LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಕೊರೊನಾ ಲಸಿಕೆಯನ್ನೇ ಭರವಸೆ ಮಾಡಿಕೊಂಡ ಗ್ರಾಮ ಪಂಚಾಯತ್ ಅಭ್ಯರ್ಥಿ

ಧಾರವಾಡ - ಈಗಾಗಲೇ ದೇಶದ ಜನತೆ ನೇರೆಯ ರಾಷ್ಟ್ರದ ಕರೋನಾ ವೈರಸ್‌ನಿಂದ ಹೈರಾಣಾಗಿ ಹೋಗಿದ್ದಾರೆ. ಅದನ್ನು ಈಗ ಕಟ್ಟಿ ಹಾಕಲು ದೇಶದ ವೈದ್ಯರು ಹಾಗೂ ದೇಶದ ಅರೋಗ್ಯ ಸಚಿವರುಗಳು ಅಷ್ಟೇ ಏಕೆ, ದೇಶದ ಪ್ರಧಾನಿ ಅವರು ಕೂಡಾ ದಿನ ಬೆಳಗಾದರೆ ಯೋಚನೆ ಮಾಡುತ್ತಿದ್ದಾರೆ. ನೇರೆಯ ರಾಷ್ಟ್ರವಾದ ಚೀನಾದಿಂದ ಜನ್ಮ ತಾಳಿರುವ ಕೊರೊನಾ ಮಾಹಾಮಾರಿಗೆ ಈಗಾಗಲೇ ವೈದ್ಯ ಲೋಕವೇ ಇನ್ನೂ ಚಿಕಿತ್ಸೆಯನ್ನು ಕಂಡು ಹಿಡಿಯಲು ಹಗಲು ರಾತ್ರಿ ಶ್ರಮಿಸುತ್ತಿವೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಗ್ರಾಮ ಪಂಚಾಯತಿ ಅಭ್ಯರ್ಥಿಯೊಬ್ಬ ಈಗ ಚುನಾವಣೆ ಭರವಸೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿಕೊಂಡಿಕೊಂಡಿದ್ದಾನೆ. ಕೊವೀಡ್ ಲಸಿಕೆಯನ್ನು ತ್ವರಿತವಾಗಿ ತಮ್ಮಗೆ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಘೋಷಣೆ ಮಾಡಿಕೊಂಡಿದ್ದಾನೆ.

ಹೌದು ಈ ಮೇಲೆ ಕೊವೀಡ್ ಲಸಿಕೆಯ ಕುರಿತು ಘೋಷಣೆ ಮಾಡಿಕೊಂಡಿರುವ ಗ್ರಾಮ ಪಂಚಾಯತಿ ಅಭ್ಯರ್ಥಿಯ ಹೆಸರು ಇಮಾಮಸಾಹೇಬ ಪಕ್ರುಸಾಬ ನಧಾಫ. ಧಾರವಾಡ ತಾಲೂಕಿನ ಹಾರೋಬೇಳವಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕಬ್ಬೇನೂರ ವಾರ್ಡ ನಂ 1 ರಲ್ಲಿ ಸ್ಪರ್ಧೆ ಮಾಡಿದ್ದಾರೆ. ಆದರೆ ಚುನಾವಣೆಗೆ ಸ್ಪರ್ಧೆ ಮಾಡಿರುವ ಇವರು‌ ತಮ್ಮ ಮತದಾರಿಗೆ ನೀಡುವ ಕರ ಪತ್ರದಲ್ಲಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ, ದಕ್ಷ, ಸ್ವಚ್ಚ, ಪ್ರಾಮಾಣಿಕ ಸೇವೆಯೊಂದಿಗೆ ಗ್ರಾಮ ನೈರ್ಮಲ್ಯ ಸೇರಿದಂತೆ ಇನ್ನಿತ್ತರ ಭರವಸೆಗಳಲ್ಲಿ ಕೊವೀಡ್ ಲಸಿಕೆಯನ್ನು ತ್ವರಿತವಾಗಿ ಕೊಡಲು ಶ್ರಮಿಸುತ್ತೇನೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಕುಸೂ ಹುಟ್ಟುವ ಮುಂಚೆ ಕುಲಾಯಿ ಹೋಲಿಸೊಕ್ಕೆ ಹೋಗಿದ್ದಾರೆ ಗ್ರಾಮ ಪಂಚಾಯತಿ ಅಭ್ಯರ್ಥಿ.

ಅಭ್ಯರ್ಥಿ

ಈಗಾಗಲೇ ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ಲಸಿಕೆಯನ್ನು ಕಳೆದ ನಾಲ್ಕೈದು ತಿಂಗಳಿನಿಂದ ಪ್ರಾಯೋಗಿಕವಾಗಿ ಯಶಸ್ವಿಗೊಳಿಸಲು ಶ್ರಮಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕೆಲವು ಜನಪ್ರತಿನಿಧಿಗಳು ಇದನ್ನೇ ಬಂಡಿವಾಳ ಮಾಡಿಕೊಂಡು ನಾವು ಕೊವೀಡ್ ಲಸಿಕೆಯನ್ನು ತ್ವರಿತವಾಗಿ ನೀಡುವ ನಿಟ್ಟಿನಲ್ಲಿ ಶ್ರಮವಹಿಸುವುದಾಗಿ ಹೇಳಿಕೊಳ್ಳುತ್ತಿವೆ. ಅಲ್ಲದೆ ಈ ಹಿಂದೆ ಒಂದು ರಾಜಕೀಯ ಪಕ್ಷವು ಇದೇ ರೀತಿ ಹೇಳಿ ಸಾರ್ವಜನಿಕವಾಗಿ ನಗೆಪಾಟಕ್ಕೆ ಇಡಲಾಗಿತ್ತು. ಈಗ ನಮ್ಮ ನಡುವೆಯೇ ಗ್ರಾಮ ಪಂಚಾಯತಿ ಅಭ್ಯರ್ಥಿಯಾದ ಇಮಾಮಸಾಹೇಬ ಅವರು ಕರೋನಾ ಲಸಿಕೆಯನ್ನು ತ್ವರಿತವಾಗಿ ಸಿಗುವಂತೆ ಮಾಡುತ್ತೆನೆ ಹೇಳುವುದರ ಮೂಲಕ ಎಡವಟ್ಟು ಮಾಡಿಕೊಂಡಿದ್ದಾರೆ.

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಈಗ ಲಸಿಕೆಯ ಕುರಿತು ಹಗಲು ರಾತ್ರಿ ಯೋಚನೆಯಲ್ಲಿ ತೋಡಗಿರುವಾಗ. ಈ ಮಹಾಶಯ ಎಲ್ಲಿಂದ ಚಿಕಿತ್ಸೆಯನ್ನು ತಂದು ತ್ವರಿತವಾಗಿ ನೀಡುತ್ತಾನೋ ಗೋತ್ತಾಗುತ್ತಿಲ್ಲ. ಅಲ್ಲದೆ ಚಿಕಿತ್ಸೆಯ ಲಸಿಕೆಯನ್ನು ಕೊಲ್ಡ್ ಸ್ಟೊರೆಜ್‌ನಲ್ಲಿ ಇಡಬೇಕಾ ಇಂತಷ್ಟು ಕೊಲ್ಡ್ ಇರಬೇಕು ಎನ್ನುವ ಮಾತುಗಳನ್ನು ಈಗಾಗಲೇ ಕೇಳಿ ಬರುತ್ತಿವೆ. ಆದರೆ ಇವರು ಸಂತೆಯಲ್ಲಿ ಲಸಿಕೆ ಸಿಗುವ ರೀತಿಯಲ್ಲಿ ತ್ವರಿತವಾಗಿ ಗ್ರಾಮಸ್ಥರಿಗೆ ಕೊರೊನಾ ಲಸಿಕೆ ನೀಡುವುದಾಗಿ ಹೇಳಿಕೊಂಡಿರುವುದು ಈಗ ಸಾರ್ವಜನಿಕರಲ್ಲಿ ಇಂತಹ ಅಭ್ಯರ್ಥಿಗಳು ನಮ್ಮಲ್ಲಿಯು ಇದ್ದಾರೋ ಎನ್ನುವ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ದೇಶದ ಜನ ಕೊರೊನಾ ಮಾಹಾಮಾರಿಯ ಹೊಡೆತಕ್ಕೆ ಆರ್ಥಿಕವಾಗಿ, ಮಾನಸಿಕವಾಗಿ ತತ್ತರಿಸಿ ಹೋಗಿದ್ದು, ಈಗ ಜನಪ್ರತಿನಿಧಿಗಳು ಆಗುವವರು ಇದನ್ನು ಬಂಡವಾಳ ಮಾಡಿಕೊಳ್ಳುತ್ತರುವುದು ಎಷ್ಟರ ಮಟ್ಟಿಗೆ ಸರಿ ಹೇಳಿ. ಲಸಿಕೆಯನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಎಲ್ಲಿಯು ಯಶಸ್ವಿ ಕಂಡಿಲ್ಲಾ, ಇಂತಹ ಸಂದರ್ಭದಲ್ಲಿ ಈ ಗ್ರಾಮ ಪಂಚಾಯತಿ ಅಭ್ಯರ್ಥಿಯಾಗುವ ಅಭ್ಯರ್ಥಿಗಳು ಕೂಡಾ ಕತ್ತಲೆಯಲ್ಲಿ ಹಗಲು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹವರ ಬುದ್ದಿಗೆ ಅದೇನ ಹೇಳಬೇಕು ಎನ್ನುವುದು ಮತದಾರರೆ ಹೇಳಬೇಕು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....