ಬೆಂಗಳೂರು -
ಸರ್ಕಾರಿ ನೌಕರರು,ಪಿಂಚಣಿದಾರರಿಗೆ ಸಿಹಿಸುದ್ದಿ; ದೀಪಾವಳಿ ಉಡುಗೊರೆಯಾಗಿ DA ಹೆಚ್ಚಳ ಹೌದು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 2026ರ ಜುಲೈ ತಿಂಗಳಿಂದ ಜಾರಿಗೆ ಬರಬೇಕಿರುವ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರ (DR) ಹೆಚ್ಚಳದ ಸುದ್ದಿಗಾಗಿ ಈ ಹಬ್ಬದ ಋತುವಿನಲ್ಲಿ ಕಾತರದಿಂದ ಕಾಯುತ್ತಿದ್ದಾರೆ.
ಹೌದುದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ.2026ರ ಜುಲೈ ತಿಂಗಳಿಂದ ಅನ್ವಯವಾಗಬೇಕಿರುವ ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರ (DR)ವನ್ನು ಶೇ.3ರಷ್ಟು ಹೆಚ್ಚಿಸುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ.
ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದರೆ, ಡಿಎ ಶೇ.60ರಿಂದ ಶೇ.63ಕ್ಕೆ ಏರಿಕೆಯಾ ಗಲಿದ್ದು, ನೌಕರರಿಗೆ ಮೂರು ತಿಂಗಳ ಬಾಕಿ ಹಣವೂ ಸಿಗುವ ಸಾಧ್ಯತೆಯಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರದಿಂದ ಇನ್ನೂ ಅಧಿಕೃತ ಘೋಷಣೆ ಹೊರ ಬಿದ್ದಿಲ್ಲ.
ಪ್ರಸ್ತುತ ಶೇ.60ರಷ್ಟಿರುವ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆಯಿದೆ ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ.ಈ ಪ್ರಸ್ತಾವನೆಗೆ ಅಂತಿಮ ಅನುಮೋ ದನೆ ದೊರೆತರೆ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.60ರಿಂದ ಶೇ.63ಕ್ಕೆ ಏರಿಕೆಯಾಗಲಿದೆ. ಇದರಿಂದ ನೌಕರರ ಮಾಸಿಕ ವೇತನದಲ್ಲಿ ಹೆಚ್ಚಳವಾಗಲಿದೆ.
ಉದಾಹರಣೆಗೆ, ಒಬ್ಬ ನೌಕರನ ಕನಿಷ್ಠ ಮೂಲ ವೇತನ ₹18,000 ಇದ್ದರೆ, ಪ್ರಸ್ತುತ ಶೇ.60ರ ತುಟ್ಟಿಭತ್ಯೆಯ ಪ್ರಕಾರ ತಿಂಗಳಿಗೆ ₹10,800 ದೊರೆಯುತ್ತದೆ. ಡಿಎ ಶೇ.63ಕ್ಕೆ ಏರಿಕೆಯಾದರೆ, ಈ ಮೊತ್ತ ₹11,340ಕ್ಕೆ ಹೆಚ್ಚಳವಾಗುತ್ತದೆ. ಅಂದರೆ, ನೌಕರರಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ₹540 ಲಭಿಸಲಿದೆ.
ಈ ಹೆಚ್ಚಳವು 2026ರ ಜುಲೈ ತಿಂಗಳಿಂದಲೇ ಜಾರಿಗೆ ಬಂದರೆ, ನೌಕರರಿಗೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಮೂರು ತಿಂಗಳ ಬಾಕಿ ಹಣವೂ (ಅರಿಯರ್ಸ್) ಒಟ್ಟಿಗೆ ಸಿಗುವ ಸಾಧ್ಯತೆಯಿದೆ. ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಹಬ್ಬದ ಉಡುಗೊರೆಯಾಗಿ ಈ ಘೋಷಣೆ ಮಾಡಬಹುದು ಎಂದು ನೌಕರರ ಸಂಘಟನೆಗಳು ನಿರೀಕ್ಷಿಸುತ್ತಿವೆ.
ಕಳೆದ ಐದು ವರ್ಷಗಳ ಬೆಳವಣಿಗೆಗಳನ್ನು ಗಮನಿಸಿದರೆ, ಜುಲೈ ಅವಧಿಯ ಡಿಎ ಹೆಚ್ಚಳದ ನಿರ್ಧಾರವನ್ನು ಕೇಂದ್ರ ಸರ್ಕಾರ ಸಾಮಾನ್ಯವಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಥವಾ ಅಕ್ಟೋಬರ್ ತಿಂಗಳಲ್ಲಿ ಪ್ರಕಟಿಸುತ್ತಾ ಬಂದಿದೆ. ಈ ಬಾರಿ ಘೋಷಣೆ ವಿಳಂಬವಾಗಿದ್ದರೂ, ದೀಪಾವ ಳಿಗೂ ಮುನ್ನ ಕೇಂದ್ರ ಸಚಿವ ಸಂಪುಟದಿಂದ ಅಧಿಕೃತ ಪ್ರಕಟಣೆ ಹೊರಬೀಳಬಹುದು ಎಂಬ ನಿರೀಕ್ಷೆ ಇದೆ.
ಆದರೆ, ಡಿಎ ಹೆಚ್ಚಳದ ಪ್ರಮಾಣ, ಜಾರಿಗೆ ಬರುವ ದಿನಾಂಕ ಹಾಗೂ ಬಾಕಿ ಹಣದ ಪಾವತಿ ಕುರಿತು ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ ಅಧಿಕೃತ ಪ್ರಕಟಣೆ ಹೊರಬಿದ್ದ ನಂತರವೇ ಸ್ಪಷ್ಟವಾಗಲಿದೆ. ಸದ್ಯಕ್ಕೆ ಶೇ.3ರಷ್ಟು ಹೆಚ್ಚಳದ ಬಗ್ಗೆ ನಿರೀಕ್ಷೆಗಳು ವ್ಯಕ್ತವಾಗಿದ್ದು, ಇದನ್ನು ಖಚಿತ ನಿರ್ಧಾರವೆಂದು ಪರಿಗಣಿಸಬಾರದು.
ಸುದ್ದಿ ಸಂತೆ ನ್ಯೂಸ್