LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕನ ಆಸ್ತಿ ಮುಟ್ಟುಗೋಲು.....ಶಾಕ್ ನೀಡಿದ ಸರ್ಕಾರ.....

ಲಕ್ನೋ -

ಬ್ರಿಟಿಷ್‌ ಪೌರತ್ವ ಪಡೆದ ನಂತರ ವಿಷಯವನ್ನು ಮುಚ್ಚಿಟ್ಟು ಉತ್ತರ ಪ್ರದೇಶ ಸರ್ಕಾರದಿಂದ ಅಕ್ರಮ ವಾಗಿ ಸಂಬಳ ಪಿಂಚಣಿ ಹಾಗೂ ಇತರ ಭತ್ಯೆಗಳನ್ನು ಪಡೆಯುತ್ತಿದ್ದ ಶಿಕ್ಷಕ ಮೌಲಾನಾ ಶಂಸುಲ್‌ ಹುದಾ ಖಾನ್‌ ಅವರ 53.46 ಲಕ್ಷ ರೂಮೌಲ್ಯದ ಜಮೀನನ್ನು ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.ಉತ್ತರ ಪ್ರದೇಶದ ಸಂತ ಕಬೀರ್‌ ನಗರ ಜಿಲ್ಲೆಯ ಖಲೀಲಾಬಾದ್‌ ನಲ್ಲಿರುವ 189.75 ಚದರ ಮೀಟರ್‌ ವಿಸ್ತೀರ್ಣದ ವಸತಿ ಜಮೀನನ್ನು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿಯ ಲಕ್ನೋ ವಲಯ ಕಚೇರಿಯು ವಶಕ್ಕೆ ಪಡೆದಿದೆ.

ಇಡಿ ನೀಡಿದ ಮಾಹಿತಿಯಂತೆ ಶಂಸುಲ್‌ ಹುದಾ ಖಾನ್‌ ಡಿಸೆಂಬರ್‌ 2013 ರಲ್ಲಿ ಬ್ರಿಟಿಷ್‌ ಪೌರತ್ವ ಪಡೆದು ಭಾರತೀಯ ಪೌರತ್ವವನ್ನು ಕಳೆದು ಕೊಂಡಿದ್ದರು ಆದಾಗ್ಯೂ, ಈ ಸಂಗತಿಯನ್ನು ಮರೆಮಾಚಿ ಅಜಂಗಢದ ಮುಬಾರಕ್‌ಪುರದಲ್ಲಿರುವ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮುಂದುವರಿಸಿದ್ದರು.

2007 ರಿಂದ 2017 ರವರೆಗೆ ದಾಖಲೆಗಳಲ್ಲಿ ಸೇವೆ ಯಲ್ಲಿದ್ದ ಇವರಿಗೆ ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್‌್ಫ ಇಲಾಖೆಯ ಸೂಕ್ತ ಪರಿಶೀಲನೆಯಿಲ್ಲದೆ 2017 ರಲ್ಲಿ ಸ್ವಯಂಪ್ರೇರಿತ ನಿವೃತ್ತಿ ನೀಡಲಾಗಿತ್ತು. ಖಾನ್‌ ಸರ್ಕಾರದಿಂದ ಸಂಬಳ, ಪಿಂಚಣಿ, ಜಿಪಿಎಫ್‌ ಮತ್ತು ಇತರ ಭತ್ಯೆಗಳ ರೂಪದಲ್ಲಿ ಪಡೆದ ಒಟ್ಟು 53.46 ಲಕ್ಷ ರೂ.ಗಳನ್ನು ಇಡಿ ಅಪರಾಧದ ಆದಾಯ ಎಂದು ವ್ಯಾಖ್ಯಾನಿಸಿದೆ. ಬ್ರಿಟಿಷ್‌ ಪ್ರಜೆಯಾದ ನಂತರವೂ ಖಾನ್‌ ತಮ್ಮ ಶರಣಾದ ಭಾರತೀಯ

ಪಾಸ್‌‍ಪೋರ್ಟ್‌, ಪ್ಯಾನ್‌, ಆಧಾರ್‌ ಮತ್ತು ಮತ ದಾರರ ಗುರುತಿನ ಚೀಟಿಯನ್ನು ಬಳಸಿ ಸ್ಥಿರಾಸ್ತಿ ಯನ್ನು ಖರೀದಿಸಿದ್ದರು.ಯುಪಿ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡ ಇಡಿ, ಇದೇ ಫೆ. 11 ರಂದು ಸಂತ ಕಬೀರ್‌ ನಗರದಲ್ಲಿ ನಡೆಸಿದ ಶೋಧದ ವೇಳೆ ಪತ್ತೆಯಾದ ಪ್ರಮುಖ ದಾಖಲೆಗಳ ಆಧಾರದ ಮೇಲೆ ಈ ಆಸ್ತಿ ಜಪ್ತಿ ಕ್ರಮ ಕೈಗೊಂಡಿದೆ.ಅಲ್ಲದೆ, ಖಾನ್‌ ಬ್ರಿಟಿಷ್‌ ಪ್ರಜೆಯಾಗಿದ್ದಾಗ ಪಾಕಿಸ್ತಾನದ ಹಲವು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿ ದ್ದರು ಹಾಗೂ ಅವರ ಸಭೆಗಳಲ್ಲಿ ಭಾಗವಹಿಸುತ್ತಿದ್ದರು ಎಂದೂ ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಸುದ್ದಿ ಸಂತೆ ನ್ಯೂಸ್ ಲಕ್ನೋ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಖಾಸಗಿ ಶಾಲೆಯಲ್ಲಿ ಮಕ್ಕಳು ಓದುತ್ತಿದ್ದರೆ BPL ಕಾರ್ಡ್​ ರದ್ದು.....CM ಗೆ ಪತ್ರ.....ವರ್ಗಾವಣೆ ಗಾಗಿ ಹೋರಾಟದ ಹಾದಿ ಹಿಡಿದ ಶಿಕ್ಷಕರು.....ಶಿಕ್ಷಣ ಸಚಿವರ ಭೇಟಿ ಗೆ ನಿರ್ಧಾರ.....ಸರ್ಕಾರಿ ಶಾಲೆಗಳಿಗೆ ಬರಲಿದೆ ಮತ್ತೊಂದು ಹೊಸ ಯೋಜನೆ..... ಮಾಹಿತಿ ನೀಡಿದ ಶಿಕ್ಷಣ ಸಚಿವರು.....ಮಕ್ಕಳಿಲ್ಲದೆ ಖಾಲಿಯಾಗುತ್ತಿವೆ ಸರ್ಕಾರಿ ಶಾಲೆಗಳು: ಕೇವಲ 1 ಮಗುವಿನೊಂದಿಗೆ ನಡೆಯುತ್ತಿದೆ ಈ ಪ್ರಾಥಮಿಕ ಶಾಲೆ.....ರಾಜ್ಯದ ವಿದ್ಯಾರ್ಥಿ ಗಳಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ.....ಬೆಲೆ ಏರಿಕೆಯಾಗಿದೆ ನಮಗೂ ಹೆಚ್ಚು ಹಬ್ಬಕ್ಕೆ ಹಣ ಕೊಡಿ.....ರಾಜ್ಯ ಸರ್ಕಾರಿ ನೌಕರರ ಬೇಡಿಕೆ.....ಸರ್ಕಾರಿ ಅಧಿಕಾರಿಗಳಿಗೆ ನೌಕರರಿಗೆ ತಲೆನೋವು ತಂದಿಟ್ಟ ಹೊಸ ಆದೇಶ.....ತಪ್ಪದರೆ ಕ್ರಮದ ಎಚ್ಚರಿಕೆ.....ಹಬ್ಬದ ಮುಂಗಡ ಹಣ ಹೆಚ್ಚಳಕ್ಕೆ ಬೇಡಿಕೆ ಇಟ್ಟ ರಾಜ್ಯ ಸರ್ಕಾರಿ ನೌಕರರು.....CM ಗೆ ಪತ್ರ ಬರೆದ ರಾಜ್ಯ ಸರ್ಕಾರಿ ನೌಕರರ ಸಂಘಟನೆ.....BLO ಗಳಿಗೆ ಮತ್ತೊಂದು ಹೊಸ ಆದೇಶ ಜವಾಬ್ದಾರಿ.....ಆತಂಕವನ್ನುಂಟು ಮಾಡಿದ ಮತ್ತೊಂದು.....ಶಾಲೆಗೆ ಲಕ್ಷ ಲಕ್ಷ ಫೀಸ್ ಕಟ್ಟಿದರೂ ಮತ್ತೆ ಟ್ಯೂಷನ್‌ಗೆ ಯಾಕೆ ಹಣ ಕೊಡಬೇಕು ಶುರುವಾಯ್ತು ಹೊಸ ಚರ್ಚೆ.....