LIVE TV LocalCrimeNationalInternationalPoliticsEducationTechnologyEntertainmentSportsFeature
State News

ಪಿಂಚಣಿಗಾಗಿ ಮಾಜಿ ಶಾಸಕರ ಪತ್ನಿ ಪರದಾಟ – ಪಿಂಚಣಿಗಾಗಿ ಇವರ ಪರದಾಟ ಇತ್ತ ಇದಕ್ಕಾಗಿ ಸರ್ಕಾರಿ ನೌಕರರ ಹೋರಾಟ

ಸಕಲೇಶಪುರ -

ಎರಡು ಬಾರಿ ಶಾಸಕರಾಗಿದ್ದ ಪತ್ನಿಯೊಬ್ಬರೊ ಬ್ಬರು ಪಿಂಚಣಿಗಾಗಿ ಪರದಾಡುತ್ತಿರುವ ಚಿತ್ರಣ ವೊಂದು ರಾಜ್ಯದಲ್ಲಿ ಬೆಳಕಿಗೆ ಬಂದಿದೆ.ಹೌದು ಸಕಲೇಶಪುರ ಶಾಸಕರಾಗಿದ್ದ ಜೆ ಡಿ ಸೋಮಪ್ಪ ಅವಪ ಪತ್ನಿ ಪಿಂಚಣಿಗಾಗಿ ಪರದಾಡುತ್ತಿದ್ದಾರೆ. ಸಕಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಜೆ.ಡಿ ಸೋಮಪ್ಪ ಪತ್ನಿಗೆ ನೀಡುವ ಪಿಂಚಣಿಯನ್ನು 25 ತಿಂಗಳಿಂದ ತಡೆ ಹಿಡಿಯಲಾಗಿದೆ.

ವಿವಿಧ ಕಾಯಿಲೆಗಳಿಂದ ನರಳುತ್ತಿರುವ ಇವರ ಚಿಕಿತ್ಸೆಗೆ ಆರ್ಥಿಕ ಸಮಸ್ಯೆ ಉಂಟಾಗಿದೆ.ಬೆನ್ನು ಹುರಿ ಶಸ್ತ್ರಚಿಕಿತ್ಸೆಗೆ ಈವರೆಗೆ ಸುಮಾರು 7 ಲಕ್ಷ ಖರ್ಚಾಗಿದ್ದು ಈ ಹಣವನ್ನು ಸರ್ಕಾರ ನಾಲ್ಕು ವರ್ಷಗಳಿಂದ ನೀಡದೇ ನಿರ್ಲಕ್ಷಿಸಿದ್ದು ಪಟ್ಟಣದ ಲಕ್ಷ್ಮಿಪುರ ಬಡಾವಣೆಯಲ್ಲಿ ವಾಸವಿರುವ ಜೆ.ಡಿ ಸೋಮಪ್ಪ ಪತ್ನಿ 79 ವರ್ಷದ ಜಯಮ್ಮ ಎದ್ದು ನಡೆದಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಮನೆ, ಆಸ್ತಿ ಮಾರಿ ರಾಜಕಾರಣ ಮಾಡಿದ್ರು ನಾನು ಎದುರಿಸುತ್ತಿರುವ ಸಮಸ್ಯೆ ಹೇಳಿಕೊಳ್ಳುವುದಕ್ಕೆ ನೋವಾಗುತ್ತದೆ ಎಂಬ ಮಾತನ್ನು ಹೇಳುತ್ತಿದ್ದಾರೆ.

ಆಲೂರು-ಸಕಲೇಶಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ರು ಪುರಸಭೆ ಅಧ್ಯಕ್ಷರಾಗಿ ಶಾಸಕರಾಗಿದ್ದಾಗ ಒಂದು ಹಂಚಿನ ಮನೆಯಲ್ಲಿ ಬಾಡಿಗೆಗೆ ಇದ್ವಿ ಮನೆ ಆಸ್ತಿ ಮಾರಾಟ ಮಾಡಿ ರಾಜಕಾರಣ ಮಾಡಿದ್ರು ಎಂದು ಜಯಮ್ಮ ಹೇಳುತ್ತಾರೆ.ಈಗಲೂ ನಾವು ಅವರ ಪಿಂಚಣಿ ಹಣದಲ್ಲಿ ಬದುಕುತ್ತಿದ್ದೇನೆ.ಆದರೆ 2021ರ ಜನವರಿಯಿಂದ ಪಿಂಚಣಿ ನಿಲ್ಲಿಸಿರುವುದರಿಂದ ಆಸ್ಪತ್ರೆ ಹಾಗೂ ಇತರ ವೆಚ್ಚಕ್ಕಾಗಿ ಸಂಬಂಧಿಕರ ಬಳಿ ಸಾಲ ಮಾಡಿದ್ದೇನೆ ಕೈಯಲ್ಲಿ ಒಂದು ರೂಪಾಯಿ ದುಡ್ಡಿಲ್ಲ ಎಂದು ನೊಂದು ನುಡಿದರು.

ಪಿಂಚಣಿ ಹಣ ಕೆನರಾ ಬ್ಯಾಂಕ್‌ ಖಾತೆಗೆ ಬರುತ್ತಿತ್ತು ಬ್ಯಾಂಕ್‌,ಖಜಾನೆ ಇಲಾಖೆ, ವಿಧಾನ ಸೌಧ ಸುತ್ತಾಡಿ ಸುಸ್ತಾಗಿದ್ದೇನೆ.ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಸಹ ಅಧಿಕಾರಿಗಳಿಗೆ ಪೋನ್‌ ಮಾಡಿ ತಡೆ ಹಿಡಿದಿರುವ ಪಿಂಚಣಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿದ್ದರು ಆದರೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ನನಗೆ ಯಾರೂ ಸಹಾಯ ಮಾಡೋರಿಲ್ಲ. ತುಂಬಾ ಕಷ್ಟವಾಗಿದೆ ಎಂದರು.

2018 ರಿಂದ 2020ರ ನಡುವೆ ಸರ್ಕಾರ ನಿಗದಿಗೊಳಿಸಿರುವ ಪಿಂಚಣಿ ಮೊತ್ತಕ್ಕಿಂತ ಪ್ರತಿ ತಿಂಗಳು ₹ 10 ರಿಂದ ₹ 11 ಸಾವಿರದಷ್ಟು ಹೆಚ್ಚು ವರಿ ಹಣವನ್ನು ಅಧಿಕಾರಿಗಳು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ.ಅದೇ ಸಮಯದಲ್ಲಿ ಅಮ್ಮ ಸ್ಪೈನಲ್‌ ಕಾರ್ಡ್‌ ಚಿಕಿತ್ಸೆಗಾಗಿ ವರ್ಷವೆಲ್ಲಾ ಬೆಂಗಳೂರಿನ ಆಸ್ಪತ್ರೆ ವಿಶ್ರಾಂತಿಯಲ್ಲಿಯೇ ಇದ್ದರು.ಅವರಿಗೂ ಆ ಬಗ್ಗೆ ಅಷ್ಟಾಗಿ ಗೊತ್ತಾಗಿಲ್ಲ. 2021ರ ಜನವರಿಯಿಂದ ಪಿಂಚಣಿಯನ್ನು ಸಂಪೂರ್ಣ ತಡೆಹಿಡಿದಿದ್ದಾರೆ ಎಂದು ಸೋಮಪ್ಪ ಅವರ ಪುತ್ರ ಹೇಮಂತಕುಮಾರ್‌ ಜೆ.ಡಿ. ತಿಳಿಸಿದರು

ಅದು ಅಧಿಕಾರಿಗಳ ಕಣ್ತಪ್ಪಿನಿಂದ ಆಗಿರುವ ತಾಂತ್ರಿಕ ದೋಷ. 25 ತಿಂಗಳಿಂದ ಸುಮಾರು ₹ 7.5 ಲಕ್ಷಕ್ಕೂ ಹೆಚ್ಚು ಪಿಂಚಣಿ ಹಣ ಬರಬೇಕು. ಇವರ ಖಾತೆಗೆ ಹಾಕಿರುವ ಹೆಚ್ಚುವರಿ ಕಳೆದರೂ ಇನ್ನೂ ಸುಮಾರು 2 ಲಕ್ಷ ಬಾಕಿ ಬರಬೇಕಿದೆ.ತಪ್ಪು ಮಾಡಿರುವ ಅಧಿಕಾರಿಗಳ ಬಗ್ಗೆ ಸರ್ಕಾರ ತನಿಖೆ ನಡೆಸಲಿ.ಇಲಾಖೆ ಅಧಿಕಾರಿಗಳು ಮಾಡಿರುವ ತಪ್ಪಿಗೆ ಹಾಸಿಗೆ ಹಿಡಿದಿರುವ ಅಮ್ಮನಿಗೆ ಸಮಸ್ಯೆ ಉಂಟಾಗಿದೆ.ಸರ್ಕಾರ ಕೂಡಲೆ ತಡೆಹಿಡಿದಿರುವ ಪಿಂಚಣಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದು ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಸಕಲೇಶಪುರ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....