LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಎರಡು ದಿನ ಸಿಬಿಐ ವಶಕ್ಕೆ - ಚಂದ್ರಶೇಖರ ಇಂಡಿ

ಧಾರವಾಡ - ಯೋಗಿಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಎರಡು ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಗಿದೆ. ಸಿಬಿಐನಿಂದ ಬಂಧನವಾಗಿ ನಿನ್ನೆ ಅಷ್ಟೇ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಚಂದ್ರಶೇಖರ ಇಂಡಿ ಅವರನ್ನು ಸಿಬಿಐ ವಶಕ್ಕೆ ನ್ಯಾಯಾಲಯ ನೀಡಿದೆ. ಎರಡು ದಿನ ಸಿಬಿಐ ಕಸ್ಟಡಿಗೆ ನೀಡಿ ಧಾರವಾಡ ಮೂರನೇ ಹೆಚ್ಚವರಿ ಸೆಷನ್ಸ್ ನ್ಯಾಯಲಯ ಆದೇಶ ಹೊರಡಿಸಿದೆ.

ಕಳೆದ ಡಿಸೆಂಬರ್ 13 ರಂದು ಸಿಬಿಐ ಅಧಿಕಾರಿಗಳು ಅಕ್ರಮ ಶಸ್ತ್ರಾಸ್ತ್ರ ಸಾಗಟ ಆರೋಪದ ಮೇಲೆ ಚಂದ್ರಶೇಖರ ಇಂಡಿ ಅವರನ್ನು ವಿಜಯಪುರದಲ್ಲಿ ಬಂಧನ ಮಾಡಿದ್ದರು. ಬಳಿಕ ಅಂದೇ ತಡ ರಾತ್ರಿ ಅವರನ್ನು ಧಾರವಾಡ ಉಪನಗರ ಠಾಣೆಗೆ ಕರೆದುಕೊಂಡು ಬಂದಿದ್ದರು. ಅಲ್ಲದೆ ಡಿಸೆಂಬರ್ 14 ರಂದು ಹಲವು ಗಂಟೆಗಳ‌ ಕಾಲ ಸಿಬಿಐ ಅಧಿಕಾರಿಗಳು ಚಂದ್ರಶೇಖರ ಇಂಡಿವರನ್ನು ವಿಚಾರಣೆ ನಡೆಸಿದರು. ಬಳಿಕ ಮಧ್ಯಾಹ್ನದ ನಂತರ ಇವರನ್ನು ಧಾರವಾಡ ಜಿಲ್ಲಾ ನ್ಯಾಯಾಲಯ ಸಂಕಿರ್ಣ ಆವರದಲ್ಲಿರುವ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯಕ್ಕೆ ಹಾಜರು ಮಾಡಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೋರಡಿಸಿದರು.

ಒಂದು ರಾತ್ರಿ ಕಳೆದು ಸಂಜೆಯಾಗುತ್ತಲೆ ಮತ್ತೆ ಇಂದು ಇಂಡಿಯವರನ್ನು, ಸಿಬಿಐ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡರು. ಕಸ್ಟಡಿ ಕೇಳಿರುವ ಕುರಿತು ವಿಚಾರಣೆ ಮಾಡಿದ ನ್ಯಾಯಾಧೀಶರು ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಆದೇಶ ಹೋರಡಿಸಿದ್ದಾರೆ. ಡಿಸೆಂಬರ್ 17 ಸಂಜೆ 5 ಗಂಟೆಯ ಒಳಗೆ ಇಂಡಿಯವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿಬಿಐ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಈಗಾಗಲೇ ಚಂದ್ರಶೇಖರ ಇಂಡಿಯವರನ್ನು ಈ ಹಿಂದೆ ಹಲವು ಬಾರಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದು. ಬಂಧನದ ನಂತರ ಇದೇ ಮೊದಲ ಬಾರಿಗೆ ಕಸ್ಟಡಿಗೆ ಸಿಬಿಐ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಈಗ ಮತ್ತೆ ಎರಡು ದಿನ ಸಿಬಿಐ ತಂಡ ಚಂದ್ರಶೇಖರ ಇಂಡಿಯವರಿಗೆ ಡ್ರಿಲ್ ಮಾಡಲಿದ್ದು, ಪ್ರಮುಖವಾಗಿ ಅಕ್ರಮ ಶಸ್ತ್ರಾಸ್ತ್ರಗಳು ಕುರಿತು ವಿಚಾರಣೆ ನಡೆಸಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಕ್ರಮ ಶಸ್ತ್ರಾಸ್ತ್ರ ಗಳನ್ನು ಯಾವ ಉದೇಶದಿಂದ ಸಾಗಾಟ ಮಾಡಿದ್ದೀರಿ…? ಇದರ ಹಿಂದೆ ಇರುವ ಉದ್ದೇಶವೇನು..? ಯಾರು ಯಾವಾಗ ನಿಮ್ಮಗೆ ಇವುಗಳನ್ನು ತಲುಪಿಸಿದ್ದು…? ನೀವು ಯಾವ ರೀತಿಯಾಗಿ ಇವುಗಳನ್ನು ಧಾರವಾಡಕ್ಕೆ ತಲುಪಿಸಿದ್ದು..? ಯಾರ ಕೈಗೆ ಇವುಗಳನ್ನು ನೀಡಿದ್ದೀರಿ ..? ಎಂಬ ಪ್ರಶ್ನೆಗಳನ್ನು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಸೋದರ ಮಾವನಿಗೆ ಕೇಳಬಹುದು ಎನ್ನಲಾಗುತ್ತಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ವಿದ್ಯಾರ್ಥಿ ಆತ್ಮಹತ್ಯೆ.....SSLC ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ.....ಶಿಕ್ಷಕರ ವೇತನ ತಾರತಮ್ಯ ಸದನಕ್ಕೆ ವರದಿ ಸಲ್ಲಿಕೆ..... ವಿಧಾನ ಪರಿಷತ್ ಸದಸ್ಯರಿಂದ ಸಲ್ಲಿಕೆಯಾಯಿತು ವರದಿ....‌.ಮುಖ್ಯಶಿಕ್ಷಕ ಬಂಧನ - ಮಾಡಿದ ಕೆಲಸ ನೋಡಿದರೆ.....ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ದಾಳಿ.....ವಾಕಿಂಗ್ ಹೋಗಿ ಬರುವಷ್ಟರಲ್ಲಿ ಬಾಗಿಲು ತಟ್ಟಿದ ಲೋಕಾ ಟಿಮ್.....ಸರ್ಕಾರಿ ನೌಕರರ ಪ್ರತಿಭಟನೆ..... ನೌಕರರ ಸಂಘದಿಂದ ಮನವಿಯನ್ನು.....ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಗುಂಡಪ್ಪಾ ಭಂಕೂರ ಗೌರವ.....ಮೂವರು ಸರ್ಕಾರಿ ನೌಕರರ ಮೇಲೆ ದಾಖಲಾಯಿತು ದೂರು.....ಶಿಕ್ಷಣ ಇಲಾಖೆ ವಿರುದ್ಧ ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹ.....ಕ್ಷಮೆಯಾಚನೆ ಕೇಳುವಂತೆ ರಾಜಕೀಯ ಮುಖಂಡನಿಗೆ ನೌಕರರ ಸಂಘ ತಾಕೀತು.....ಬೆಳಗಾವಿಯಲ್ಲಿ ಭರ್ಜರಿ ಎಂಟ್ರಿಗೆ ಸಜ್ಜಾದ Big Mishra ಹೊಸ ಅಧ್ಯಾಯಕ್ಕೆ ಸಜ್ಜಾದ ಸಂಜಯ ಮಿಶ್ರಾ ಅವರ Big Mishra.....ಶಿಕ್ಷಣ ಸಚಿವ ರನ್ನು ಭೇಟಿಯಾದ KSPSTA ನಿಯೋಗ.....ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತ್ರತ್ವದಲ್ಲಿ ಭೇಟಿ......