LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರಕಾರಿ ಶಾಲಾ ಶಿಕ್ಷಕ ಬಂಧನ.....ವಿಚಾರಣೆ ಮಾಡುತ್ತಿರುವ ಪೊಲೀಸರು.....

ಗುಜರಾತ್ -

ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಎರಡು ವರ್ಷಗಳಿಂದ 8ನೇ ತರಗತಿಯ ಇತರ ಮೂವರು ವಿದ್ಯಾರ್ಥಿನಿಯರಿಗೂ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಸರಕಾರಿ ಶಾಲಾ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ರಾಮಶಂಕರ್ ಪಾಂಡ್ಯ ಎಂದು ಗುರುತಿಸಲಾಗಿದೆ. ಈತ ಅಮ್ರೇಲಿ ಜಿಲ್ಲೆಯ ಜಾಫ್ರಾಬಾದ್ ಪ್ರದೇಶದ ಗ್ರಾಮವೊಂದರ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಭಾವನಗರ ಜಿಲ್ಲೆಯ ತಲಾಜಾ ತಾಲೂಕಿನ ವೆಲಾವದರ್ ನಿವಾಸಿಯಾಗಿರುವ ಈತ, ಈ ಹಿಂದೆ ಗಿರ್ ಸೋಮನಾಥ್ ಜಿಲ್ಲೆಯಲ್ಲಿ ಪೊಲೀಸ್ ಸಿಬಂದಿಯಾಗಿಯೂ ಕೆಲಸ ಮಾಡಿದ್ದ ಎಂದು ತಿಳಿದುಬಂದಿದೆ.

ಆರೋಪಿ ಶಿಕ್ಷಕ ಚಹಾ ತಯಾರಿಸುವ ನೆಪದಲ್ಲಿ ವಿದ್ಯಾರ್ಥಿನಿಯರನ್ನು ಸಿಬಂದಿ ಕೊಠಡಿಗೆ ಕರೆಸಿ ಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ವಿದ್ಯಾರ್ಥಿ ನಿಯೊಬ್ಬಳು ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ಪೋಷಕರಿಗೆ ತಿಳಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಶಿಕ್ಷಕ ದೀರ್ಘಕಾಲದಿಂದ ತನಗೆ ಪದೇಪದೆ ಲೈಂಗಿಕ ಕಿರುಕುಳ ನೀಡುತ್ತಿದ್ದು, ಜುಲೈ 21ರಂದು ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ಆರೋಪಿ ಸಿದ್ದಾಳೆ.

ಪೋಷಕರು ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ಅತ್ಯಾಚಾರ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ರಾಜುಲಾ ಪೊಲೀಸರು ತಿಳಿಸಿದ್ದಾರೆ ದೂರಿನ ಬೆನ್ನಲ್ಲೇ ಜಾಫ್ರಾಬಾದ್ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ತನಿಖೆಯ ವೇಳೆ ಅದೇ ಶಾಲೆಯ ಇತರ ಮೂವರು ವಿದ್ಯಾರ್ಥಿನಿಯರೂ ಆರೋಪಿ ಶಿಕ್ಷಕನಿಂದ ಇದೇ ರೀತಿಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಆರೋಪ ಕೇಳಿಬಂದಿದೆ. ಇದರೊಂದಿಗೆ ಸಂತ್ರಸ್ತ ಬಾಲಕಿಯರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಆರೋಪಿಯು ಶಾಲೆಯ ಇತರ ವಿದ್ಯಾರ್ಥಿನಿಯರ ಮೇಲೂ ಅತ್ಯಾಚಾರ ಎಸಗಿದ್ದಾನೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಕ್ಕಳ ಸುರಕ್ಷತೆ ಮತ್ತು ಜಾಗೃತಿ ಹೆಚ್ಚಿಸುವ ಉದ್ದೇಶ ದಿಂದ ಅಮ್ರೇಲಿ ಪೊಲೀಸರು ಹಮ್ಮಿಕೊಂಡಿರುವ 'ಮಿಷನ್ ಸ್ಮೈಲ್' ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.ಈ ಕಾರ್ಯಕ್ರಮದಡಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ ಕುರಿತು ಅರಿವು ಮೂಡಿಸಲಾಗುತ್ತಿದೆ. ಸುರಕ್ಷಿತ ಹಾಗೂ ಅಸುರಕ್ಷಿತ ದೈಹಿಕ ಸ್ಪರ್ಶದ ನಡುವಿನ ವ್ಯತ್ಯಾಸವನ್ನು ತಿಳಿಸುವುದರ ಜತೆಗೆ, ಅನುಚಿತ ವರ್ತನೆ ಎದುರಾದಲ್ಲಿ ಪೋಷಕರು ಅಥವಾ ವಿಶ್ವಾಸಾರ್ಹ ವ್ಯಕ್ತಿಗಳಿಗೆ ಮಾಹಿತಿ ನೀಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಲಾಗುತ್ತಿದೆ.

ಈ ಜಾಗೃತಿ ಕಾರ್ಯಕ್ರಮದಿಂದ ಧೈರ್ಯ ಪಡೆದ ಬಾಲಕಿ ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ಪೋಷಕರಿಗೆ ತಿಳಿಸಿರುವ ಸಾಧ್ಯತೆಯಿದೆ. ವಿಷಯ ವನ್ನು ಗಂಭೀರವಾಗಿ ಪರಿಗಣಿಸಿದ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದಲ್ಲಿ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಳ್ಳ ಲಾಗಿದೆ.

ಸುದ್ದಿ ಸಂತೆ ನ್ಯೂಸ್ ಗುಜರಾತ್......

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಿಕೆ..... ಅಧಿಕೃತ ಆದೇಶ ಮಾಡಿ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ.....ನಾಪತ್ತೆಯಾಗಿದ್ದ ಸರ್ಕಾರಿ ಶಾಲಾ ಶಿಕ್ಷಕಿ ಪತ್ತೆ.....ನಿಟ್ಟುಸಿರು ಬಿಟ್ಟ ಕುಟುಂಬದವರು.....ಸರ್ಕಾರಿ ನೌಕರರು ಕೇಂದ್ರಸ್ಥಾನದಲ್ಲಿ ಕಡ್ಡಾಯವಾಗಿ ವಾಸ್ತವ್ಯ.....ರಾತ್ರಿ ಹಾಜರಾತಿ ಕಡ್ಡಾಯಗೊಳಿಸಿ ಸರ್ಕಾರದ ‌ಆದೇಶ.....ಬಿಸಿಯೂಟ ಯೋಜನೆ ಹೊಸ ಅಧ್ಯಯನಕ್ಕೆ ಮುಂದಾದ ಶಿಕ್ಷಣ ಇಲಾಖೆ.....ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಶಿಕ್ಷಕ ಸೇರಿ ಮೂವರ ಮೇಲೆ ದಾಖಲಾಯಿತು ದೂರು.....BEO ಕಚೇರಿ ಅವ್ಯವಹಾರ ಸ್ಪೋಟಕ ವಿಚಾರ ಗಳು ಪತ್ತೆ.....ತನಿಖೆಯಲ್ಲಿ ಪತ್ತೆಯಾದ ಸ್ಪೋಟಕ ವಿಚಾರ ಗಳು.....ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ.....ವರದಿಯಲ್ಲಿ ಬಹಿರಂಗ ಗೊಂಡ ಮಾಹಿತಿ.....KPSC ಶಾಲೆಗಳಿಗೆ ಪ್ರತ್ಯೇಕ ಶಿಕ್ಷಕರ ನೇಮಕ.....ನೇಮಕದ ಮಾಹಿತಿ ನೀಡಿದ ಶಿಕ್ಷಣ ಸಚಿವರು.....ವಿಶೇಷ ಸಾಂದರ್ಭಿಕ ರಜೆ ಘೋಷಣೆ..... ರಜೆ ಆದೇಶ ಮಾಡಿದ ರಾಜ್ಯ ಸರ್ಕಾರ.....