LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಶೂ ಭಾಗ್ಯ.....

ಧಾರವಾಡ -

ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಶೂ ಭಾಗ್ಯ ಸಿಕ್ಕಿದ್ದು ಒಂದೇ ವಾರದಲ್ಲಿ ಶೂ ಗಳ ಗುಣಮಟ್ಟ ವು ಬಯ ಲಾಗಿದ್ದು ಇದಕ್ಕೆ ಪೋಷಕರು ವಿದ್ಯಾರ್ಥಿಗಳು ಆಕ್ರೋಶ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹೌದು

ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್​​ ವಿತರಣೆ ಗಾಗಿ ಸರ್ಕಾರ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಹಣ ವ್ಯಯಮಾಡುತ್ತೆ. ಹೀಗಿದ್ದರೂ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿರುವ ಶೂಗಳು ಕೇವಲ ವಾರ ಕಳೆಯುವುದರ ಒಳಗಾ ಗಿಯೇ ಕಿತ್ತು ಹೋಗಿರುವ ಘಟನೆಗಳು ಧಾರವಾಡ ದಲ್ಲಿ ವರದಿಯಾಗಿವೆ.ಶಾಲಾರಂಭವಾಗಿ ಬರೋಬ್ಬರಿ 3 ತಿಂಗಳ ಬಳಿಕ ಮಕ್ಕಳಿಗೆ ಶೂ ಮತ್ತು ಸಾಕ್ಸ್​​ ನೀಡ ಲಾಗಿತ್ತಾದರೂ ಅವುಗಳ ಗುಣಮಟ್ಟದ ಬಗ್ಗೆಯೇ ಈಗ ಪ್ರಶ್ನೆಗಳು ಹುಟ್ಟಿಕೊಂಡಿವೆ. ಹೀಗಾಗಿ ದುರ್ದೈವ ಎಂಬಂತೆ ಹರಿದ ಶೂಗಳನ್ನೇ ಧರಿಸಿ ಮಕ್ಕಳು ಶಾಲೆಗ ಳಿಗೆ ಬರಬೇಕಾದ ಸ್ಥಿತಿ ಉದ್ಭವಿಸಿದೆ.

ಈ ಬಾರಿ ಶೂ ವಿತರಣೆ ವ್ಯವಸ್ಥೆಯನ್ನೇ ಬದಲಿಸಿದ್ದ ಸರ್ಕಾರ ಕೆಲ ವರ್ಷಗಳ ಹಿಂದೆ ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ಉಚಿತವಾಗಿ ವಿತರಿಸೋ ಯೋಜನೆಯನ್ನು ಆರಂಭಿಸಿತ್ತು. ಕಳೆದ ವರ್ಷದವರೆಗೆ ಇವುಗಳನ್ನು ವಿತರಿಸುವ ಜವಾಬ್ದಾರಿ ಯನ್ನು ಆಯಾ ಶಾಲಾ ಸುಧಾರಣಾ ಸಮಿತಿ ಹಾಗೂ ಮುಖ್ಯೋಪಾಧ್ಯಾಯರಿಗೆ ನೀಡಲಾಗಿತ್ತು.

ಆಯಾ ಶಾಲೆಗಳ ಮಕ್ಕಳ ಲೆಕ್ಕದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿತ್ತು ಆದರೆ ಈ ಬಾರಿ ವ್ಯವಸ್ಥೆ ಯನ್ನೇ ಬದಲಿಸಿದ್ದ ಸರ್ಕಾರ, ರಾಜ್ಯಮಟ್ಟದಲ್ಲಿಯೇ ಗುತ್ತಿಗೆಗೆ ಆಹ್ವಾನಿಸಿ ಶೂ ವಿತರಣೆಯ ಜವಾಬ್ದಾರಿ ವಹಿಸಿತ್ತು ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಇಂತಹ ಹರಿದ ಶೂ ಧರಿಸಬೇಕಾದ ಸನ್ನಿವೇಶ ಎದುರಾಗಿದೆ ಎಂಬುದು ಪೋಷಕರ ಆರೋಪವಾಗಿದೆ.

ಕಳೆದ ವರ್ಷದವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದ ಶೂಗಳನ್ನು ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸುಧಾರಣಾ ಸಮಿತಿ ಸದಸ್ಯರು ಸ್ಥಳೀಯಮಟ್ಟದ ವ್ಯಾಪಾರಿಗಳಿಂದ ಖರೀದಿಸುತ್ತಿ ದ್ದರು. ಜೊತೆಗೆ ವ್ಯಾಪಾರಿಗಳಿಗೆ ವೃತ್ತಿಯಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಇರಬೇಕು ಮತ್ತು ಜಿಎಸ್​ಟಿ ಇರಲೇಬೇಕು ಅನ್ನೋ ನಿಯಮವಿತ್ತು.

ಅದರೊಂದಿಗೆ ಸ್ಥಳೀಯಮಟ್ಟದಲ್ಲಿಯೇ ವ್ಯಕ್ತಿ ನಿತ್ಯವೂ ಕಣ್ಣೆದುರಿಗೆ ಕಾಣುವ ಕಾರಣ ಅವರು ಉತ್ತಮ ಗುಣ ಮಟ್ಟದ ಶೂಗಳನ್ನು ನೀಡಬೇಕಿತ್ತು ಆದರೆ ಈ ಬಾರಿ ರಾಜ್ಯಮಟ್ಟದಲ್ಲಿಯೇ ಇವುಗಳ ಖರೀದಿಯಾಗಿದ್ದ ರಿಂದ ದೂರದ ಹಳ್ಳಿಗಳ ಶಾಲೆಗೆ ಬರೋ ಶೂ ಹಾಗೂ ಸಾಕ್ಸ್ ಗಳ ಗುಣಮಟ್ಟವನ್ನು ಪರೀಕ್ಷೆ ಮಾಡಿದ್ದಾದರೂ ಎಂಬ ಪ್ರಶ್ನೆ ಉದ್ಭವಿಸಿದೆ.

ಇನ್ನು ಈ ಬಗ್ಗೆ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಕೇಳಿದರೆ, ಕೆಲವು ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಕಂಡು ಬಂದಿದೆ. ಅಂತವರ ಶೂಗಳನ್ನು ಬದಲಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Ravikumar Ullagaddi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
OPS ಜಾರಿಯಾದರೆ ರಾಜ್ಯದ ಬೊಕ್ಕಸಕ್ಕೆ ಎಷ್ಟು ಹೊರೆ ಒಂದಿಷ್ಟು ಮಾಹಿತಿ.....IPS ಅಧಿಕಾರಿಗಳ ವರ್ಗಾವಣೆ ಪೊಲೀಸ್ ಇಲಾಖೆಯ ಆಡಳಿತ ಯಂತ್ರಕ್ಕೆ ಸರ್ಜರಿ......ಶಿಕ್ಷಕರ ಪ್ರತಿಭಟನೆ ಸಚಿವರಿಗೆ ಮನವಿ ಸಲ್ಲಿಕೆ ಸಿಡಿದೆದ್ದ ಶಿಕ್ಷಕರು.....ಸರ್ಕಾರಿ ಶಾಲೆಯಲ್ಲಿ ವಿಶೇಷವಾಗಿ ನಡೆಯಿತು ಗುರುವಂದನಾ ಕಾರ್ಯಕ್ರಮ ಸಾಧಕ ಶಿಕ್ಷಕ ಬಂಧುಗಳಿಗೆ ಸನ್ಮಾನ ಗೌರವ.....ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಶೂ ಭಾಗ್ಯ.....40 ಸಾಧಕ ಶಿಕ್ಷಕ ರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಅರ್ಥಪೂರ್ಣವಾಗಿ ನಡೆಯಿತು ಕಾರ್ಯಕ್ರಮ.....ಗುರುಭವನ‌ ನಿರ್ಮಾಣಕ್ಕೆ ಶಾಸಕರಿಗೆ ಮನವಿ ಸಲ್ಲಿಸಿದ ಶಿಕ್ಷಕರ ನಿಯೋಗ.....ಶಿಕ್ಷಕರ ದಿನಾಚರಣೆ ಗೆ ಶಿಕ್ಷಕರಿಂದ ವಿಶೇಷ ಭೋಜನ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆ ಆಚರಣೆ.....ಹೃದಯಾಘಾತದಿಂದ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಸಾವು ಶಿಕ್ಷಕರ ದಿನಾಚರಣೆ ಆಚರಣೆ ಬೆನ್ನಲ್ಲೇ ನಿಧನ.....ಚಹಾದ ಗುಟುಕಿಗೆ Big Mishra ಸ್ಪೆಷಲ್ ಸ್ನ್ಯಾಕ್ಸ್ ಚಹಾದ ಜೊತೆ ಗರಿಗರಿ ಉಪ್ಪು ಸಹಿತ ಗೋಡಂಬಿ ಸ್ಪೆಶಲ್ ಬಿಸ್ಕತ್ತು ಸಿದ್ದಪಡಿಸಿದ ಸಂಜಯ ಮಿಶ್ರಾ.....