LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಕಲಿ ಅಂಕಪಟ್ಟಿ ನೀಡಿ ಮುಂಬಡ್ತಿ ಪಡೆದ ಸರ್ಕಾರಿ ನೌಕರನ ಮೇಲೆ FIR ದಾಖಲು.....

ಕೋಲಾರ -

ನಕಲಿ ಅಂಕಪಟ್ಟಿ ನೀಡಿ ಮುಂಬಡ್ತಿ ಪಡೆದ ನೌಕರರ ವಿರುದ್ಧ ಎಫ್‌ಐಆರ್‌ ದಾಖಲಾದ ಘಟನೆ ಕೋಲಾರ ದಲ್ಲಿ ಬೆಳಕಿಗೆ ಬಂದಿದೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಇಲಾಖಾ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿರುವುದಾಗಿ ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ ಸಲ್ಲಿಸಿ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗೆ ಮುಂಬಡ್ತಿ ಪಡೆದು ಸರ್ಕಾರಕ್ಕೆ ವಂಚಿಸಿದ್ದ ಆರೋಪದಲ್ಲಿ ಶ್ರೀನಿವಾಸ ಪುರ ಪುರಸಭೆಯ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಎಲ್‌.ಅಜಿತ್ ಕುಮಾರ್ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ನೌಕರನನ್ನು ಕರ್ತವ್ಯದಿಂದ ಈಗಾಗಲೇ ಜಿಲ್ಲಾಧಿ ಕಾರಿ ಅಮಾನತುಗೊಳಿಸಿದ್ದಾರೆ. ಜಿಲ್ಲಾಧಿಕಾರಿ ಸೂಚನೆಯಂತೆ ಈಗ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ, ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ. ವಂಚನೆ ಸಂಬಂಧ ಅವರು ದೂರು ನೀಡಿದ್ದರು.

ಈ ವಿಚಾರದಲ್ಲಿ ದ್ರಾವಿಡ ವಿಮೋಚನಾ ಸಂಘದ ಹೋರಾಟಕ್ಕೆ ಜಯ ಲಭಿಸಿದೆ ಎಂದು ಅಧ್ಯಕ್ಷ ಕೆ.ಎಂ.ಅನಂತಕೀರ್ತಿ ಹೇಳಿದ್ದು ಇದರ ನಡುವೆ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ಕೋಲಾರ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಕೊಡುಗೆ.....ತುಟ್ಟಿಭತ್ಯೆ ಹೆಚ್ಚಳ‌ ಮಾಡಿ ಆದೇಶ.....ಧಾರವಾಡ ಬಿಗ್ ಮಿಶ್ರಾ ಸಂಸ್ಥೆಗೆ ರಾಷ್ಟ್ರಮಟ್ಟದ ಗೌರವದ ಗರಿ.....‘PILLARS OF WMNC 2026’ ವಿಶೇಷ ಮನ್ನಣೆಗೆ ಸಂಜಯ್ ಮಿಶ್ರಾ ಆಹ್ವಾನ.....ದೀಪಾವಳಿ ಹಬ್ಬಕ್ಕೆ ಬಿಗ್ ಮಿಶ್ರಾದಿಂದ ಗ್ರಾಹಕರಿಗೆ ಭರ್ಜರಿ ಕೊಡುಗೆ.....ಮುಂಗಡ ಬುಕ್ಕಿಂಗ್‌ಗೆ ಶೇ.10ರಷ್ಟು ರಿಯಾಯಿತಿ.....ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ..... ರಾಜ್ಯದಲ್ಲಿ ಕಡಿಮೆಯಾಗದ ಟ್ರ್ಯಾಪ್ ಪ್ರಕರಣ ಗಳು.....ನಕಲಿ ಅಂಕಪಟ್ಟಿ ನೀಡಿ ಮುಂಬಡ್ತಿ ಪಡೆದ ಸರ್ಕಾರಿ ನೌಕರನ ಮೇಲೆ FIR ದಾಖಲು.....ಸರ್ಕಾರಿ ಶಾಲೆಗೆ ಬಂದ ಶಿಕ್ಷಕರಿಗೆ ಶಾಕ್.....15 ತಿಂಗಳಿಂದ ಸಿಕ್ಕಿಲ್ಲ ವೇತನ ಜೀವನವೇ ಕಂಗಾಲು.....ಶಿಕ್ಷಕರ ವೇತನ ಬಿಡುಗಡೆಗೆ ಇಲಾಖೆಯ ಆಯುಕ್ತರ ಭೇಟಿ ಮಾಡಿದ ನೂತನ MLC ಎ.ಪಿ.ರಂಗನಾಥ್.....ಜೈಲು ಸೇರಿದ BEO ಕಚೇರಿ ಅಧೀಕ್ಷಕ‌‌‌‌‌‌....ತನಿಖೆ ಕೈಗೊಂಡ ಲೋಕಾ ಅಧಿಕಾರಿಗಳು.....ವರ್ಗಾವಣೆ ಗೊಂಡ ಮಹಿಳಾ ಅಧಿಕಾರಿಗೆ ಸರ್ಕಾರಿ ನೌಕರರಿಂದ ಸನ್ಮಾನ ಗೌರವ ಬೀಳ್ಕೊಡುಗೆ.....ಸ್ಟಾಫ್ ರೂಂನಲ್ಲೇ ಪ್ರಾಧ್ಯಾಪಕನಿಗೆ ಗ್ರಹಚಾರ ಬಿಡಿಸಿದ ವಿದ್ಯಾರ್ಥಿನಿಯರು