ಚಿಕ್ಕಬಳ್ಳಾಪುರ -
ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ ಕಟ್ಟಡ ಕಲ್ಲು ಗಣಿ ಗುತ್ತಿಗೆಗೆ ನಿರಪೇಕ್ಷಣಾ ಪತ್ರ ನೀಡಲು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು, ಕೊನೆಗೆ 43 ಸಾವಿರಕ್ಕೆ ಒಪ್ಪಿಕೊಂಡಿದ್ದ ಉಪ ವಲಯ ಅರಣ್ಯಾಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ ಗುಡಿಬಂಡೆ ತಾಲೂಕಿನ ಉಪ ವಲಯ ಅರಣ್ಯಾ ಧಿಕಾರಿ ವಿಶ್ವನಾಥ್ ಲೋಕಾಯುಕ್ತರ ಬಲೆಗೆ ಬಿದ್ದ ಅಧಿಕಾರಿ. ಗೌರಿಬಿದನೂರು ತಾಲೂಕಿನ ನಗರಗೆರೆ ಹೋಬಳಿಯ ಜಿ. ಕೊತ್ತೂರು ಗ್ರಾಮದ ಸರ್ವೆ ಸಂಖ್ಯೆ 356ರಲ್ಲಿ ಕಟ್ಟಡ ಕಲ್ಲು ಗಣಿ ಗುತ್ತಿಗೆ ಪಡೆಯಲು ಅರ್ಜಿ ದಾರರೊಬ್ಬರು ಮುಂದಾಗಿದ್ದರು ಇದಕ್ಕೆ ಸಂಬಂಧಿ ಸಿದಂತೆ ಅರಣ್ಯ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆಯಲು ವಿಶ್ವನಾಥ್ ಅವರನ್ನು ಸಂಪರ್ಕಿಸಿದ್ದರು.
ಈ ವೇಳೆ ನಿರಪೇಕ್ಷಣಾ ಪತ್ರ ನೀಡಲು ವಿಶ್ವನಾಥ್ ಅವರು 50 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಬಳಿಕ ಮಾತುಕತೆ ನಡೆಸಿ 43 ಸಾವಿರ ನೀಡುವಂತೆ ಕೇಳಿದ್ದರು. ಈ ಬಗ್ಗೆ ಅರ್ಜಿದಾ ರರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು
ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ್ ನೇತೃತ್ವ ದಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು 43 ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾ ಯುಕ್ತ ಪೊಲೀಸರು ವಿಶ್ವನಾಥ್ ಅವರನ್ನು ಹಿಡಿದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕಬಳ್ಳಾಪುರ.....