾ ದಲ್ಲಿ Big Mishra ಸಿದ್ದತೆ.....ಧಾರವಾಡ ಸವಿರುಚಿ ಗೋವಾದಲ್ಲಿ.....ಅಕ್ಟೋಬರ್ 11 ಉದ್ಘಾಟನೆ ಸರ್ವರಿಗೂ ಆಮಂತ್ರಣ ನೀಡಿದ ಸಂಜಯ ಮಿಶ್ರಾ.....ಶಾಲೆಗೆ ತಡವಾಗಿ ಬಂದರೆ ಶಿಕ್ಷಕರ ವೇತನ ಕಡಿತ.....ದಿಟ್ಟ ಹೆಜ್ಜೆ ಇಟ್ಟ ಇಲಾಖೆ..... ಶಾಲೆಯಲ್ಲಿ ಶಿಕ್ಷಕರಿಗೆ ಹೊಸ ನಿಯಮ.....ಶಿಕ್ಷಕರಿಗೆ ತಂದಿಟ್ಟ ನೂರೆಂಟು ನಿಯಮಗಳು.....