ಹೊಸಕೋಟೆ -
ಸರ್ಕಾರಿ ನೌಕರರು ಸೇರಿ 8 ಮಂದಿ ವಿರುದ್ಧ ದೂರು ದಾಖಲಾದ ಘಟನೆ ಹೊಸಕೋಟೆ ಯಲ್ಲಿ ನಡೆದಿದೆ ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಬಾಗೂರು ಗ್ರಾಮದಲ್ಲಿ ರೈತರು ಅನುಭವದಲ್ಲಿರುವ 23 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳಲು ಯತ್ನಿಸಿದ ಇದೇ ಗ್ರಾಮದ ಐವರು ಹಾಗೂ ಇದಕ್ಕೆ ಸಹಕಾರ ನೀಡಿದ ತಾಲ್ಲೂಕು ಕಚೇರಿ ಮೂವರು ನೌಕರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೊಸಕೋಟೆ ತಹಶೀಲ್ದಾರ್ ನೀಡಿದ ದೂರಿನ ಅನ್ವಯ ತಾಲ್ಲೂಕು ಕಚೇರಿಯ ಅಭಿಲೇಖಾಲಯ ವಿಷಯ ನಿರ್ವಾಹಕ ಶ್ರೀನಿವಾಸ್ ರಾವ್, ಹಿಂದಿನ ಶಿರಸ್ತೇದಾರ್ ಕೆ.ಲಕ್ಷ್ಮಿ, ಗಣಗಲೂರು ವೃತ್ತ ಆಡಳಿತ ಅಧಿಕಾರಿ ಮಂಜುನಾಥ್ ಹಾಗೂ ಗ್ರಾಮದ ರಾಜಮ್ಮ, ಮಂಜುನಾಥ್, ಗೋಪಾಲ್, ಬೆಂಗಳೂರಿನ ಉಮೇಶ್, ಸಂತೋಷ್, ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಮೋಸ, ವಂಚನೆ, ನಕಲಿ ದಾಖಲೆ ಸೃಷ್ಟಿ, ನ್ಯಾಯಾಲಯ ಮತ್ತು ಸರ್ಕಾರಿ ದಾಖಲೆ ತಿದ್ದುಪಡಿ ಮಾಡಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖ ಲಾಗಿದೆ.ತಮ್ಮ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸ ಲಾಗಿದೆ ಎಂದು ಆರೋಪಿಸಿ ತಹಶೀಲ್ದಾರ್‌ಗೆ ರೈತರು ಮನವಿ ಸಲ್ಲಿಸಿದ್ದರು.
ಈ ಮನವಿ ಪರಿಶೀಲಿಸಿದಾಗ ದಾಖಲೆ ತಿದ್ದುಪಡಿ ಮಾಡಿರುವುದು ಹಾಗೂ ನಕಲಿ ದಾಖಲೆ ಸೃಷ್ಟಿಸಿ ರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಕಡತಗಳ ನೈಜತೆ ಪರಿಶೀಲನೆಗೆ ಎಫ್‌ಎಸ್‌ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸುದ್ದಿ ಸಂತೆ ನ್ಯೂಸ್ ಹೊಸಕೋಟೆ....