LIVE TV LocalCrimeNationalInternationalPoliticsEducationTechnologyEntertainmentSportsFeature
State News

10,000 ರಿಂದ 50,000 ರೂ ವರೆಗೆ ಹೆಚ್ಚಳವಾಗಲಿದೆ ವೇತನ - ಚುನಾವಣೆಯ ಸಮಯದಲ್ಲಿ ನೌಕರರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರದ ಪ್ಲಾನ್

ಬೆಂಗಳೂರು -

ಈಗಾಗಲೇ 6ನೇ ವೇತನ ಆಯೋಗದ ಅವಧಿ ಮುಗಿದಿದ್ದು ಹೀಗಾಗಿ ಸಧ್ಯ 7ನೇ ವೇತನ ಆಯೋಗದ ವಿಚಾರ ಕುರಿತಂತೆ ಸಧ್ಯ ಈ ಒಂದು ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು ಇನ್ನೇನು ಕೆಲ ತಿಂಗಳುಗಳಲ್ಲಿ ವರದಿಯನ್ನು ಸುಧಾಕರ್ ರಾವ್ ಅವರು ಸರ್ಕಾರಕ್ಕೆ ನೀಡ ಲಿದ್ದು ಇದರ ನಡುವೆ ಈ ಒಂದು ಮಹತ್ವದ ಬೆಳವಣಿಗೆಯ ನಡುವೆ ಬರುವ ವರ್ಷ ರಾಜ್ಯ ದಲ್ಲಿ ಸಾಮೂಹಿಕ ಚುನಾವಣೆ ಬರಲಿದ್ದು ಹೀಗಾಗಿ ಈ ಒಂದುು ಸಮಯದಲ್ಲಿ ಈ ವಿಚಾರ ವನ್ನು ಸರ್ಕಾರ  ನಿರ್ಲಕ್ಷ್ಯಿಸಿದರೆ ಎದುರಾಗಲಿದೆ ದೊಡ್ಡ ದೊಂದು ಸಮಸ್ಯೆ

ಇದರಿಂದಾಗಿ ಹೇಗಾದರು ಮಾಡಿ ವೇತನವನ್ನು ಪರಿಷ್ಕರಣೆ ಮಾಡಿ ಹೆಚ್ಚಿ,ಸಬೇಕಾದ ಅನಿವಾ ರ್ಯತೆ ರಾಜ್ಯ ಸರ್ಕಾರದ ಮುಂದೆ ಇದೆ. ವಿಶೇಷ ವಾಗಿ ಚುನಾವಣಾ ವರ್ಷದಲ್ಲಿ ನೌಕರರ ಬೇಡಿಕೆ ಯನ್ನು ನಿರ್ಲಕ್ಷಿಸದೇ ಕೂಡಲೇ ಇದನ್ನು ಸರ್ಕಾರವು ಈ ಬೃಹತ್ ಮೊತ್ತವನ್ನು ತೂಗಿಸು ವುದು ದೊಡ್ಡ ಸವಾಲಿನ  ಬೇಡಿಕೆಗೆ ಅನುಗುಣ ವಾಗಿ ವೇತನವನ್ನು ಪರಿಷ್ಕರಿಸಿ ನೌಕರರಿಗೆ ಕೇಡರ್‌ಗೆ ಅನುಗುಣವಾಗಿ 10,000 ರಿಂದ 50,000 ರೂ. ವರೆಗೆ ವೇತನ ಹೆಚ್ಚಿ,ಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ.

2017ರಲ್ಲಿ, ಆಗಿನ ರಾಜ್ಯ ಸರ್ಕಾರವು ಮಾಜಿ ಐಎಎಸ್ ಅಧಿಕಾರಿ ಎಂಆರ್ ಶ್ರೀನಿವಾಸ ಮೂರ್ತಿ ಅವರನ್ನು ಆರನೇ ವೇತನ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಮೊದಲ ವೇತನ ಆಯೋಗವನ್ನು 1966 ರಲ್ಲಿ ರಚಿಸಲಾಗಿತ್ತು. ಇನ್ನೂ ಇದೇ ವೇಳೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಕ್ಷರಿ ಅವರು ಸುದ್ದಿ ಸಂತೆ ಯೊಂದಿಗೆ ಮಾತನಾಡಿ '2017 ರಲ್ಲಿ, ಆರನೇ ವೇತನ ಆಯೋಗವು ಮೂಲ ವೇತನ ದಲ್ಲಿ ಶೇ.29 ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು.

ವೇತನ ಪರಿಷ್ಕರಣೆ ಐದು ವರ್ಷಕ್ಕೊಮ್ಮೆ ಮಾಡ ಬೇಕು ಎಂದರು. ಕೇಂದ್ರ ಸರ್ಕಾರ ಮತ್ತು ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯ ಸರ್ಕಾರಿ ನೌಕರರಿಗೆ ಹೋಲಿಸಿದರೆ ರಾಜ್ಯ ಸರ್ಕಾರಿ ನೌಕರರ ವೇತನ ಪ್ರಮಾಣವು ತುಂಬಾ ಕಡಿಮೆಯಾಗಿದೆ ಎಂದು ಅವರು ಹೇಳಿದ್ದು ಹೀಗಾಗಿ ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ರಕ್ಷಿತ ಸುದ್ದಿ ಸಂತೆ ನ್ಯೂಸ್

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....