LIVE TV LocalCrimeNationalInternationalPoliticsEducationTechnologyEntertainmentSportsFeature
State News

ಧಾರವಾಡ ಹೊಸ್ ಬಸ್ ನಿಲ್ದಾಣದಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಬಾಡಿಗೆ - ಬಾಡಿಗೆ ನೀಡುವಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬಾಡಿಗೆ ವಸೂಲಿ.....ಮೌನವಾಗಿದ್ದಾರೆ ಇಲಾಖೆಯ ಅಧಿಕಾರಿಗಳು.....ಮುಂದುವರೆಯುವುದು.....

ಧಾರವಾಡ -

ಧಾರವಾಡ ಹೊಸ್ ಬಸ್ ನಿಲ್ದಾಣದಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಬಾಡಿಗೆ - ಬಾಡಿಗೆ ನೀಡುವಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬಾಡಿಗೆ ವಸೂಲಿ.....ಮೌನವಾಗಿದ್ದಾರೆ ಇಲಾಖೆಯ ಅಧಿಕಾರಿಗಳು.....ಮುಂದುವರೆಯುವುದು

ಸಾಮಾನ್ಯವಾಗಿ ಸರ್ಕಾರಿ ಸ್ಥಳದಲ್ಲಿ ವಾಣಿಜ್ಯ ಬಳಕೆಗೆ ಬಾಡಿಗೆ ನೀಡುವ ವಿಚಾರದಲ್ಲಿ ಸರ್ಕಾರದ ನಿಮಯ ಗಳು ಇವೆ.ಇಷ್ಟು ಸ್ಥಳಕ್ಕೇ ಇಷ್ಟೇ ದರ ನಿಗದಿ ಮಾಡಬೇಕು ಕೊಡಬೇಕು ಎಂಬ ನಿಮಯಗಳು ಇವೆ.ಆದರೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಸರ್ಕಾರದ ನಿಮಯಗಳನ್ನು ಸೂಚನೆಗಳನ್ನು ಗಾಳಿಗೆ ತೂರಿ ಬಾಡಿಗೆ ನೀಡಲಾಗಿದೆ.

ಹೌದು ಇಧಕ್ಕೆ ಸಾಕ್ಷಿ ಹೊಸದಾಗಿ ಆರಂಭವಾಗಿರುವ ಅಂಗಡಿಗಳೇ ತಾಜಾ ಉದಾಹರಣೆ.ಇಲ್ಲಿನ ಹೊಸ ಅಂಗಡಿಗಳಲ್ಲಿ ಮೂರು ನಾಲ್ಕು ಮಾತ್ರ ಆರಂಭವಾ ಗಿದ್ದು ಹಾಗೆ ಸುಮ್ಮನೇ ಹೋಗಿ ಇವುಗಳ ಬಾಡಿಗೆ ಕೇಳಿದ್ರೆ ಶಾಕ್ ಆಗುತ್ತದೆ ಯಾವ ಅಂಗಡಿ ಬಾಡಿಗೆ ಕೂಡಾ ಸರ್ಕಾರದ ನಿಮಯಗಳಂತೆ ನಿಗದಿಯಾಗಿಲ್ಲ ದರವನ್ನು ಫೀಕ್ಸ್ ಮಾಡಿಲ್ಲ ಸಿಕ್ಕ ಸಿಕ್ಕಂಗ ದರವನ್ನು ನಿಗದಿ ಮಾಡಿ ನೀಡಲಾಗಿದೆ.

ಒಂದು ಕಡೆಗೆ ಸಾಕಷ್ಟು ಪ್ರಮಾಣದಲ್ಲಿ ವ್ಯಾಪಾರ ವಹಿವಾಟಿನಲ್ಲಿ ಸ್ಪರ್ಧೆ ಮತ್ತೊಂದೆಡೆ ಇದೇ ಸಿಕ್ಕ ಅವಕಾಶ ಎಂದುಕೊಂಡಿರುವ ಟೆಂಡರ್ ಹಿಡಿದವರು ಇಲಾಖೆಯ ಸರ್ಕಾರದ ನಿಮಯಗಳನ್ನು ಗಾಳಿಗೆ ತೂರಿ ತಾವೇ ದವರನ್ನ ಲಕ್ಷ ಲಕ್ಷ ಗಳಂತೆ ನಿಗದಿ ಮಾಡಿ ನೀಡಿದ್ದಾರೆ.ಇಲಾಖೆಯ ಅಧಿಕಾರಿಗಳು ದುಡಿದು ತಿನ್ನುವವರಿಗೆ ಒಂದಿಷ್ಟು ಅನುಕೂಲ ಆಗಲಿ ಎಂದು ವ್ಯಾಪಾರ ವಹಿವಾಟುಗಳಿಗೆ ವಾಣಿಜ್ಯ ಮಳಿಗೆಗಳನ್ನು ನಿಗದಿ ಮಾಡಿದ್ದಾರೆ ಆದರೆ ದುಡಿಯುವರಿಗಿಂತ ಬಾಡಿಗೆ ನೀಡಿದವರಿಗೆ ಹೆಚ್ಚಿನ ಲಾಭವಾಗುತ್ತಿದ್ದು ಎಲ್ಲವೂ ಗೊತ್ತಿದ್ದರೂ ಕೂಡಾ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ

ಇತ್ತ ದುಬಾರಿ ಬಾಡಿಗೆಗಾಗಿ ಅಂಗಡಿಗಳನ್ನು ತಗೆದು ಕೊಂಡಿರುವ ವ್ಯಾಪಾರಿಗಳು ಕಡಿಮೆ ವ್ಯಾಪಾರದ ನಡುವೆ ಲಕ್ಷ ಲಕ್ಷ ಕೂಡಿಸಲು ಪರದಾಡುತ್ತಿದ್ದಾರೆ ಒಟ್ಟಾರೆ ಏನೇ ಆಗಲಿ ಸರ್ಕಾರದ ನೀತಿ ನಿಮಯಗಳನ್ನು ಗಾಳಿಗೆ ತೂರಿ ಬಾಡಿಗೆ ನೀಡಿರುವ ವಿಚಾರವನ್ನು ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು ಪರಿಶೀಲನೆ ಮಾಡೊದು ಅವಶ್ಯಕವಿದೆ ಈ ಒಂದು ಕುರಿತಂತೆ ಸುದ್ದಿ ಸಂತೆ ಟೀಮ್ ಕೂಡಾ ಫಾಲೋ ಮಾಡಲಿದೆ ವರದಿಗಳು ಕೂಡಾ ಮುಂದುವರೆಯಲಿವೆ.

ಬಾಡಿಗೆ ಇಲಾಖೆಗೆ ಮಾತ ದರವನ್ನು ನಿಗದಿ ಮಾಡಿ ಕೆಲವರು ಹಳೆಯ ಅಂಗಡಿಗಳನ್ನು ತಾವು ನಡೆಸ ಲಾರದೇ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ ಅವರು ಕೂಡಾ ಮತ್ತೆ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ......

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....