LIVE TV LocalCrimeNationalInternationalPoliticsEducationTechnologyEntertainmentSportsFeature
State News

ಬಿಸಿಲಿನ ಧಗೆಯ ‌ನಡುವೆ ಪಕ್ಷಿಗಳಿಗಾಗಿ ಶಿಕ್ಷಕರೊಬ್ಬರ ಕಾರ್ಯ ಮೆಚ್ಚುವಂತದ್ದು.....

ಸಿರಿಗೆರೆ -

ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಲೆ ಇದೆ.ನೆತ್ತಿ ಸುಡುವ ಈ ಒಂದು ರಣ ಬಿಸಿಲಿಗೆ ಬಸವ ಳಿಯುತ್ತಿರುವ ಪಕ್ಷಗಳಿಗೆ ಇಲ್ಲೊಬ್ಬ ಶಿಕ್ಷಕ ರೊಬ್ಬರು ನೀರುಣಿಸುವ ಮೂಲಕ ಮೂಕ ಜೀವಿಗಳ ವೇದನೆ ಗೆ ಮಾನವೀಯತೆ ಮೆರೆದಿದ್ದಾರೆ.

ಹೌದು ಚಿತ್ರದುರ್ಗ ತಾಲೂಕಿನ ಅಳಗವಾಡಿ ಗ್ರಾಮ ದ ಶ್ರೀಶರಣ ಎಂ.ಗಂಗಾಧರಯ್ಯ ಗ್ರಾಮಾಂತರ ಪ್ರೌಢಶಾಲೆಯ ಹಿಂದಿ ಶಿಕ್ಷಕ ಸಿ.ಸದಾನಂದಪ್ಪ, ಬಿಸಿಲಿನ ಕಾವಿಗೆ ನಿತ್ರಾಣ ಗೊಂಡು ಕುಡಿಯುವ ನೀರು ಸಿಗದೆ ಬಳಲುವುದ ನ್ನು ಗಮನಿಸಿ ಕುಡಿಯು ವ ನೀರಿನ ಬಾಟಲ್ ಸಂಗ್ರಹಿಸಿ ಮರಗಳಿಗೆ ಕಟ್ಟಿ ಬಾಟಲ್‌ನಲ್ಲಿ ನೀರು ಹಾಕಿ ಆ ಮೂಲಕ ಬಿಸಿಲಿನಿಂ ದ ಬಳಲಿ ಬರುವ ಪಕ್ಷಗಳಿಗೆ ಪ್ರತಿನಿತ್ಯ ನೀರುಣಿಸು ತ್ತಿದ್ದಾರೆ.

ಪರಿಸರ ಪ್ರೇಮಿ ಹಾಗೂ ಪರಿಸರ ಶಿಕ್ಷಕ ಮಲ್ಲಪ್ಪ ಅವರ ಕಾಳಜಿಯಿಂದ ಗಿಡ ನೆಟ್ಟು ಸಂರಕ್ಷಿಸಿದ ಪರಿಣಾಮ ಶಾಲಾ ಆವರಣದಲ್ಲಿ ಇಂದು ನೂರಾರು ಮರಗಳು ಬೆಳೆದು ನಿಂತು ಪಕ್ಷಿಗಳಿಗೆ ಆಶ್ರಯ ತಾಣವಾಗಿವೆ.ಆಹಾರ ಅರಸಿ ಬೇರೆ ಕಡೆ ತೆರಳಿ ಇಲ್ಲಿನ ಮರಗಳಲ್ಲಿ ಆಶ್ರಯ ಪಡೆದಿರುವ ಪಕ್ಷಿಗಳು ರಣ ಬಿಸಿಲಿಗೆ ನೀರಿಲ್ಲದೆ ನಿತ್ರಾಣಗೊಂಡು ವಿಲವಿಲ ನೇ ಒದ್ದಾಡುತ್ತಿರುವುದನ್ನು ಗಮನಿಸಿದ ಶಿಕ್ಷಕ ಸದಾನಂದಪ್ಪ, ನೂರಾರು ಕುಡಿಯುವ ಬಾಟಲ್ ಸಂಗ್ರಹಿಸಿ ಮರಗಳಿಗೆ ಕಟ್ಟಿ ಪ್ರತಿನಿತ್ಯ ಪಕ್ಷಿಗಳಿಗೆ ನೀರುಣಿಸುತ್ತಿದ್ದಾರೆ.

ಇವರಿಗೆ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ, ಶಿಕ್ಷಕರಾದ ಮಲ್ಲಪ್ಪ, ಗುರುಮೂರ್ತಿ, ದೇವರಾಜ್ ಸಾಥ್ ನೀಡಿದ್ದಾರೆ. ಮಕ್ಕಳಿಗೆ ಬೋಧನೆ ಮಾಡುವ ಜೊತೆಗೆ ಪಕ್ಷಿಗಳಿಗೆ ನೀರುಣಿಸುವ ಮೂಲಕ ಇತರೆ ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......