ಧಾರವಾಡ -
ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು (ಗ್ರೇಡ್-2) ವೃಂದದಿಂದ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನವನ್ನು ಬಡ್ತಿ ನೀಡುವ ಬಗ್ಗೆ ಕುರಿತು ಕೌನ್ಸಿಲಿಂಗ್ ನ್ನು ಏರ್ಪಡಿ ಸಲಾಗಿತ್ತು ಈ ಒಂದು ಕುರಿತು ದಿನಾಂಕ ಕೂಡಾ ಪೈನಲ್ ಆಗಿತ್ತು ಇದರ ನಡುವೆ ಈ ಒಂದು ಕೌನ್ಸಿಲಿಂಗ್ ನ್ನು ಮುಂದೂಡಲಾಗಿದೆ
ಕೆ.ಎ.ಟಿ ಬೆಳಗಾವಿ ಇಲ್ಲಿ ದಾಖಲಾದ ಅರ್ಜಿ ಸಂಖ್ಯೆ 11107-11109/2026 ರಲ್ಲಿನ ದಿನಾಂಕ 20-08-2026 ರಲ್ಲಿನ ಆದೇಶದಂತೆ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರು (ಗ್ರೇಡ್-2) ವೃಂದದಿಂದ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ಗ್ರೂಪ್-ಬಿ ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡುವ ಬಗ್ಗೆ ಉಲ್ಲೇಖದ ಈ ಕಚೇರಿ ಜ್ಞಾಪನದಂತೆ ವೇಳಾಪಟ್ಟಿಯನ್ನು ನಿಗದಿ ಪಡಿಸಿದ್ದು ಆ ಪ್ರಕಾರ ದಿನಾಂಕ 29-08-2026 ರಂದು ಸ್ಥಾನಪನ್ನ ಬಡ್ತಿ ನೀಡಿ ಸ್ಥಳನಿಯುಕ್ತಿಗೊಳಿ ಸುವ ಬಗ್ಗೆ ಕೌನ್ಸಿಲಿಂಗ್ ದಿನಾಂಕವನ್ನು ನಿಗದಿ ಪಡಿಸಲಾಗಿತ್ತು.
ಪ್ರಸ್ತುತ ಉಲ್ಲೇಖ (2) ರಂತೆ ಕೆ.ಎ.ಟಿ ಬೆಳಗಾವಿ ಇಲ್ಲಿ ದಾಖಲಾದ ಅರ್ಜಿ ಸಂಖ್ಯೆ 11107-11109/2026 ರಲ್ಲಿನ ದಿನಾಂಕ 20-08-2026 ರಲ್ಲಿನ ಆದೇಶದಲ್ಲಿ ಸ್ಥಳನಿಯುಕ್ತಿ ಕುರಿತು ಕೌನ್ಸಿಲಿಂಗ್ ನಡೆಸದಿರುವಂತೆ ಕೌನ್ಸಿಲಿಂಗ್‌ನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಅಪರ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಆದೇಶ ದಲ್ಲಿ ಉಲ್ಲೇಖ ಮಾಡಿ ಆದೇಶ ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ .....