LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯದ ಸರ್ಕಾರಿ ನೌಕರರಿಂದಲೂ ಯೋಗ ದಿನಾಚರಣೆ - ಎಲ್ಲೆಲ್ಲಿ ಹೇಗೆ ಆಚರಣೆ ಇತ್ತು ಗೊತ್ತಾ.....

ಧಾರವಾಡ -

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ರಾಜ್ಯದಲ್ಲಿ ಸರ್ಕಾರಿ ನೌಕರರು ಕೂಡಾ ಆಚರಣೆ ಮಾಡಿದರು ಹೌದು ರಾಜ್ಯದ ತುಂಬೆಲ್ಲಾ ಸರ್ಕಾರಿ ನೌಕರರು ಈ ಒಂದು ಯೋಗ ದಿನವನ್ನು ಆಚರಣೆ ಮಾಡಿದ್ದು ಕಂಡು ಬಂದಿತು.

ಧಾರವಾಡ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ದಲ್ಲಿ ಯೋಗ ನಮ್ಮ ಸಂಸ್ಕೃತಿ.ಯೋಗವನ್ನು ನಮ್ಮ ದಿನಚ ರಿಯ ಒಂದು ಭಾಗವಾಗಿ ಸ್ವೀಕರಿಸಿ ಪಾಲಿಸಬೇಕು ಇದ ರಿಂದ ರೋಗರುಜಿನ ಮುಕ್ತ,ಆರೋಗ್ಯಯುಕ್ತ ಜೀವನ ಪಡೆಯಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಜಿ.ಬಿ.ಮನ್ನಿಕೇರಿ ಅವರು ಹೇಳಿದರು.ನಗರದಲ್ಲಿ ರಾಜ್ಯ ಸರಕಾರಿ ನೌಕರ ಸಂಘದ ಸಭಾವನದಲ್ಲಿ 8 ನೇ ವಿಶ್ವ ಯೋಗ ದಿನಾಚರಣೆ ಅಂಗ ವಾಗಿ ಆಯೋಜಿಸಿರುವ ವಿಶೇಷ ಯೋಗ ಶಿಬಿರ ಉದ್ಘಾ ಟಿಸಿ ಮಾತನಾಡಿದರು.

ಯೋಗ ಮಾಡುವದರಿಂದ ರೋಗ ಮುಕ್ತ ಜೀವನ ಪಡೆಯಬಹುದು.ಯೋಗ ಅಭ್ಯಾಸವನ್ನು ರೂಡಿಯಾಗಿ ಬೆಳೆಸಿಕೊಳ್ಳಬೇಕು.ಇಡೀ ವಿಶ್ವ ಇಂದು ಯೋಗದತ್ತ ಹೊರಳುತ್ತಿದೆ.ಪ್ರಾಚೀನ ಕಾಲದಿಂದಲೂ ಯೋಗವು ಭಾರತೀಯ ಪರಂಪರೆಯ ಒಂದು ಭಾಗವಾಗಿ ಬೆಳೆದು ಬಂದಿದೆ ಎಂದು ಅವರು ಹೇಳಿದರು.

https://youtu.be/6DP9aX1Xcj8

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಮಾತನಾಡಿ ನೌಕರರಿಗೆ ಕರ್ತವ್ಯದಷ್ಟು ಆರೋಗ್ಯವು ಬೇಕು ಪ್ರತಿದಿನ ಒತ್ತಡ,ನಿರಂತರದ ಕೆಲಸದಿಂದ ಆಯಾಸವಾ ಗುತ್ತದೆ. ಪ್ರತಿದಿನ ಯೋಗ ಮಾಡುವದರಿಂದ ಸಮರ್ಪಕ ವಾಗಿ ಕಾರ್ಯ ಮಾಡಬಹುದು.ವಿಶ್ವ ಯೋಗ ದಿನದ ಅಂಗವಾಗಿ ಸರಕಾರಿ ನೌಕರ ಮತ್ತು ಅವರ ಕುಟುಂಬದವ ರಿಗಾಗಿ ಜಿಲ್ಲಾ ಘಟಕದಿಂದ 15 ದಿನಗಳ ವಿಶೇಷ ಯೋಗ ಶಿಬಿರವನ್ನು ಆಯೋಜಿಸಲಾಗಿದೆ.ಎಲ್ಲರೂ ಪಾಲ್ಗೋಳ್ಳಬೇ ಕೆಂದು ಅವರು ಹೇಳಿದರು.

ಪತಂಜಲಿ ಯೋಗ ಘಟಕದ ಜಿಲ್ಲಾ ಸಂಚಾಲಕ ಮಲ್ಲನ ಗೌಡ ಪಾಟೀಲ ಶಿಬಿರ ನಿರ್ವಹಿಸಿದರು.ರಾಜ್ಯ ಸರಕಾರಿ ನೌಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಸುಬ್ಬಾಪುರಮಠ, ಖಜಾಂಚಿ ರಾಜಶೇಖರ ಬಾಣದ, ಕ್ರೀಡಾ ಕಾರ್ಯದರ್ಶಿ ಮಲ್ಲಿಕಾರ್ಜುನ ಸೋಲಗಿ,ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ,ಉಪಾಧ್ಯಕ್ಷ ವಿನಯ ಮುಶ ಣ್ಣವರ,ನೌಕರ ಭವನದ ಕಾರ್ಯದರ್ಶಿ ಗಿರೀಶ ಚೌಡಕಿ ಮಾಜಿ ಅಧ್ಯಕ್ಷ ಎಸ್.ಕೆ‌.ರಾಮದುರ್ಗ,ಜಿಲ್ಲಾ ವಯಸ್ಕರ ಶಿಕ್ಷಾಣಾಧಿಕಾರಿ ಎ.ಎ.ಖಾಜಿ, ಕೆಜಿಐಡಿ ಅಧಿಕಾರಿ ಜೆ.ಸಿ ಕಠಾರಿ ಸೇರಿದಂತೆ ಇತರರು ಇದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....