LIVE TV LocalCrimeNationalInternationalPoliticsEducationTechnologyEntertainmentSportsFeature
State News

50 ಲಕ್ಷ ರೂ.ಗೆ ಕೀ ಉತ್ತರ ಸೇಲ್.....ಪರೀಕ್ಷಾ ಅಕ್ರಮ ಮತ್ತಷ್ಟು ಬಹಿರಂಗ.....

ಬೆಂಗಳೂರು -

 

50 ಲಕ್ಷ ರೂ.ಗೆ ಕೀ ಉತ್ತರ ಸೇಲ್ ಸಾಹುಕಾರ್, ಗೀತಾ ಟೀಮ್ ಇನ್ನಷ್ಟು ಪರೀಕ್ಷಾ ಅಕ್ರಮ ಬಹಿರಂಗ ಹೌದು ಇದು KPSC ನಡೆಸಿದ ಪರೀಕ್ಷೆಯ ಅಕ್ರಮದ ಕಥೆ 1:3 ಮೆರಿಟ್ ಪಟ್ಟಿಯಲ್ಲೂ ಲಂಚದ ಹಣ ಲೂಟಿ ಪರೀಕ್ಷಾ ಗೌಪ್ಯ ಮಾಹಿತಿ ಸೋರಿಕೆ ಮಾಡಿದ್ದ ಜ್ಞಾನೇಂದ್ರ ಹಲವು ನೇಮಕಾತಿಯಲ್ಲೂ ಅಕ್ರಮಗಳು ಬೆಳಕಿಗೆ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದ ಇಡಿ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ. ಗೀತಾ ಅವರ ಪರೀಕ್ಷಾ ಅಕ್ರಮಗಳು ಬಟಾಬಯಲಾಗಿದೆ.ನಾನೇನು ತಪ್ಪು ಮಾಡಿಲ್ಲ, ಆಯೋಗದ ಘನತೆ ಗೌರವಕ್ಕೆ ಧಕ್ಕೆ ಬರುವ ರೀತಿ ಯಲ್ಲಿ ನಡೆದುಕೊಂಡಿಲ್ಲ' ಎಂದು ಹೇಳುತ್ತಿದ್ದ ಸಾಹುಕಾರ್, ಬಡವರ ಮಕ್ಕಳ ಮೇಲೂ ಕನಿಕರ ತೋರದೆ 20 ರಿಂದ 50 ಲಕ್ಷ ರೂ.ವರೆಗೆ ಲಂಚ ಪಡೆದಿದ್ದಾರೆ ಪರೀಕ್ಷೆಗೂ ಮುನ್ನವೇ ಕೀ ಉತ್ತರ ಮಾರಾಟ ದಂಧೆ ಶುರು ಮಾಡಿದ್ದ ಸಾಹುಕಾರ್ ಮತ್ತು ಗೀತಾ, 1:3 ಅನುಪಾತದ ಮೆರಿಟ್ ಪಟ್ಟಿಯಲ್ಲೂ ಆಯ್ಕೆಯಾಗುವ ಅಭ್ಯರ್ಥಿಗಳನ್ನು ಸಂಪರ್ಕಿಸಿ ಕೋಟಿ ಕೋಟಿ ಲಂಚ ವಸೂಲಿ ಮಾಡಿರುವುದು ಜಾರಿ ನಿರ್ದೇಶನಾಲಯದ (ಇಡಿ) ತನಿಖೆ ವೇಳೆ ಬೆಳಕಿಗೆ ಬಂದಿದೆ.

ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ರುವ ವಿವಿಧ ಎಫ್​ಐಆರ್​ಗಳ ಆಧಾರದ ಮೇಲೆ ಇಡಿ ಅಧಿಕಾರಿಗಳು, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್) ಅನ್ವಯ ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಲಭ್ಯವಾಗಿರುವ ಸಾಕ್ಷ್ಯಗಳ ಪ್ರಕಾರ, ಕೆಪಿಎಸ್​ಸಿ ನೇಮಕಾತಿ ಪ್ರಕ್ರಿಯೆಯನ್ನೇ ವ್ಯವಸ್ಥಿ ತವಾಗಿ ದುರ್ಬಳಕೆ ಮಾಡಿಕೊಂಡು ಅಭ್ಯರ್ಥಿಗಳಿಂದ ಲಂಚದ ಹಣ ಸಂಗ್ರಹಿಸುವ ಜಾಲ ಕಾರ್ಯನಿರ್ವಹಿ ಸುತ್ತಾ ಬಂದಿದೆ ಎಂದು ಇಡಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

2026ರ ಜ.9ರಂದು ನಡೆದ ಪಶುವೈದ್ಯಾಧಿಕಾರಿಗಳ 400 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಒಂದು ದಿನ ಮುನ್ನವೇ ಅಂದರೆ ಜ.8ರಂದು ಕೆಲವು ಅಭ್ಯರ್ಥಿ ಗಳಿಗೆ 80 ಪ್ರಶ್ನೆಗಳಿಗೆ ಸಂಬಂಧಿಸಿದ ಸರಿಯಾದ ಉತ್ತರಗಳನ್ನು ಒದಗಿಸಲಾಗಿತ್ತು.ಸಾಹುಕಾರ್ ಆಪ್ತೆ ಹಾಗೂ ಸದಸ್ಯೆ ಬಿ.ವಿ. ಗೀತಾ ಹಾಗೂ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರಿಂದ ಕೀ ಉತ್ತರ ಸೋರಿಕೆಯಾಗಿವೆ. ಗಂಗ್ವಾರ್​ನನ್ನು ಸಂರ್ಪಸಿದ್ದ ಗೀತಾ, 80 ಪ್ರಶ್ನೆಗಳ ಕೀ ಉತ್ತರಗಳನ್ನು ಪಡೆದುಕೊಂಡಿದ್ದರು

ಅಲ್ಲದೇ ಗೀತಾ ಸೂಚನೆಯಂತೆ ಅಭ್ಯರ್ಥಿಗಳ ಆಸನ ವ್ಯವಸ್ಥೆ ಹಾಗೂ ಹಾಲ್ ಟಿಕೆಟ್ ನೋಂದಣಿ ಸಂಖ್ಯೆ ಯಂತೆ ಪ್ರಶ್ನೆಪತ್ರಿಕೆ ಮತ್ತು ಉತ್ತರ ಕೀಗಳನ್ನು ಹಂಚಿಕೆ ಮಾಡಿದ್ದರು ಪರೀಕ್ಷೆಗೂ ಮುನ್ನ ಕೀ ಉತ್ತರ ಪಡೆದು ಕೊಂಡಿದ್ದ ಆರೋಪಿ ಗೀತಾ, ಒಬ್ಬ ಅಭ್ಯರ್ಥಿಯಿಂದ 40 ಲಕ್ಷ ರೂ.ಗಳ ಒಪ್ಪಂದದ ಪೈಕಿ ಮುಂಗಡವಾಗಿ 20 ಲಕ್ಷ ರೂ.ವರೆಗೆ ಹಣ ಪಡೆದುಕೊಂಡಿದ್ದರು. ಅದೇ ರೀತಿ ಶಿವಶಂಕರಪ್ಪ ಸಾಹುಕಾರ್ ಕೂಡ ಅದೇ ಕೀ ಉತ್ತರಗಳನ್ನು ತನಗೆ ಬೇಕಾದ ಒಬ್ಬ ಅಭ್ಯರ್ಥಿಯಿಂದ 20 ಲಕ್ಷ ರೂ.ಗೆ ಡೀಲ್ ಮುಗಿಸಿಕೊಂಡು ಮುಂಗಡ ವಾಗಿ ಮೊದಲ ಹಂತದಲ್ಲಿ 10 ಲಕ್ಷ ಪಡೆದಿದ್ದರು ಎಂದು ಇಡಿ ತಿಳಿಸಿದೆ.

ಕೀ ಉತ್ತರ ನೀಡಲು ಅಭ್ಯರ್ಥಿಗಳಿಂದ 20 ಲಕ್ಷ ರೂ.ನಿಂದ 40 ಲಕ್ಷ ರೂ.ವರೆಗೆ ಲಂಚ ಪಡೆದಿರು ವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂಬುದನ್ನು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಡೀಲ್ ಅಭ್ಯರ್ಥಿ ಗಳು ಪತ್ತೆ ಅಕ್ರಮ ಮಾರ್ಗದಲ್ಲಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗಲು ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಆರು ಅಭ್ಯರ್ಥಿಗಳನ್ನು ಇಡಿ ಗುರುತಿಸಿದೆ.

ಅದೇ ರೀತಿ ಆಯ್ಕೆಗೊಂಡ ಇತರ ಅಭ್ಯರ್ಥಿಗಳ ಕುರಿತು ತನಿಖೆ ಮುಂದುವರೆಸಿರುವ ತನಿಖಾಧಿಕಾರಿ ಗಳು, 10 ಅಭ್ಯರ್ಥಿಗಳನ್ನು ರೆಸಾರ್ಟ್, ಬೆಂಗಳೂರು ಹೊರ ವಲಯದ ವಿಲ್ಲಾಗೆ ಕರೆದುಕೊಂಡು ಹೋಗಿ ತರಬೇತಿ ನೀಡಿರುವವರ ಪತ್ತೆಗೆ ಬಲೆ ಬಿಸಿದೆ.

ಪಶುವೈದ್ಯಾಧಿಕಾರಿ ಹುದ್ದೆಗೆ ನೇಮಕ ಮಾಡಿಕೊಡಲು ಒಬ್ಬ ಅಭ್ಯರ್ಥಿಯಿಂದ 80 ಲಕ್ಷ ಮೌಲ್ಯದ ಖಾಲಿ ಚೆಕ್​ಗಳನ್ನು ಪಡೆದಿದ್ದ ಸಾಹುಕಾರ್ ಮತ್ತು ಗೀತಾ ಅವರ ನಿವಾಸದಲ್ಲಿ ಪ್ರಾಮಿಸರಿ ನೋಟ್​ಗಳು ಪತ್ತೆಯಾಗಿವೆ. ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಆಪ್ತ ಸಹಚರ ಬಸವರಾಜ್ ಕನ್ನಾಳೆ ಮೂಲಕ ಈ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿಸಿದ್ದ. ಅಭ್ಯರ್ಥಿ ಗಳಿಂದ 40 ರಿಂದ 50 ಲಕ್ಷದವರೆಗೆ ಲಂಚ ಪಡೆದಿ ರುವುದು ಇಡಿ ತನಿಖೆ ವೇಳೆ ತಿಳಿದಿದೆ.

ಸಾಹುಕಾರ್, ಗೀತಾ, ಜ್ಞಾನೇಂದ್ರ ಹಾಗೂ ಕನ್ನಾಳೆ ಪಶುವೈದ್ಯಾಧಿಕಾರಿ ಪರೀಕ್ಷೆಯಷ್ಟೇ ಅಲ್ಲದೆ, ವಿವಿಧ ಕೆಪಿಎಸ್​ಸಿ ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮ ಎಸಗಿದ್ದಾರೆ. ಗೌಪ್ಯ ಹಾಗೂ 1:3 ಮೆರಿಟ್ ಪಟ್ಟಿ ಬಿಡುಗಡೆ ವೇಳೆ ಆಯೋಗದ ನಿಯಮ ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಿದ್ದಾರೆ. ಸಾಮಾನ್ಯ ವಾಗಿ 1:3 ಅರ್ಹತಾ ಪಟ್ಟಿ ಪ್ರಕಟಿಸುವಾಗ ಅಭ್ಯರ್ಥಿ ಗಳ ವೈಯಕ್ತಿಕ ಅಂಕಗಳನ್ನು ಕೆಪಿಎಸ್​ಸಿ ಬಹಿರಂಗ ಪಡಿಸುವುದಿಲ್ಲ. ಆದರೆ ಕೆಪಿಎಸ್​ಸಿ ಸದಸ್ಯರು ಮತ್ತು ಅಧಿಕಾರಿಗಳು ಪರೀಕ್ಷಾ ನಿಯಂತ್ರಕರ ಕಚೇರಿಯಲ್ಲಿ ಗೌಪ್ಯವಾಗಿ ಇಡಬೇಕಾಗಿದ್ದ ಮೆರಿಟ್ ಮಾಹಿತಿ ಪಡೆದು ಕೊಂಡು ಯಾವ ಅಭ್ಯರ್ಥಿಗೆ ಅಂತಿಮ ಆಯ್ಕೆ ಮಾಡಬೇಕು ಎಂಬುದನ್ನು ಮಾಡುತ್ತಿದ್ದರು. ಅಂತಹ ಅಭ್ಯರ್ಥಿಗಳನ್ನು ಸಂಪರ್ಕಿಸಿ,

'ನಿಮ್ಮ ಆಯ್ಕೆ ಖಚಿತ' ಎಂದು ಭರವಸೆ ನೀಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹೀಗೆ ಕೆಪಿಎಸ್​ಸಿಯಲ್ಲಿದ್ದ ಗೌಪ್ಯ ಮೆರಿಟ್ ಮಾಹಿತಿಯನ್ನೇ ಅಕ್ರಮವಾಗಿ ಬಳಸಿಕೊಂಡು ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿದ್ದಾರೆ. ನೇಮಕಾತಿ ಹಗರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಅಧಿಕಾರಿಗಳು, ಮಧ್ಯವರ್ತಿಗಳು, ಲಂಚ ನೀಡಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಾತ್ರ ಬಯಲಾಗುವ ಸಾಧ್ಯತೆ ಇದೆ .

ಕೆಪಿಎಸ್ಸಿ ಅಕ್ರಮದ ಕುರಿತು ಸಿಐಡಿ ತನಿಖೆಯಲ್ಲಿ ಹಾಜಗೊಳಿಸಿದ್ದು, ತಪ್ಪೊಪ್ಪಿಕೊಂಡ 7 ಅಭ್ಯರ್ಥಿಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್​ಗೆ ಹಾಜರುಪಡಿಸಲಾಗಿದ್ದು ಪಶುವೈದ್ಯಾಧಿಕಾರಿ ಹುದ್ದೆಯಲ್ಲಿ ಆಯ್ಕೆಯಾಗುವ ಕುರಿತು ಮಧ್ಯವರ್ತಿಗಳ ಮೂಲಕ ಲಂಚ ನೀಡಿರುವ ಬಗ್ಗೆ ರಾಜಾ ಅಹ್ಮದ್, ಸಿದ್ಧಾರ್ಥ, ಬಸವರಾಜ್, ಸುಹೇಲ್ ಸೇರಿ ಏಳು ಅಭ್ಯರ್ಥಿಗಳು ನ್ಯಾಯಾಲ ಯದ ಮುಂದೆ ಸೆಕ್ಷನ್ 183ರ ಅಡಿ ಹೇಳಿಕೆ ನೀಡಿದ್ದಾರೆ

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಧಾರವಾಡದ ಜಯನಗರ ಬಿಗ್ ಮಿಶ್ರಾ ಪಂಜಾಬಿ ಧಾಬಾಗೆ ಮೊದಲ ವರ್ಷದ ಸಂಭ್ರಮ.....ಗ್ರಾಹಕರಿಗೆ ಬಿಗ್ ಬಿಲಿಯನ್ ಬೆಲೆಗಳ ಧಮಾಕಾ ಆಫರ್ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ....ಶಿಕ್ಷಣ ಇಲಾಖೆಯಿಂದ ಹೊಸ ಕ್ರಮ ಜಾರಿಗೆ ಸಿದ್ಧತೆ.....ವಿದ್ಯಾರ್ಥಿಯ ತಲೆಯನ್ನೇ ವಾದ್ಯದಂತೆ ಬಾರಿಸಿದ ಶಿಕ್ಷಕ.....ಸಾಮಾಜಿಕ ಜಾಲ ತಾಣಗಳಲ್ಲಿ ಪೊಟೊ ವಿಡಿಯೋ ವೈರಲ್.....ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ಡೇ.....ಏನಾಗುತ್ತದೆ ಏನೋ.....ಶಾಲಾ ದಾಖಲೆ ತಿದ್ದುಪಡಿಗೆ ಕರ್ನಾಟಕ ಹೈಕೋರ್ಟ್ ಅಸ್ತು.....ಇಲಾಖೆಯ ವಿರುದ್ಧ ಗೆದ್ದ ವಿದ್ಯಾರ್ಥಿನಿ.....50 ಲಕ್ಷ ರೂ.ಗೆ ಕೀ ಉತ್ತರ ಸೇಲ್.....ಪರೀಕ್ಷಾ ಅಕ್ರಮ ಮತ್ತಷ್ಟು ಬಹಿರಂಗ.....ಶಿಕ್ಷಕ ಮಂಜುನಾಥ ಅಮಾನತು.....DC ಸೂಚನೆ ಅಮಾನತು ಮಾಡಿದ DDPI.....ಗ್ರ್ಯಾಂಡ್ ಓಪನಿಂಗ್ ಗೆ ಗೋವಾ ದಲ್ಲಿ Big Mishra ಸಿದ್ದತೆ.....ಧಾರವಾಡ ಸವಿರುಚಿ ಗೋವಾದಲ್ಲಿ.....ಅಕ್ಟೋಬರ್ 11 ಉದ್ಘಾಟನೆ ಸರ್ವರಿಗೂ ಆಮಂತ್ರಣ ನೀಡಿದ ಸಂಜಯ ಮಿಶ್ರಾ.....ಶಾಲೆಗೆ ತಡವಾಗಿ ಬಂದರೆ ಶಿಕ್ಷಕರ ವೇತನ ಕಡಿತ.....ದಿಟ್ಟ ಹೆಜ್ಜೆ ಇಟ್ಟ ಇಲಾಖೆ..... ಶಾಲೆಯಲ್ಲಿ ಶಿಕ್ಷಕರಿಗೆ ಹೊಸ ನಿಯಮ.....ಶಿಕ್ಷಕರಿಗೆ ತಂದಿಟ್ಟ ನೂರೆಂಟು ನಿಯಮಗಳು.....