LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮುಖ್ಯಶಿಕ್ಷಕ ಸೇರಿ ಇಬ್ಬರ ಅಮಾನತು.....

ಹಾವೇರಿ -

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಚಳ್ಳಾಳದ ಆರ್‌.ಎಂ.ಎಸ್‌.ಎ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಬಿಸಿಯೂಟಕ್ಕೆ ಅಕ್ಕಿ ಕೊರತೆಯಾಗಿದ್ದ ಪ್ರಕರಣದಲ್ಲಿ, ಶಾಲೆಯ ಮುಖ್ಯ ಶಿಕ್ಷಕ ಎಫ್‌.ಸಿ. ಬಾಳಿಕಾಯಿ ಹಾಗೂ ಸಹಾಯಕ ನಿರ್ದೇಶಕ ಪಂಚಾಯಿತಿ ಸಹಾಯಕ ನಿರ್ದೇಶಕ ಟಿ.ಎಸ್. ಮಳವಳ್ಳಿ ಅವರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.ಶಾಲೆಯ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಅಗತ್ಯವಿರುವ ಅಕ್ಕಿ ಸರಬರಾಜು ಆಗಿರಲಿಲ್ಲ. ಗ್ರಾಮಸ್ಥರೇ ಶಾಲೆಗೆ ಅಕ್ಕಿ ಯನ್ನು ತಂದುಕೊಟ್ಟಿದ್ದರು. ಅಕ್ಕಿ ಕೊರತೆಯಾದ ಬಗ್ಗೆ ಸುದ್ದಿ ಪ್ರಕಟಗೊಂಡಿತ್ತು.

ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪಂಚಾಯಿತಿ ಸಿಇಒ ದಲ್ಜಿತ್‌ಕುಮಾರ್, ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ವರದಿ ಪಡೆದುಕೊಂಡಿದ್ದಾರೆ. ನಿರ್ಲಕ್ಷ್ಯ ಹಾಗೂ ಗಂಭೀರ ಲೋಪ ಎಸಗಿದ್ದ ಆರೋಪದಡಿ, ಮುಖ್ಯ ಶಿಕ್ಷಕ ಎಫ್‌.ಸಿ. ಬಾಳಿಕಾಯಿ ಹಾಗೂ ಸಹಾಯಕ ನಿರ್ದೇಶಕ ಪಂಚಾಯಿತಿ ಸಹಾಯಕ ನಿರ್ದೇಶಕ ಟಿ.ಎಸ್. ಮಳವಳ್ಳಿಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸುಮಾರು 15 ದಿನಗಳಿಂದ ವಿದ್ಯಾರ್ಥಿಗಳಿಗೆ ಬಿಸಿ ಯೂಟವನ್ನು ಸಮರ್ಪಕವಾಗಿ ಒದಗಿಸಿಲ್ಲವೆಂದು ಮಾಧ್ಯಮಗಳಲ್ಲಿ ಸುದ್ದಿ ಬಂದಿತ್ತು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಯವರು ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ. ಅಕ್ಕಿಯ ದಾಸ್ತಾನು ಇಲ್ಲದಿದ್ದರೂ ಅಕ್ಕಿ ಪೂರೈಕೆಗಾಗಿ ಮುಖ್ಯಶಿಕ್ಷಕರು, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಿಗೆ ಬೇಡಿಕೆ ಸಲ್ಲಿಸಿಲ್ಲ. ಗ್ರಾಮಸ್ಥರು ಸ್ವತಃ ಖರ್ಚಿನಲ್ಲಿ ಅಕ್ಕಿಯನ್ನು ಖರೀದಿಸಿ ಶಾಲೆಗೆ ನೀಡಿರುವುದಾಗಿ ಅವರೇ ಮಾಧ್ಯಮಗಳ ಎದುರು ಹೇಳಿಕೆ ನೀಡಿರುವುದು ಇಲಾಖೆಗೆ ತೀವ್ರ ಮುಜುಗರ ಉಂಟು ಮಾಡಿದೆ. ಸರ್ಕಾರದ ಮಹಾ ತ್ವಾಕಾಂಕ್ಷೆ ಯೋಜನೆಯ ಅನುಷ್ಠಾನದಲ್ಲಿ ಗಂಭೀರ ಲೋಪವನ್ನು ಬಹಿರಂಗಪಡಿಸಿದೆ. ನೋಟಿಸ್‌ ಕೊಟ್ಟರೂ ಮುಖ್ಯ ಶಿಕ್ಷಕ ಉತ್ತರ ನೀಡಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆ ಅನುಷ್ಠಾನದಲ್ಲಿ ಮೇಲ್ವಿಚಾರಣೆ ಕೈಗೊಳ್ಳುವ ಜವಾಬ್ದಾರಿ ಸಹಾಯಕ ನಿರ್ದೇಶಕರದ್ದಾಗಿದೆ. ಆದರೆ, ಅವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಗಂಭೀರ ನಿರ್ಲಕ್ಷ್ಯ ವಹಿಸಿರುವುದು ಗಮನಕ್ಕೆ ಬಂದಿದೆ’ ಎಂದು ಆದೇಶದಲ್ಲಿ ಉಲ್ಲೇಖಿ ಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಹಾವೇರಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುಖ್ಯಶಿಕ್ಷಕ ಸೇರಿ ಇಬ್ಬರ ಅಮಾನತು.....50 ಸಾವಿರಕ್ಕೆ ಬೇಡಿಕೆ 43 ಸಾವಿರಕ್ಕೆ ಡೀಲ್.....ಲಂಚ ಪಡೆಯುವಾಗಲೇ ಅಧಿಕಾರಿ ಟ್ರ್ಯಾಪ್.....ಹಬ್ಬ ಮುಗಿದ ಮೇಲೆ ಹಬ್ಬದ ಮುಂಗಡ ಹಣ ಘೋಷಣೆ..... ರಾಜ್ಯ ಸರ್ಕಾರಿ ನೌಕರರಿಗೆ ಮುಂಗಡ ಹಣ ಹೆಚ್ಚಳ.....ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.....ಶುಭ ಸುದ್ದಿ ಯ ಮಾಹಿತಿ ನೀಡಿದ CM..... ಶಾಲೆಗೆ ನುಗ್ಗಿ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ.....ಕಾರಣ ಕೇಳಿದರೆ ಶಾಕ್ ಆಗುತ್ತದೆ.....ಬಸ್ ಪ್ರಯಾಣದಲ್ಲಿ ಕಣ್ಣೀರಾಗಿಸಿದ ಶಿಕ್ಷಕನ ಕಥೆ.....ನೋವಿನ ನಡುವೆಯೂ ಕರ್ತವ್ಯ ನಿಭಾಯಿಸಿದ ತಂದೆ.....ಶಿಕ್ಷಕರಿಗೆ ಸಮೀಕ್ಷೆ ಕೆಲಸ ಬೇಡ ಬೋಧನೆಗೆ ಆದ್ಯತೆ ನೀಡಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಶಿಕ್ಷಣ ಸಚಿವರು.....ಮಕ್ಕಳ ಹಾಜರಾತಿ ಕಡಿಮೆಯಾದರೆ ಅಧಿಕಾರಿಗಳೇ ಹೊಣೆ.....ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ಸಂದೇಶ.....ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆ ದಿನಾಂಕ ಪೈನಲ್ .....ಅಮೆರಿಕಾದಲ್ಲಿ ಸರ್ಕಾರಿ ಶಾಲೆ ಶಿಕ್ಷಕರು ಪಡೆಯುವ ಸಂಬಳ ಕೇಳಿದರೆ ದಂಗಾಗುವುದು ಗ್ಯಾರಂಟಿ