LIVE TV LocalCrimeNationalInternationalPoliticsEducationTechnologyEntertainmentSportsFeature
State News

ಕೋವಿಡ್ ಮಾರ್ಗಸೂಚಿ ಹಿನ್ನಲೆ – ಜೋಗ ಜಲಪಾತ ವೀಕ್ಷಣೆಯಲ್ಲಿ ಗಣನೀಯ ಇಳಿಕೆ – ಪ್ರವಾಸಿಗರ ಅಸಮಾಧಾನ.....

ಜೋಗ -

ಕೊರೊನಾ 3ನೇ ಅಲೆ ಕಾರಣ ಆಗಸ್ಟ್ 5 ರಿಂದ ಜೋಗ ವೀಕ್ಷಣೆಗೆ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ವರದಿ ತಗೆದುಕೊಂಡು ಬರಬೇಕು ಎಂಬ ಒಂದು ಆದೇಶದಿಂದಾಗಿ ಪ್ರವಾಸಿಗರು ಅಸಮಾಧಾ ನಗೊಂಡಿದ್ದಾರೆ.ಹೌದು ಶಿವಮೊಗ್ಗ ಜಿಲ್ಲೆಯ ಎಲ್ಲ ಪ್ರವಾಸಿ ತಾಣಗಳ ಭೇಟಿಗೆ ಕೋವಿಡ್ ಮಾರ್ಗಸೂ ಚಿಗಳನ್ನು ಜಿಲ್ಲಾಧಿಕಾರಿ ವಿಧಿಸಿದ್ದು,ಜೋಗ ಜಲಪಾ ತದಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡು ಬಂದಿತು.

ಪ್ರತಿದಿನ ಸರಾಸರಿ 4 ಸಾವಿರದಿಂದ 5 ಸಾವಿರ ಪ್ರವಾಸಿಗರು ಜಲಪಾತ ವೀಕ್ಷಣೆಗೆ ಬರುತ್ತಿದ್ದರು. ಆದರೆ ಈ ಒಂದು ಆದೇಶ ಬಂದ ನಂತರ ಇಲ್ಲಿಗೆ ಬರುವವರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.ನಿನ್ನೆ ಕೇವಲ 2 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು ಪ್ರವಾಸಿಗರ ಸಂಖ್ಯೆ ಶೇ 60 ರಷ್ಟು ಕ್ಷೀಣಿಸಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಮೂಲಗಳು ತಿಳಿಸಿವೆ.ರಾಷ್ಟ್ರೀಯ ಹೆದ್ದಾರಿ 206ರ ಸೀತಾಕಟ್ಟೆ ಸೇತುವೆಯ ಬಳಿ ಪ್ರವಾಸಿ ಮಿತ್ರ, ಪೊಲೀಸ್‌, ಹೋಂ ಗಾರ್ಡ್ಸ್ ಸಿಬ್ಬಂದಿ ಪ್ರಾಧಿಕಾರದ ತಪಾಸಣಾ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ದೃಢೀಕರಣ ಪತ್ರವನ್ನು ತೋರಿಸಿದಲ್ಲಿ ಪ್ರವಾಸಿಗರಿಗೆ ಜೋಗ ಜಲಪಾತದ ಪ್ರಧಾನ ಪ್ರವೇಶ ದ್ವಾರಕ್ಕೆ ಪ್ರವೇಶ ಮಾಡಲು ಟೋಕನ್ ನೀಡಲಾಗುತ್ತದೆ. ಕಾರ್ಗಲ್, ವಡನ್ ಬೈಲು, ಲಿಂಗನಮಕ್ಕಿ, ತಳಕಳಲೆ ಪ್ರದೇಶದ ವೀಕ್ಷಣೆಗೆ ಹೋಗುವವರಿಗೆ ಈ ತಪಾಸಣಾ ಗೇಟ್‌ನಲ್ಲಿ ಯಾವುದೇ ತಡೆ ಇರುವುದಿಲ್ಲ.ಇದಲ್ಲದೆ ಜೋಗ ಜಲಪಾತ ವೀಕ್ಷಣೆಯ ಮತ್ತೊಂದು ಪ್ರಮುಖ ವೀಕ್ಷಣಾ ತಾಣವಾದ ಮುಂಬಯಿ ಬಂಗಲೆ ಪ್ರವಾಸಿಗರಿಗೆ ಮುಕ್ತವಾಗಿದೆ. ಇಲ್ಲಿಂದ ಜಲಪಾತ ವೀಕ್ಷಣೆಗೆ ಯಾವುದೇ ರೀತಿಯ ಕೋವಿಡ್ ನಿರ್ಬಂಧಗಳು ಇರುವುದಿಲ್ಲ.ಏಕೆಂದರೆ ಮುಂಬಯಿ ಬಂಗಲೆ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಯಲ್ಲಿರುವುದರಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಬಾಂಬೇ ಟಿಬಿ ಪ್ರದೇಶದಲ್ಲಿ ಜಾರಿಯಲ್ಲಿರು ವುದಿಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದು ಅಸಮಾಧಾನವನವನ್ನುವ್ಯಕ್ತಪಡಿಸುತ್ತಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....