ಕೋಲಾರ -
ಕೋಲಾರ ನಗರದ ಪಾಲಸಂದ್ರ ಬಡಾವಣೆ ಮತ್ತು ಆರ್.ಜಿ. ಲೇಔಟ್ ಬಡಾವಣೆಯಲ್ಲಿ ಸಾರ್ವಜನಿಕ ರಿಂದ ಅನಧಿಕೃತವಾಗಿ ಹಣ ವಸೂಲಿ ಮಾಡಿ ಸುಲಿಗೆ ಮಾಡುತ್ತಿದ್ದ ಕೋಲಾರ ನಗರಸಭೆಯ ಇಬ್ಬರು ಹೊರ ಗುತ್ತಿಗೆ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಎಫ್.ಐ.ಆರ್. ದಾಖಲು ಮಾಡುವ ವಿಚಾರ ದಲ್ಲಿ ಇವರನ್ನು ರಕ್ಷಣೆ ಮಾಡಲು ಮುಂದಾದ ಸರ್ಕಾರಿ ಶಾಲಾ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ ಹೌದು ಇಬ್ಬರು ನೌಕರರ ಮೇಲೆ ದೂರು ದಾಖಲು ಮಾಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.
ಆಪಾದಿತ ನೌಕರರ ಪರವಾಗಿ ವಕಾಲತ್ತು ವಹಿಸಿ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಒತ್ತಡ ಹೇರಲು ಮುಂದಾದ ಪ್ರಾಥಮಿಕ ಶಾಲಾ ಶಿಕ್ಷಕ ಮಂಜುನಾಥ್ ರವರನ್ನು ಅಮಾನತ್ತುಗೊಳಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಕೋಲಾರ ನಗರಸಭೆ ವ್ಯಾಪ್ತಿಯ ಪಾಲಸಂದ್ರ ಬಡಾವಣೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಮತ್ತು ಶ್ರೀನಾಥ್ ಎಂಬುವವರು, ನೀರು ಪೂರೈಕೆಗೆ ಪ್ರತಿ ತಿಂಗಳು ಪಾಲಸಂದ್ರ ಬಡಾವಣೆ ಮತ್ತು ಆರ್.ಜಿ. ಲೇಔಟ್ ಬಡಾವಣೆಯಲ್ಲಿ ಪ್ರತಿ ಮನೆಗೆ ಎರಡು ನೂರು ರೂಪಾಯಿಯಿಂದ ಐದು ನೂರು ರೂಪಾಯಿ ವರೆಗೆ ಹಣ ವಸೂಲಿ ಮಾಡುತ್ತಿದ್ದರು ಕಳೆದ ಏಳು ವರ್ಷ ಗಳಿಂದ ರಾಜಾರೋಷವಾಗಿ ಹಣ ಸುಲಿಗೆ ಮಾಡುತ್ತಿದ್ದರು.
ಹೊರ ನೌಕರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದೆಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ರವರನ್ನು ಶಿಕ್ಷಕ ಮಂಜುನಾಥ್ ಮತ್ತು ಇತರರು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಭೇಟಿ ಯಾಗಿದ್ದರು. ಅವರಿಬ್ಬರು ಅಮಾಯಕರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಜಿಲ್ಲಾಧಿಕಾರಿ ಗಳ ಮೇಲೆ ಒತ್ತಡ ಹೇರಿದರು.
ಹಾಗಾದರೆ ಲಿಖಿತವಾಗಿ ನಿಮ್ಮ ವಿಳಾಸ, ಗುರುತಿನ ಚೀಟಿಯೊಂದಿಗೆ ಮನವಿ ಬರೆದುಕೊಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರಂತೆ ಆ ಪೈಕಿ ಮಂಜುನಾಥ್ ಶಿಕ್ಷಕರಾಗಿದ್ದು, ಸರ್ಕಾರಿ ನೌಕರ ರಾಗಿದ್ದಾರೆ. ಇದರಿಂದ ಕೆರಳಿದ ಜಿಲ್ಲಾಧಿಕಾರಿಗಳು ವಾಟರ್ ಮ್ಯಾನ್ಗಳನ್ನು ರಕ್ಷಣೆ ಮಾಡಲು ನೀವು ಗ್ಯಾಂಗ್ಸ್ಟರ್ ರೀತಿಯಲ್ಲಿ ವರ್ತಿಸುತ್ತಿದ್ದೀರಿ ನಿಮ್ಮನ್ನು ಅಮಾನತ್ತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರಂತೆ ಅಲ್ಲದೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿರುವುದಾಗಿ ತಿಳಿದು ಬಂದಿದೆ.
ಹಲವು ಬಾರಿ ಅವರನ್ನು ಸಂಪರ್ಕಿಸಲು ಪ್ರಯತ್ನಿ ಸಲಾಯಿತು. ಆದರೆ ಅವರು ದೂರವಾಣಿ ಸಂಪರ್ಕಕ್ಕೆ ಲಭ್ಯವಿರಲಿಲ್ಲ. ಆದರೆ ಜಿಲ್ಲಾಧಿಕರಿಗಳುಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿವುದನ್ನು ಶಿಕ್ಷಣ ಇಲಾಖೆಯ ಮೂಲಗಳು ಖಚಿತಪಡಿಸಿವೆ.
ಸುದ್ದಿ ಸಂತೆ ನ್ಯೂಸ್ ಕೋಲಾರ.....