LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಶಿಕ್ಷಕರ ದಿನಾಚರಣೆ ಮುನ್ನವೇ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಶಿಕ್ಷಕರ ಸಂಘ - ಸಂಘದ ಅಧ್ಯಕ್ಷ ಅಜಿತಕುಮಾರ ಘೋಷಣೆ ಘೋಷಣೆ ಮಾಡಿದರು ಹಲವು ಹೊಸ ಕಾರ್ಯಗಳನ್ನು.....

ಧಾರವಾಡ -

ಶಿಕ್ಷಕ ದಿನಾಚರಣೆ ಮುನ್ನವೇ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಶಿಕ್ಷಕ ಸಂಘದ ಅಧ್ಯಕ್ಷ ಅಜಿತ ಕುಮಾರ ದೇಸಾಯಿ
ಹೌದು ಶಿಕ್ಷಕರ ದಿನಾಚರಣೆ ಮುನ್ನವೇ ಶಿಕ್ಷಕರಿಗೆ ಸಿಹಿ ಸುದ್ದಿಯನ್ನು ಧಾರವಾಡ ಶಿಕ್ಷಕ ಸಂಘದ ಅಧ್ಯಕ್ಷ ಧಾರವಾಡ ತಾಲೂಕಿನ ಶಿಕ್ಷಕ ಶಿಕ್ಷಕಿಯರಿಗೆ ನೀಡಿದ್ದಾರೆ.

ಶಿಕ್ಷಕ ದಿನಾಚರಣೆ ಅಂಗವಾಗಿ ಶಿಕ್ಷಕ ಶಿಕ್ಷಕಿಯರಿಗೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಕ್ರಿಡಾ ಸ್ಪರ್ಧೆಗಳು ಹಾಗೂ ಪ್ರಶಸ್ತಿ ಸಮಾರಂಭದಲ್ಲಿ ಶಿಕ್ಷಕರಿಗೆ ಅನುಕೂಲವಾಗುವ ಕಾರ್ಯ ಗಳನ್ನು ಪ್ರಕಟಿಸಿದರು ಈ ವರ್ಷದಿಂದ ತಾಲೂಕಿನ ಶಿಕ್ಷಕ-ಶಿಕ್ಷಕಿಯರಿಗೆ ಅವರ ವೇತನದ ವಿವರ ಫಾರ್ಮ ನಂ.16, ಹಾಗೂ ವೇತನ ಪ್ರಮಾಣ ಪತ್ರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತವಾಗಿ ವಿತರಿಸುವ ವ್ಯವಸ್ಥೆ ಯನ್ನು ಮಾಡುವದಾಗಿ ತಿಳಿಸಿದರು.

ವೇತನ ತೆರಿಗೆ ಕಟ್ಟುವ ವ್ಯವಸ್ಥೆಯನ್ನು ಉಚಿತವಾಗಿ ಹುಬ್ಬಳ್ಳಿಯ S S S ಎಂಟರ್‌ ಪ್ರೈಜಸ್ ಇವರ ನೆರವಿ ನೊಂದಿಗೆ ಉಚಿತವಾಗಿ ಮಾಡಿಸಿ ಕೊಡಲಾಗುವುದು ಎಂದು ತಿಳಿಸಿದರು.ಶಿಕ್ಷಕರು ತಮ್ಮ ಸೇವಾ ವಿವರ ಮತ್ತು ವೇತನದ ಮಾಹಿತಿ ಪ್ರಧಾನ ಕಾರ್ಯದರ್ಶಿ S ಕಮ್ಮಾರ ಇವರ ಕಡೆ ಕೊಡಬಹುದೆಂದರು. ಕೋವಿಡ್ ಕಾರ್ಯ ಮಾಡಿದ ಎಲ್ಲರಿಗೆ (ಗಳಿಕೆ ರಜೆ) ಜಮಾ ಮಾಡಿಸಲಾಗಿದೆ. ಮುಂದಿನ ತಿಂಗಳ ಎಲ್ಲರಿಗೂ ಗಳಿಕೆ ರಜೆ ನಗದೀಕರಣ ಮಾಡಿಸಲಾಗುವುದು ಎಂದು ತಿಳಿಸಿದರು.

ಸದ್ಯದಲ್ಲಿ ಗುರು ಸ್ಪಂದನೆ ಕಾರ್ಯಕ್ರಮ ಮಾಡಿಸುತ್ತಿದ್ದು ಶಿಕ್ಷಕ ದಿನಾಚರಣೆ ದಿನ ಉದ್ಘಾಟನೆ ಮಾಡಲಾಗುವುದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕ ನವರ ತಿಳಿಸಿದ್ದಾರೆ.ಇದೆ ತಿಂಗಳ ಪ್ರಧಾನ ಗುರುಗಳ ಬಡ್ತಿ ಕೊಡುವದಾಗಿ ಉಪನರ್ದೇಶಕರಾದ ಎಸ್.ಎಸ್ ಕೆಳದಿ ಮಠ ತಿಳಿಸಿದ್ದಾರೆ.ಸಂಘದ ಜಿಲ್ಲಾ ಅಧ್ಯಕ್ಷರಾದ ವ್ಹಿ.ಎಫ್. ಚುಳಕಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ ಕೂಡಾ ಈ ಬಗ್ಗೆ ಹೆಚ್ಚಿನ ಪ್ರಯತ್ನ ಮಾಡು ತ್ತಿದ್ದಾರೆ ಎಂದರು.ನೂತನ ಪಿಂಚಣಿ ಯೋಜನೆ ರದ್ದುಗೊ ಳಿಸವುದು.

ಸೇರಿದಂತೆ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇ ರಿಕೆಗಾಗಿ ರಾಷ್ಟ್ರ ಮಟ್ಟದಲ್ಲಿ ಅಖಿಲಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ನ ರಾಷ್ಟ್ರೀಯ ಕಾರ್ಯಧ್ಯ ಕ್ಷರಾದ ಬಸವರಾಜ ಗುರಿಕಾರ ಇವರ ಕರೆಯ ಮೇರೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರಾದ ಶಂಬುಲಿಂಗನಗೌಡ ಪಾಟೀಲ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಇವರ ನೇತೃತ್ವದಲ್ಲಿ ವಿನೂತನ ಸಹಿ ಸಂಗ್ರಹಣಾ ಮಹಾ ಅಭಿಯಾನ ನಡೆಯುತ್ತಿದ್ದು ಇಂದು ಒಂದೇ ದಿನ ಸುಮಾರು 500 ಜನ ಶಿಕ್ಷಕ ಶಿಕ್ಷಕಿಯರು ಸಹಿ ಮಾಡುವ ಮುಖಾಂತರ ನಮ್ಮಲ್ಲಿ ಚಳಿವಳಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಂತೋಷ ಹಂಚಿಕೊಂಡರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....