ಧಾರವಾಡ -
ಹೃದಯಾಘಾತದಿಂದ ಸರ್ಕಾರಿ ಶಾಲೆಯ ಮುಖ್ಯೋ ಪಾಧ್ಯಾಯರೊಬ್ಬರು ಸಾವಿಗೀಡಾದ ಘಟನೆ ಧಾರವಾಡ ದಲ್ಲಿ ನಡೆದಿದೆ. ನಗರದ ಮಾಳಮಡ್ಡಿ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಅತ್ಯಂತ ನೋವಿನ ಪ್ರಸಂಗ ಜರುಗಿದೆ. ಕರ್ತವ್ಯ ನಿರತ ಮುಖ್ಯ ಶಿಕ್ಷಕರೊಬ್ಬರು ಕೆಲಸದ ನಡುವೆಯೇ ಹೃದಯಾ ಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.ಮೃತ ಶಿಕ್ಷಕರನ್ನು 59 ವರ್ಷದ ಐಐ ಮುಲ್ಲಾನವರ್ ಎಂದು ಗುರುತಿಸಲಾಗಿದೆ.
ಸೆ .4 ರಂದು ಅವರು ಎಂದಿನಂತೆ ಶಾಲೆಗೆ ಆಗಮಿಸಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಎದೆನೋವು ಕಾಣಿಸಿ ಕೊಂಡು ಕುಸಿದು ಬಿದ್ದಿದ್ದಾರೆ ಪರಿಸ್ಥಿತಿಯ ಗಂಭೀರ ತೆಯನ್ನು ಅರಿತ ಸಹೋದ್ಯೋಗಿ ಶಿಕ್ಷಕರು ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ.ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಅವರ ಆರೋಗ್ಯ ಸ್ಥಿತಿ ಸುಧಾರಿಸಲಿಲ್ಲ. ಈ ಘಟನೆ ನಡೆದ ಕ್ಷಣದಲ್ಲಿ ಶಾಲೆ ಯಲ್ಲಿ ಮಕ್ಕಳು ಮತ್ತು ಸಿಬ್ಬಂದಿ ಇದ್ದರು
ಎಲ್ಲರೂ ಆತಂಕಕ್ಕೊಳಗಾಗಿದ್ದರು. ವೈದ್ಯಕೀಯ ತಂಡ ಎಲ್ಲ ಪ್ರಯತ್ನಗಳನ್ನು ಮಾಡಿದರೂ ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಮರಳಲಿಲ್ಲ. ಆಸ್ಪತ್ರೆಯಲ್ಲಿ ಎರಡು ಗಂಟೆಗಳ ಕಾಲ ಹೋರಾಟ ನಡೆದರೂ ಪ್ರಯೋಜನ ವಾಗಲಿಲ್ಲ.ಹೀಗಾಗಿ ಚಿಕಿತ್ಸೆ ಫಲಿಸದೆ ಅ ಸಂಜೆ ವೇಳೆಗೆ ಮುಲ್ಲಾನವರ್ ಅವರು ವಿಧಿವಶರಾ ಗಿದ್ದಾರೆ
ವಿಪರ್ಯಾಸವೆಂದರೆ ಶಿಕ್ಷಕರ ದಿನಾಚರಣೆಯಂದು ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ದಶಕಗಳ ಕಾಲ ಶಿಕ್ಷಣ ಸೇವೆ ಸಲ್ಲಿಸಿದ್ದ ಅವರ ಅಗಲಿಕೆಗೆ ಸಹ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಪೋಷಕರು ಕಂಬನಿ ಮಿಡಿದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ.....