LIVE TV LocalCrimeNationalInternationalPoliticsEducationTechnologyEntertainmentSportsFeature
State News

ವರ್ಗಾವಣೆ ಗೊಂಡ ಮಹಿಳಾ ಅಧಿಕಾರಿಗೆ ಸರ್ಕಾರಿ ನೌಕರರಿಂದ ಸನ್ಮಾನ ಗೌರವ ಬೀಳ್ಕೊಡುಗೆ.....

ಉಡುಪಿ -

ಕುಂದಾಪುರ ಉಪವಿಭಾಗದಲ್ಲಿ ಸಹಾಯಕ ಆಯುಕ್ತ ರಾಗಿ ಸೇವೆ ಸಲ್ಲಿಸಿ ಬೆಸ್ಕಾಂ ಪ್ರಧಾನ ವ್ಯವಸ್ಥಾಪಕರಾಗಿ ಬೆಂಗಳೂರಿಗೆ ವರ್ಗಾವಣೆಗೊಂಡ ರಶ್ಮಿ ಎಸ್.ಆರ್. ಅವರಿಗೆ ಕುಂದಾಪುರ ತಾಲೂಕು ಆಡಳಿತ ವತಿ ಯಿಂದ ಗೌರವಾರ್ಪಣೆ ಹಾಗೂ ಬೀಳ್ಕೊಡುಗೆ ಸಮಾರಂಭ ನಗರದ ತಾಲೂಕು ಆಡಳಿತ ಕಚೇರಿಯಲ್ಲಿ ನಡೆಯಿತು.

ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ರಶ್ಮಿ, ವೃತ್ತಿ ಜೀವನದಲ್ಲಿ ಕುಂದಾಪುರ ಉಪವಿಭಾಗವು ಎಂದಿಗೂ ಮರೆಯಲಾಗದ ನೆನಪುಗಳನ್ನು ನೀಡಿದೆ. ಚುನಾವಣೆ ಗಳು,ಎಸ್‌ಐಆರ್ ಸೇರಿದಂತೆ ಆಡಳಿತ ವ್ಯವಸ್ಥೆಯ ಪ್ರತಿಯೊಂದು ಕಾರ್ಯದಲ್ಲೂ ಯಾವುದೇ ಅಡೆತಡೆ ಯಿಲ್ಲದೆ ಸಹಕರಿಸಿದ ಕಚೇರಿಯ ಸಹೋದ್ಯೋಗಿಗಳ ಸೇವೆಯನ್ನು ಮರೆಯಲಾಗದು ಎಂದರು.

ದೈನಂದಿನ ಆಡಳಿತ ಯಂತ್ರ ಇಷ್ಟು ಸುಗಮವಾಗಿ ನಡೆಯಲು ನೀವೆಲ್ಲರು ಕಾರಣ. ಪ್ರತಿಯೊಂದು ಸಂದರ್ಭದಲ್ಲೂ ಕಚೇರಿಯ ಸಹೋದ್ಯೋಗಿಗಳು ಸಾಮೂಹಿಕ ಜವಾಬ್ದಾರಿಯೊಂದಿಗೆ ಕೆಲಸ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿ ಸಿದರು ಅಲ್ಲದೇ ಉಪವಿಭಾಗ ವ್ಯಾಪ್ತಿಯ ಎಲ್ಲ ತಾಲೂಕುಗಳ ತಹಶೀಲ್ದಾರರು, ರಾಜಕೀಯ ನಾಯಕರು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ವಾಹನ ಚಾಲಕರು ನೀಡಿದ ಸಹಕಾರಕ್ಕೆ ಧನ್ಯವಾದ ಸಲ್ಲಿಸಿದರು.

ನೂತನ ಸಹಾಯಕ ಆಯುಕ್ತ ಮಹೇಶ್ ಪಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸೇರಿದಂತೆ ವಿವಿಧ ತಾಲೂಕು ಗಳ ತಹಶೀಲ್ದಾರರು ಹಾಗೂ ಕಚೇರಿ ಸಿಬಂದಿಗಳು ಮಾತನಾಡಿದರು. ಉಪ ತಹಶೀಲ್ದಾರ್ ವಿನಯ್ ಕಾರ್ಯಕ್ರಮ ನಿರೂಪಿಸಿ, ವಂಡ್ಸೆ ಕಂದಾಯ ನಿರೀಕ್ಷಕ ರಾಘವೇಂದ್ರ ಡಿ. ವಂದಿಸಿದರು.

ಸುದ್ದಿ ಸಂತೆ ನ್ಯೂಸ್ ಉಡುಪಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವರ್ಗಾವಣೆ ಗೊಂಡ ಮಹಿಳಾ ಅಧಿಕಾರಿಗೆ ಸರ್ಕಾರಿ ನೌಕರರಿಂದ ಸನ್ಮಾನ ಗೌರವ ಬೀಳ್ಕೊಡುಗೆ.....ಸ್ಟಾಫ್ ರೂಂನಲ್ಲೇ ಪ್ರಾಧ್ಯಾಪಕನಿಗೆ ಗ್ರಹಚಾರ ಬಿಡಿಸಿದ ವಿದ್ಯಾರ್ಥಿನಿಯರುಸರ್ಕಾರಿ ನೌಕರರ ರಜೆಗೆ ತ್ವರಿತ ಸ್ವಯಂಚಾಲಿತ ಮಂಜೂರಾತಿ.....ರಜೆಗಾಗಿ ಮೇಲಾಧಿಕಾರಿಗಳ ಕಿರಿಕಿರಿ ತಪ್ಪಿಸಿದ ರಾಜ್ಯ ಸರ್ಕಾರ.....ಶಿಕ್ಷಕ ಪ್ರದೀಪ್ ಬಂಧನ..... ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿರುವ ಪೊಲೀಸರು.....ಸರ್ಕಾರಿ ಶಾಲೆಯ ಶಿಕ್ಷಕರಿಗೆ ಜೀನ್ಸ್​, ಟೀ-ಶರ್ಟ್ ಬ್ಯಾನ್​​.....ಫಾರ್ಮಲ್ ಉಡುಗೆ ಕಡ್ಡಾಯವೆಂದ ಶಿಕ್ಷಣ ಇಲಾಖೆ.....ರಾಜ್ಯ ಸರ್ಕಾರಿ ನೌಕರರಿಗೆ ಶಾಕ್ ನೀಡಿದ CM DKC.....ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ.....71 ಸಾಧಕರಿಗೆ ಒಲಿದ ಗೌರವ.....ಬ್ಯಾಂಕಾಕ್‌ನಲ್ಲೂ ಬಿಗ್ ಮಿಶ್ರಾ ಸಿಹಿ ಸಾಮ್ರಾಜ್ಯದ ವಿಸ್ತರಣೆಗೆ ಸಿದ್ಧತೆ.....ಶೀಘ್ರದಲ್ಲೇ ಥೈಲ್ಯಾಂಡ್ ರಾಜಧಾನಿಯಲ್ಲಿ ಆರಂಭವಾಗಲಿದೆ ಬಿಗ್ ಮಿಶ್ರಾ ಮಳಿಗೆ.....ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..... ಆರೋಗ್ಯ ಸಂಜೀವಿನಿ ಯೋಜನೆ ಮಹತ್ವದ ಅಪ್ಡೇಟ್.....ಸರ್ಕಾರಿ ನೌಕರರಿಗೆ ಬಂಪರ್‌ ಸುದ್ದಿ.....ಪ್ರತಿ 3 ತಿಂಗಳಿಗೊಮ್ಮೆ ಹೆಚ್ಚಳವಾಗಲಿದೆ ತುಟ್ಟಿಭತ್ಯೆ.....