LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಾಲ್ಕು ದಿನ ರಜೆ ಸಾಲು ಸಾಲು ರಜೆ ಆಗಮನ.....ರಜೆಯ ಕಂಪ್ಲೀಟ್ ಮಾಹಿತಿ.....

ಬೆಂಗಳೂರು -

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆಯ ಹಿನ್ನೆಲೆ ಅರ್ಹ ಮತದಾರರಿಗೆ ಅನುಕೂಲವಾಗುವಂತೆ ಒಂದು ದಿನ 'ವಿಶೇಷ ಸಾಂದರ್ಭಿಕ ರಜೆ' ಘೋಷಿಸಿದೆ ಈ ಕುರಿತು ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.ಇದರ ಬೆನ್ನಲ್ಲೇ ವಾರಾಂತ್ಯದ ರಜೆಗಳು ಹಾಗೂ ಸರ್ಕಾರಿ ರಜೆ ಒಟ್ಟಿಗೆ ಬಂದಿರುವುದರಿಂದ, ಮತದಾರ ನೌಕರರಿಗೆ ಸತತ 4 ದಿನಗಳ ಸಾಲು ರಜೆ ಸಿಕ್ಕಂತಾಗಿದೆ.ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರ: ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರ: ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ

ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ: ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಬೆಂಗಳೂರು ಶಿಕ್ಷಕರ ಕ್ಷೇತ್ರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ (ರಾಮನಗರ)ಚುನಾವಣಾ ಆಯೋಗವು ನಿಗದಿಪಡಿಸಿರುವಂತೆ ಈ ಕ್ಷೇತ್ರಗಳಲ್ಲಿ ಮತದಾನದ ಹಕ್ಕು ಹೊಂದಿರುವ ಅರ್ಹ ಪದವೀಧ ರರು ಹಾಗೂ ಶಿಕ್ಷಕ ಮತದಾರರು ಮತ ಚಲಾಯಿ ಸಲು ಈ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲಾಗಿದೆ.

ಸತತ 4 ದಿನಗಳ 'ಸಾಲು ರಜೆ' ವಿವರ

ಅಕ್ಟೋಬರ್ 23 ರಂದು ಮತದಾನದ ರಜೆ ಸಿಗುತ್ತಿರುವುದರಿಂದ, ನೌಕರರಿಗೆ ಶುಕ್ರವಾರದಿಂದ ಸೋಮವಾರದವರೆಗೆ ಸತತ 4 ದಿನಗಳ ರಜೆ ಲಭ್ಯವಾಗಲಿದೆ

ಅಕ್ಟೋಬರ್ 23 (ಶುಕ್ರವಾರ): ವಿಧಾನ ಪರಿಷತ್ ಚುನಾವಣೆ ಮತದಾನದ ವಿಶೇಷ ಸಾಂದರ್ಭಿಕ ರಜೆ. ಅಕ್ಟೋಬರ್ 24 (ಶನಿವಾರ) ವಾರಾಂತ್ಯದ ರಜೆ  ಸರ್ಕಾರಿ ನೌಕರರಿಗೆ ರಜೆ. ಅಕ್ಟೋಬರ್ 25 (ಭಾನುವಾರ) ಸಾರ್ವತ್ರಿಕ ವಾರದ ರಜೆ. ಅಕ್ಟೋಬರ್ 26 (ಸೋಮವಾರ): ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಸಾರ್ವತ್ರಿಕ ರಜೆ.

ಹೀಗಾಗಿ ಮತ ಚಲಾಯಿಸಲು ತಮ್ಮ ಊರುಗಳಿಗೆ ತೆರಳುವ ಮತದಾರರಿಗೆ ಯಾವುದೇ ತರಾತುರಿ ಯಿಲ್ಲದೆ ಮತದಾನ ಮುಗಿಸಿ, ಸಾಲು ರಜೆಯನ್ನು ಸದುಪಯೋಗಪಡಿಸಿಕೊಳ್ಳಲು ಉತ್ತಮ ಅವಕಾಶ ಸಿಕ್ಕಂತಾಗಿದೆ.

ಮುಖ್ಯ ಷರತ್ತುಗಳು ಹಾಗೂ ಸೂಚನೆಗಳು ಪೂರ್ವಾನುಮತಿ ಕಡ್ಡಾಯ: ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ನೌಕರರು ತಮ್ಮ ಕಚೇರಿಯ ಸಕ್ಷಮ ಪ್ರಾಧಿಕಾರದಿಂದ (ಮೇಲಧಿಕಾರಿಗಳಿಂದ) ನಿಯಮಾನುಸಾರ ಪೂರ್ವಾ ನುಮತಿ ಪಡೆದಿರಬೇಕು.ಮತದಾರರಿಗೆ ಮಾತ್ರ ಸೀಮಿತ: ಇದು ಸಾರ್ವತ್ರಿಕ ರಜೆಯಾಗಿರುವುದಿಲ್ಲ. ಕೇವಲ ಮೇಲೆ ಉಲ್ಲೇಖಿಸಿದ ನಾಲ್ಕು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಹೆಸರಿರುವ ಅರ್ಹ ಶಿಕ್ಷಕರು ಹಾಗೂ ಪದವೀಧರರಿಗೆ ಮಾತ್ರ ಈ ರಜೆ ಅನ್ವಯ ವಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
Big Mishra ದಿಂದ ವಿಜಯ ದಶಮಿ ಹಬ್ಬದ ಶುಭಾಶಯಗಳು.....ಸಂಸ್ಥೆಯ ಪರವಾಗಿ ಶುಭ ಕೋರಿದ ಸಂಜಯ ಮಿಶ್ರಾ.....ನಾಲ್ಕು ದಿನ ರಜೆ ಸಾಲು ಸಾಲು ರಜೆ ಆಗಮನ.....ರಜೆಯ ಕಂಪ್ಲೀಟ್ ಮಾಹಿತಿ.....ಹಳೆ ಪಿಂಚಣಿ ಯೋಜನೆ ಗೆ ಕಾನೂನಾತ್ಮಕ ಸಂವಿಧಾನಾತ್ಮಕ ತೊಡಕು.....ಮಾಹಿತಿ ನೀಡಿದ ಗೃಹ ಸಚಿವರು..... ಶಿಕ್ಷಣ ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ಆರೋಪ.....ಆ ಲೇಡಿ ಕಂಪ್ಲೀಟ್ ಕೊಟ್ಟರೆ ಸಚಿವರು ಜೈಲಿಗೆ ಹೋಗುತ್ತಾರಂತೆ.....ದಸರಾ ರಜೆಯಲ್ಲಿ ಸರ್ಕಾರಿ ಶಾಲಾ ಮಕ್ಕಳ ಕಾರ್ಯ ವೈರಲ್.....ಮಕ್ಕಳು ಮಾಡಿದ ಕೆಲಸ ನೋಡಿದರೆ ಶಾಕ್ ಆಗುತ್ತದೆ.....ರಾಜ್ಯ ಸರ್ಕಾರಿ ನೌಕರರಿಗೆ ನವೆಂಬರ್ ‌1 ರಿಂದ ಹೊಸ ನಿಯಮಗಳು.....ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ DA ಹೆಚ್ಚಳ.....ಸರ್ಕಾರಿ ನೌಕರರಿಗೆ ಕಿರುಕುಳ ತಪ್ಪಿಸಲು ಸರ್ಕಾರಿ ನೌಕರರಿಗೆ ಸಕಾಲ.....ಸರ್ಕಾರಿ ನೌಕರರಿಗೆ ಆಸರೆಯಾಗಲಿದೆ ಸಕಾಲ.....ಆಫ್ರಿಕಾದಲ್ಲಿ ಶಾಲಾ ಶಿಕ್ಷಕರ ವೇತನ ಕೇಳಿದರೆ ಶಾಕ್ ಆಗುತ್ತದೆ.....ಬೇಸಿಕ್ ಪೇ, ಗ್ರೇಡ್ ಪೇ, ಪೇ ಲೆವೆಲ್‌ ಎಂದರೇನು.....ನೌಕರರು ತಿಳಿಯಲೇಬೇಕಾದ ಮಾಹಿತಿ.....