LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಟಾಯರ್ ಕಳ್ಳರ ಬಂಧನ - ಹುಬ್ಬಳ್ಳಿಯ ಗೋಕುಲ್ ಪೊಲೀಸ್ ಠಾಣೆ ಪೊಲೀಸರ ಕಾರ್ಯಾಚರಣೆ

ಹುಬ್ಬಳ್ಳಿ -

ಹುಬ್ಬಳ್ಳಿಯ ಗೋಕುಲ ಠಾಣೆ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿನ ಟಾಯರ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ‌.

ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಿವಶಕ್ತಿ ಎಂಟರ್ ಪ್ರೈಜಸ್ ನಲ್ಲಿ 01.02.2021 ರಂದು ಕಳ್ಳತನ ಮಾಡಲಾಗಿತ್ತು. ಗೋಡೌನದ ಮೇಲ್ಛಾವಣಿ ಹತ್ತಿ ಬಂದು ಮೇಲ್ಯಾವಣಿಯ ಸಿಮೆಂಟ್ ಸೀಟಿಗೆ ಅಳವಡಿಸಿದ ನಟ ಬೋಲನ್ನು ಬಿಚ್ಚಿ ಪಕ್ಕಕ್ಕೆ ಸರಿಸಿ ಗೊಡೌನ ಒಳಗೆ ಪ್ರವೇಶ ಮಾಡಿ ಸಂಗ್ರಹಿಸಿಟ್ಟಿದ್ದ ಟಾಯರಗ ಗಳನ್ನು ಕಳ್ಳತನ ಮಾಡಲಾಗಿತ್ತು.

ವಿವಿಧ ಕಂಪನಿಗಳ ಮತ್ತು ವಾಹನಗಳಿಗೆ ಸಂಬಂಧಿ ಸಿದ 131 ಟಾಯರ್. 108 ಟ್ಯೂಬ್ ಮತ್ತು ಇತರೆ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು‌. ಹೀಗೆ ಒಟ್ಟು 5,78,345 ರೂ ಕಿಮ್ಮತ್ತಿನ ವಸ್ತುಗಳ ನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಗೋಕುಲ ರೋಡ ಮೊಲೀಸ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಈ ಕುರಿತು ಕಾರ್ಯಾಚರಣೆ ಮಾಡಿದ ಗೋಕುಲ ಠಾಣೆ ಪೊಲೀಸರು ಆರೋಪಿ ಗಳನ್ನು ಬಂಧನ ಮಾಡಿದ್ದಾರೆ.

ಹಳ್ಳೆಪ್ಪ ತಂದೆ ದೇವಪ್ಪ ಪೂಜಾರ ಸಾ: ಮಾರುತಿ ನಗರ ಗೋಕುಲ್ ರೋಡ ಹುಬ್ಬಳ್ಳಿ, ವಸೀಂ ಮಕ್ತುಮಸಾಬ ಸೈದಾಪೂರ ಸಾ: ಗದಗ ಬೆಟಗೇರಿ ನರಸಾಪೂರ ಬಂಧಿಸಿ 2,10,000/- ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಹಾಗೂ ಇನ್ನೂಳಿದ ಆರೋಪಿತರಿಗೆ ಪತ್ತೆ ಮಾಡುವದು ಬಾಕಿ ಇದ್ದು, ಸದರಿ ಎರಡು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‌.

ವಿನೋದ ಎಮ್. ಮುತ್ತೆದಾರ, ಸಹಾಯಕ ಪೊಲೀಸ ಆಯುಕ್ತರು, ಹುಬ್ಬಳ್ಳಿ ಶಹರ ಮಾರ್ಗದರ್ಶನದಲ್ಲಿ ಗೋಕುಲ ರೋಡ ಪೊಲೀಸ ಠಾಣೆಯ ಪೊಲೀಸ ಇನ್ಸಪೆಕ್ಟರ್ ರವರಾದ ಜಗದೀಶ್ ಸಿ. ಹಂಚಿನಾಳ, ರವರು ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳಾದ ಎಮ್.ಎಚ್ ಮೂಗನೂರ, ಎ.ಎಸ್.ಐ. ಬಸವರಾಜ ಬೆಳಗಾವಿ, ರಾಜು ಹೊರ್ಕದವರ, ಮಹಾದೇವ ಹೊನ್ನಪ್ಪನವರ, ವಿಜಯ ಹಕಾಟೆ, ಸುಲೇಮಾನ ಚೋಪದಾರ, ಮಹೇಶ ಬೆನ್ನೂರ ಹಾಗೂ ಶ್ರೀ ಸಂಜೀವರಡ್ಡಿ ಕಡಬುರ ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......