LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌ - OPS ಜಾರಿಗೆ ಕೌಂಟ್‌ಡೌನ್‌.....ಹೊರಬಿತ್ತು ಬಿಗ್‌ ಅಪ್‌ಡೇಟ್‌.....

ಬೆಂಗಳೂರು -

ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿರುವ ಹಳೆ ಪಿಂಚಣಿ ಯೋಜನೆ (OPS) ಜಾರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. OPS ಜಾರಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ನೌಕರ ರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಯೋಜನೆ ಜಾರಿ ಕುರಿತು  ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿಯು ಹಮ್ಮಿಕೊಂಡ ಕಾರ್ಯಕ್ರಮ ದಲ್ಲಿ ಶುಭ ಸುದ್ದಿ ಯೊಂದನ್ನು ಉಪ ಮುಖ್ಯಮಂತ್ರಿ ಪರಮೇಶ್ವರ ನೀಡಿದ್ದಾರೆ

ಬೆಂಗಳೂರು ಅರಮನೆ ಮೈದಾನದ ಶೃಂಗಾರ್ ಪ್ಯಾಲೆಸ್‌ನಲ್ಲಿ ಆಯೋಜಿಸಿದ್ದ 6ನೇ 'ರಾಜ್ಯಮಟ್ಟದ ಐಕ್ಯತಾ ಸಮಾವೇಶ' ಕಾರ್ಯಕ್ರಮವನ್ನು ಉದ್ಘಾಟಿ ಸಿದ ಬಳಿಕ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಮಾತನಾಡಿ ಒಪಿಎಸ್ ಜಾರಿಗೊಳಿಸಲು ಸಿಎಂ ಡಿ.ಕೆ.ಶಿವಕುಮಾರ್ ಅವರು ತಾತ್ವಿಕವಾಗಿ ಒಪ್ಪಿದ್ದಾರೆ. ಮುಂದಿನ ದಿನಗಳಲ್ಲಿಅನುಷ್ಟಾನಗೊಳಿಸಲಾಗುವುದು ಎಂದು ತಿಳಿಸಿದರು.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುತ್ತಿದ್ದು ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ ಹಂತದಲ್ಲಿ ಚರ್ಚೆ‌ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿಗಳು, ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.

ಹಿಂದೆ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹೋರಾಟ ಮಾಡಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಈಗ ಡಿ‌.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಿ ಬ್ಯಾಕ್‌ಲಾಗ್ ಹುದ್ದೆ ಗಳನ್ನು ತುಂಬಲಾಗುವುದು ಎಂದು ಹೇಳಿದರು. ಸಮನ್ವಯ ಸಮಿತಿಗೆ ಜಾಗ ನೀಡುವಂತೆ ಮನವಿ‌ ಮಾಡಲಾಗಿದೆ. ಜಾಗ ಗುರುತಿಸಿದರೆ ಸಚಿವರಾದ ಕೆ‌.ಹೆಚ್.ಮುನಿಯಪ್ಪ ಅವರು ಮತ್ತು ನಾನು ಮಂಜೂರು ಮಾಡಿಸುತ್ತೇವೆ ಎಂದರು

ಸರ್ಕಾರಿ ನೌಕರರ ಸಮಾವೇಶದಲ್ಲಿ ನಿಮಗೆ ಪ್ರಾಶಸ್ತ್ಯ ನೀಡಬೇಕಾಗಿತ್ತು ಎಸ್‌ಸಿ, ಎಸ್‌ಟಿ‌ ಸಮುದಾಯದಲ್ಲಿ ಲಕ್ಷಕ್ಕೂ ಹೆಚ್ಚು ನೌಕರರಿದ್ದರು, ನಿಮ್ಮ ಸಮಸ್ಯೆಗಳನ್ನು ಬೇಡಿಕೆಯಾಗಿ ಮುಖ್ಯಮಂತ್ರಿಗಳಿಗೆ ನೀಡಲಿಲ್ಲ. ನಿಮ್ಮ ಶಕ್ತಿ ಪ್ರದರ್ಶನ ಸಾಲುವುದಿಲ್ಲ. ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘಟನೆ ಮತ್ತಷ್ಟು ಗಟ್ಟಿಯಾಗ ಬೇಕು. ತೀರ್ಮಾನಗಳನ್ನು ತೆಗೆದುಕೊಳ್ಳುವವರಿಗೆ ತಲುಪಬೇಕು. ಅದಕ್ಕೆ ನಿಮ್ಮ ಶಕ್ತಿಯ ಪ್ರದರ್ಶನ ಆಗಬೇಕು. ಎಲ್ಲರೂ ಒಟ್ಟಾಗಿ ಸಮಾವೇಶ ಮಾಡಿದರೆ ನಿಜವಾದ ಅರ್ಥ ಬರುತ್ತದೆ ಎಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆಸ್ಪತ್ರೆಗೆ ಹೋಗುವಾಗ ನಿಧನರಾದ ಶಿಕ್ಷಕ - ಸಹ ಶಿಕ್ಷಕ ಸೈಪನಸಾಬ ಚಪ್ಪರಬಂಧ ನಿಧನಕ್ಕೆ ಕಂಬನಿ ಮಿಡಿದ ಶಿಕ್ಷಕ ಬಂಧುಗಳು.....ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಬಿಡುಗಡೆ - ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಅನುದಾನ ಬಿಡುಗಡೆ.....ಶಿಕ್ಷಕರ ಕೌನ್ಸಿಲಿಂಗ್ ಮುಂದೂಡಿಕೆ - ಶಿಕ್ಷಕರಿಗೆ ನಿರಾಸೆ..... ಆದೇಶ ಮಾಡಿದ ಅಪರ ಆಯುಕ್ತರು.....ಅಂಗವಿಕಲರ ಬೇಡಿಕೆ ಈಡೇರಿಸಲು ಆಗ್ರಹ ಜಿಲ್ಲಾಧಿಕಾರಿಗೆ ಮನವಿ - ಕೇಶವ ತೆಲಗು ನೇತೃತ್ವದಲ್ಲಿ ಮನವಿ ಸಲ್ಲಿಕೆ.....ಇಬ್ಬರು ಶಿಕ್ಷಕರ ಅಮಾನತು - ಅಮಾನತು ಮಾಡಿ ಆದೇಶ ಮಾಡಿದ DDPI.....ಗದಗ ಜಿಲ್ಲಾ ಕಾರಾಗೃಹದಲ್ಲಿ ರಕ್ಷಾ ಬಂಧನ ಆಚರಣೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ರಕ್ಷಾ ಬಂಧನ.....ರಾಜ್ಯದ ಪೊಲೀಸರಿಗೆ ಭರ್ಜರಿ ಗುಡ್‌ನ್ಯೂಸ್‌ - ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸರ್ಕಾರ ಗ್ರೀನ್‌ ಸಿಗ್ನಲ್‌.....ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್‌ - OPS ಜಾರಿಗೆ ಕೌಂಟ್‌ಡೌನ್‌.....ಹೊರಬಿತ್ತು ಬಿಗ್‌ ಅಪ್‌ಡೇಟ್‌.....ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ - ಶಿಕ್ಷಕಿಯರ ಸಮಸ್ಯೆ ಗಳ ಕುರಿತು MLC ಯವರ ಗಮನಕ್ಕೆ ತೆಗೆದುಕೊಂಡು ಬಂದ ಶಿಕ್ಷಕಿಯರ ನಿಯೋಗ..... ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾದ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ - ಶಿಕ್ಷಕಿಯರ ಸಮಸ್ಯೆ ಗಳ ಕುರಿತು MLC ಯವರ ಗಮನಕ್ಕೆ ತೆಗೆದುಕೊಂಡು ಬಂದ ಶಿಕ್ಷಕಿಯರ ನಿಯೋಗ.....