LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ ಗಮನಿಸಿ.....ಅಕ್ಟೋಬರ್ 31 ರ ಒಳಗಾಗಿ ತಪ್ಪದೆ ಈ ಕೆಲಸ ಮಾಡಿ.....

ಬೆಂಗಳೂರು -

ಕರ್ನಾಟಕ ಸರ್ಕಾರಿ ನೌಕರರಿಗೆ ಮಹತ್ವದ ಅಪ್‌ಡೇಟ್ ಹೊರಬಿದ್ದಿದೆ. ಸರ್ಕಾರಿ ನೌಕರರ ಸೇವಾ ವಿವರಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವ ಎಲೆಕ್ಟ್ರಾನಿಕ್ ಸರ್ವಿಸ್ ರಿಜಿಸ್ಟರ್‌ (e-SR) ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS-2.0) ನಿರ್ದೇಶನಾಲಯ ಸೂಚಿಸಿದೆ.ಅಲ್ಲದೆ, HRMS-1 ಸೇವೆಯನ್ನು 2026ರ ಅಕ್ಟೋಬರ್ ಅಂತ್ಯದವೇಳೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು ನವೆಂಬರ್‌ ನಿಂದ HRMS-2.0 ಮೂಲಕ ವಿವಿಧ ಸೇವಾ ಸೌಲಭ್ಯ ಗಳನ್ನು ಪಡೆಯಲು e-SR ನವೀಕರಣ ಪ್ರಮುಖ ವಾಗಲಿದೆ.

ನೌಕರರ ಸೇವಾ ದಾಖಲೆ ಡಿಜಿಟಲೀಕರಣಕ್ಕೆ ಸೂಚನೆ ಹೌದು ಕರ್ನಾಟಕ ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2.0 ನಿರ್ದೇಶನಾ ಲಯವು 2026ರ ಅಕ್ಟೋಬರ್ 12ರಂದು ಹೊರಡಿ ಸಿರುವ ಪತ್ರದಲ್ಲಿ, ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಅಧಿಕಾರಿಗಳು ಮತ್ತು ನೌಕರರ ಸೇವಾ ವಿವರಗಳನ್ನು e-SRನಲ್ಲಿ ಪರಿಶೀಲಿಸಿಅಗತ್ಯ ತಿದ್ದುಪಡಿ ಹಾಗೂ ಸೇರ್ಪಡೆಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದೆ.

2021-22ನೇ ಸಾಲಿನಿಂದ ರಾಜ್ಯ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡಿರುವ ಅಧಿಕಾರಿಗಳು ಮತ್ತು ನೌಕರರ ಸೇವಾ ವಿವರಗಳನ್ನು ಎಲೆಕ್ಟ್ರಾನಿಕ್ ಸರ್ವಿಸ್ ರಿಜಿಸ್ಟರ್‌ನಲ್ಲಿ ದಾಖಲಿಸುವಂತೆ ಈ ಹಿಂದೆಯೇ ಸೂಚಿಸಲಾಗಿತ್ತು. ಆದರೆ, ಕೆಲವು ಇಲಾಖೆಗಳಲ್ಲಿನ e-SR ಪ್ರಗತಿ ತೃಪ್ತಿಕರವಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರದ ಸೂಚನೆಯಂತೆ, HRMS-1 ಸೇವೆಯನ್ನು ಅಕ್ಟೋಬರ್ 2026ರ ಅಂತ್ಯದ ವೇಳೆಗೆ ಸ್ಥಗಿತ ಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ, ನೌಕರರು ತಮ್ಮ ಸೇವಾ ದಾಖಲೆಗಳನ್ನು ಪರಿಶೀಲಿಸಿ, ಅಪೂರ್ಣ ವಾಗಿರುವ ಮಾಹಿತಿಯನ್ನು ಸರಿಪಡಿಸಿ e-SR ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯ ವಾಗಿದೆ.

ಮುಂದಿನ ದಿನಗಳಲ್ಲಿ HRMS-2.0 ತಂತ್ರಾಂಶದಲ್ಲಿ ನೌಕರರಿಗೆ ಒದಗಿಸುವ ಸೇವಾ ಸೌಲಭ್ಯಗಳಿಗೆ e-SRನಲ್ಲಿರುವ ದಾಖಲೆಗಳನ್ನು ಬಳಸಲಾಗುತ್ತದೆ. ಹೀಗಾಗಿ, ಸೇವಾ ವಿವರಗಳು ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಇಲಾಖೆಗಳು ತ್ವರಿತ ಕ್ರಮ ಕೈಗೊಳ್ಳಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಂಟ್ರೋಲ್ ತಪ್ಪಿದ HDMC JE ಗಳು.....ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ ಜೂನಿಯರ್ ಇಂಜಿನಿಯರ್‌ಗಳದ್ದೇ ದರ್ಬಾರ್.....OPS ಭಾಗ್ಯ ಕ್ಕೆ ವೇಗ ನೀಡಿದ ಶಾಲಾ ಶಿಕ್ಷಣ ಇಲಾಖೆ.....ಅಪ್ಡೇಟ್ ಮಾಹಿತಿ.....ಹೂಲಿ ಗ್ರಾಮದ ದ್ವಾರಬಾಗಿಲು ನಿರ್ಮಾಣಕ್ಕೆ ₹10 ಲಕ್ಷ ದೇಣಿಗೆ ನೀಡಿದ ವಿರೇಶ ಬ್ಯಾಹಟ್ಟಿ.....ಸಮಾಜ ಸೇವೆಯಲ್ಲಿ ಸದಾ ಮುಂದು.....KSPSTA ಮಾಜಿ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ರಾಜಕೀಯ ಇನಿಂಗ್ಸ್ ಆರಂಭ .....ರಾಜ್ಯ ಸರ್ಕಾರಿ ನೌಕರರೇ ಗಮನಿಸಿ ಗಮನಿಸಿ.....ಅಕ್ಟೋಬರ್ 31 ರ ಒಳಗಾಗಿ ತಪ್ಪದೆ ಈ ಕೆಲಸ ಮಾಡಿ.....ರಾಜ್ಯ ಸರ್ಕಾರಿ ನೌಕರರೇ ಗಮನಿಸಿ ಗಮನಿಸಿ.....ಅಕ್ಟೋಬರ್ 31 ರ ಒಳಗಾಗಿ ತಪ್ಪದೆ ಈ ಕೆಲಸ ಮಾಡಿ.....ಕಬ್ಬು ಬೆಳೆದ ರೈತರ ಸಮಸ್ಯೆ ಗೆ ಪರಿಹಾರ ಕಲ್ಪಿಸಿದ ಕೇಂದ್ರ ಸರ್ಕಾರ.....ಅಮಾನತುಗೊಂಡ BEO ಗೆ ಹುದ್ದೆ ನೀಡಿದ ರಾಜ್ಯ ಸರ್ಕಾರ.....ಈ ತಿಂಗಳಿನಿಂದ ಹೆಚ್ಚಾಗಲಿದೆ ಸರ್ಕಾರಿ ನೌಕರರ ಸಂಬಳ.....ಎಷ್ಟು ಹೆಚ್ಚಾಗಲಿದೆ ಮೂಲ ವೇತನ ಕಂಪ್ಲೀಟ್ ಮಾಹಿತಿ.....ಅದ್ದೂರಿಯಾಗಿ ಶಾಸಕ ವಿಶ್ವಾಸ್ ವೈದ್ಯ ಹುಟ್ಟು ಹಬ್ಬ ಆಚರಣೆ.....ವಿರೇಶ ಬ್ಯಾಹಟ್ಟಿ ಆಂಡ್ ಟೀಮ್ ನಿಂದ ಅದ್ದೂರಿ ಆಚರಣೆ ಆತ್ಮೀಯರ ಅಭಿಮಾನಿಗಳ ಪ್ರೀತಿಯಲ್ಲಿ ಮಿಂದೆದ್ದ ಜನಸೇವಕ.....