ಬಾಲ್ಕಿ -
ಕರ್ತವ್ಯ ಲೋಪ ಮತ್ತು ಶಿಷ್ಟಾಚಾರ ಉಲ್ಲಂಘನೆ ಆರೋಪದ ಮೇಲೆ ಅಮಾನತು ಗೊಂಡಿರುವ ಡಿಎಚ್‍ಒ ಡಾ.ಜ್ಞಾನೇಶ್ವರ ನೀರಗುಡೆ ಮತ್ತು ಡಾ.ಅಶೋಕ ಮೈಲಾರೆ ಅವರ ಅಮಾನತು ಆದೇಶ ರದ್ದುಪಡಿಸಿ ಕರ್ತವ್ಯಕ್ಕೆ ಮರು ನಿಯೋಜಿಸಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ನೇತೃತ್ವದಲ್ಲಿ ಸೋಮವಾರ ತಹಶೀಲ್ದಾರ್ ಮೂಲಕ ಆರೋಗ್ಯ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
'ಡಾ.ಜ್ಞಾನೇಶ್ವರ ನೀರಗುಡೆ ಮತ್ತು ಡಾ.ಅಶೋಕ ಮೈಲಾರೆ ಅವರು ಆರೋಗ್ಯ ಇಲಾಖೆಯಲ್ಲಿ ಉತ್ತಮ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಸವ ಕಲ್ಯಾಣದಲ್ಲಿ ಈಚೆಗೆ ನಡೆದ ಕಾರ್ಯಕ್ರಮದ ವೇದಿಕೆಯ ಬ್ಯಾನರ್‌ನಲ್ಲಿ ಗಣ್ಯರ ಭಾವಚಿತ್ರ ಕೈಬಿಟ್ಟು ಹೋದ ಕಾರಣಕ್ಕೆ ಇಬ್ಬರು ವೈದ್ಯಾಧಿಕಾರಿಗಳನ್ನು ಶಿಷ್ಟಾಚಾರ ಉಲ್ಲಂಘನೆ ಆರೋಪದಡಿ ಅಮಾನತು ಗೊಳಿಸಿರುವುದು ಸರಿಯಲ್ಲ' ಎಂದರು.
ಪ್ರಮುಖರಾದ ಶಮಿ ಪಟೇಲ್, ಸುನಿಲ ಬಿರಾದಾರ, ಬಸವರಾಜ ಬಂಗಾರೆ, ರಾಜಪ್ಪ ಪಾಟೀಲ, ಶರಣಬಸವ, ಪ್ರಭು ಡಿಗ್ಗೆ, ವಿವೇಕಾನಂದ ಸ್ವಾಮಿ, ಧನರಾಜ ಮೇತ್ರೆ, ಜಗದೇವಿ, ಸ್ಟೇಲುರಾಣಿ, ಡಾ.ರಂಗನಾಥ ಭಗವತಿ, ವಿಲಾಸ ಕನಸೆ, ಡಾ.ವಿಕ್ರಮ ದೇವಪ್ಪ, ವಿಜಯಕುಮಾರ, ಚನ್ನವೀರ ಕಳಸೆ, ನಂದುಕುಮಾರ ಜಾಧವ, ಸುಲೋಚನಾ ಸೇರಿದಂತೆ ಹಲವರು ಇದ್ದರು.
ಬಸವಕಲ್ಯಾಣ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮತ್ತು ಬಸವಕಲ್ಯಾಣ ತಾಲ್ಲೂಕು ಆರೋಗ್ಯಾಧಿಕಾರಿ ಅವರ ಅಮಾನತು ಆದೇಶ ಹಿಂಪಡರಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ತಹಶೀಲ್ದಾರ್ ದತ್ತಾತ್ರೇಯ ಗಾದಾ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಉಪ ವಿಭಾಗೀಯ ಆಸ್ಪತ್ರೆಯ ಕಟ್ಟಡದ ಶಂಕು ಸ್ಥಾಪನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಕಾರಣಕ್ಕೆ ಡಿಎಚ್‌ಒ ಡಾ.ಧ್ಯಾನೇಶ್ವರ ಮತ್ತು ಬಸವಕಲ್ಯಾಣ ಟಿಎಚ್‌ಒ ಡಾ.ಅಶೋಕ ಮೈಲಾರಿ ಅವರನ್ನು ಅಮಾನತುಗೊಳಿಸಲಾಗಿದೆ. ಬ್ಯಾನರ್ ನಲ್ಲಿನ ಭಾವಚಿತ್ರಕ್ಕೆ ಇಂತಹ ಕ್ರಮ ಕೈಗೊಂಡಿರುವುದು ಖಂಡನೀಯ' ಎಂದರು ಈ ಸಂಬಂಧ ಪುನರ್ ನಿರ್ಣಯ ಕೈಗೊಂಡು ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಅಂಬಣ್ಣ ಘಾಂಗ್ರೆ, ಸುಭಾಷ ಕಾಮಶೆಟ್ಟಿ, ಸಂತೋಷ ಕೋರಾಳೆ, ಓಂಕಾರ, ಆನಂದ ಪಾಟೀಲ, ಪ್ರಕಾಶ ವಾಡೇಕರ್, ಶಿವಕುಮಾರ ಜಡಗೆ, ನಾಗರಾಜ ಹಾವಣ್ಣ, ಶಿವರಾಜ ಮಾಶೆಟ್ಟೆ, ಧರ್ಮೇಂದ್ರ ಭೋಸ್ಲೆ, ಭೀಮಾಶಂಕರ, ಶರಣಪ್ಪ ಇದ್ದರು.
ಸುದ್ದಿ ಸಂತೆ ನ್ಯೂಸ್ ಬಾಲ್ಕಿ.....